ಇಟಲಿಯ ವೆನಿಸ್‌ನಲ್ಲಿ ಸೇತುವೆಯಿಂದ ರೈಲ್ವೆ ಹಳಿ ಮೇಲೆ ಬಿದ್ದ ಬಸ್, 21 ಮಂದಿ ಸಾವು
ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಬಸ್ ಸೇತುವೆಯಿಂದ ರೈಲ್ವೆ ಹಳಿ ಮೇಲೆ ಬಿದ್ದ ಪರಿಣಾಮ 21 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಟಲಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ವೆನಿಸ್ನ ಮೆಸ್ಟ್ರೆಯಲ್ಲಿ ಬಸ್ ಪಲ್ಟಿಯಾಗಿ ಹಳಿ ಮೇಲೆ ಬಿದ್ದಿದೆ. 21 ಮಂದಿ ಸಾವನ್ನಪ್ಪಿದ್ದು ಕೇವಲ 15 ಮಂದಿಯನ್ನು ಮಾತ್ರ ಉಳಿಸಲು ಸಾಧ್ಯವಾಯಿತು.

ಅಕ್ಟೋಬರ್ 3 ರಂದು ಸಂಜೆ ಈ ಘಟನೆ ಸಂಭವಿಸಿದೆ, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಯುರೋಪಿಯನ್ ಯೂನಿಯನ್ ಅಧ್ಯಕ್ಷ ನಿಕೋಲಸ್ ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರ ದುಃಖ ನನಗೆ ಅರ್ಥವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಬಸ್ ಚಾಲಕ ಅಪಘಾತಕ್ಕೂ ಮುನ್ನ ಅಸ್ವಸ್ಥನಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಡೆಗೋಡೆಯನ್ನು ಮುರಿದು ಬಸ್ ಸೇತುವೆಯಿಂದ ಕೆಳಗೆ ಹಾರಿದೆ. ಸುಮಾರು 100 ಅಡಿ ಆಳಕ್ಕೆ ಬಿದ್ದಿತ್ತು. ಇದೇ ವೇಳೆ ವಿಸ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡಿತ್ತು. ವಿದ್ಯುತ್ ತಂತಿ ತಗುಲಿ ಮೀಥೇನ್ನಿಂದಾಗಿ ಬೆಂಕಿ ವೇಗವಾಗಿ ವ್ಯಾಪಿಸಿದೆ,ಸ ಆವಿನ ಸಂಖ್ಯೆ ಹೆಚ್ಚಾಗಬಹುದು ಎಂದು ನಿಕೋಲಸ್ ಹೇಳಿದ್ದಾರೆ.
ಮತ್ತಷ್ಟು ಓದಿ: Mexico Bus Accident: ಬಸ್ ಕಂದಕಕ್ಕೆ ಬಿದ್ದು ಭಾರತೀಯರು ಸೇರಿ 18 ಮಂದಿ ಸಾವು, 20 ಜನರಿಗೆ ಗಂಭೀರ ಗಾಯ
ಸೇತುವೆಯ ಮೂಲಕ ವೆನಿಸ್‌ಗೆ ಸಂಪರ್ಕ ಕಲ್ಪಿಸುವ ಮೆಸ್ಟ್ರೆ ಜಿಲ್ಲೆಯ ರೈಲು ಮಾರ್ಗಗಳ ಸಮೀಪ ಬಸ್ ರಸ್ತೆಯಿಂದ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಚಾಲಕ ಕೂಡ ಮೃತಪಟ್ಟಿದ್ದಾರೆ. ಮೃತರಲ್ಲಿ ಐವರು ಉಕ್ರೇನಿಯನ್ನರು ಮತ್ತು ಒಬ್ಬರು ಜರ್ಮನ್ ಎಂದು ವೆನಿಸ್ನ ಪ್ರಿಫೆಕ್ಟ್ ಮಿಚೆಲ್ ಡಿ ಬ್ಯಾರಿ, ಆಂತರಿಕ ಸಚಿವಾಲಯದ ಸ್ಥಳೀಯ ಪ್ರತಿನಿಧಿ ಹೇಳಿದ್ದಾರೆ.
ಬಸ್‌ನಲ್ಲಿ ಫ್ರಾನ್ಸ್ ಮತ್ತು ಕ್ರೊಯೇಷಿಯಾದ ಪ್ರಯಾಣಿಕರು ಕೂಡ ಇದ್ದರು ಎಂದು ಇಟಾಲಿಯನ್ ಸುದ್ದಿ ಸಂಸ್ಥೆ ANSA ವರದಿ ಮಾಡಿದೆ. ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಗ್ನಿಶಾಮಕ ದಳದವರು ಬಹಳಷ್ಟು ದೇಹಗಳನ್ನು ಹೊರತೆಗೆಯಲು ಕಷ್ಟಪಟ್ಟರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ