AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 20 ಕೆಜಿ ತೂಕ ಕಳೆದುಕೊಂಡ ಕಿಮ್​ ಜಾಂಗ್​ ಉನ್​; ಸರ್ವಾಧಿಕಾರಿಗೆ ಆಗಿದ್ದೇನು ಎಂದು ಪತ್ತೆ ಹಚ್ಚಿದ ಗುಪ್ತಚರ ದಳ

Kim Jong Un: 37ವರ್ಷದ ಕಿಮ್ ಜಾಂಗ್​ ಉನ್ ಮೇ ತಿಂಗಳಲ್ಲಿ ಜನರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಜೂನ್​ನಲ್ಲಿ ಕಾಣಿಸಿಕೊಂಡಾಗ ಅಚ್ಚರಿ ಪಡುವ ಸರದಿ ಜನರದ್ದಾಗಿತ್ತು. ಊಹೆಗೂ ಮೀರಿ ಸಪೂರ ಆಗಿದ್ದರು.

ಬರೋಬ್ಬರಿ 20 ಕೆಜಿ ತೂಕ ಕಳೆದುಕೊಂಡ ಕಿಮ್​ ಜಾಂಗ್​ ಉನ್​; ಸರ್ವಾಧಿಕಾರಿಗೆ ಆಗಿದ್ದೇನು ಎಂದು ಪತ್ತೆ ಹಚ್ಚಿದ ಗುಪ್ತಚರ ದಳ
ಕಿಮ್​ ಜಾಂಗ್​ ಉನ್​
Lakshmi Hegde
|

Updated on: Jul 08, 2021 | 4:01 PM

Share

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಅವರು ತುಂಬ ಸಪೂರ ಆಗಿಬಿಟ್ಟಿದ್ದಾರೆ ಎಂಬುದೊಂದು ವಿಚಾರ ಇತ್ತೀಚೆಗೆ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ಚರ್ಚೆಯಾಗುತ್ತಿದ್ದಾರೆ. ಕಿಮ್​ ಜಾಂಗ್​ ಉನ್​ ಮೊದಲಿನಂತಿಲ್ಲ..ಮೈಕೈ ತುಂಬಿಕೊಂಡು ಇಲ್ಲ. ಅವರ ತೂಕ ಇಳಿದಿದೆ. ಏನಾದರೂ ಆರೋಗ್ಯ ಸಮಸ್ಯೆ ಆಗಿದ್ದಿರಬಹುದು ಅಥವಾ ಡಯಟ್ ಮಾಡುತ್ತಿರಬಹುದು ಎಂಬಿತ್ಯಾದಿ ಚರ್ಚೆಗಳು ರಾಜಕೀಯ ವಿಶ್ಲೇಷಕರ ಮಟ್ಟದಲ್ಲೇ ನಡೆಯುತ್ತಿದೆ. ಅದರಲ್ಲೂ ಕಿಮ್ ಜಾಂಗ್​ ಉನ್​ ಮೊದಲಿದ್ದುದಕ್ಕೂ, ಈಗಿರುವುದಕ್ಕೂ ಸ್ಪಷ್ಟ ವ್ಯತ್ಯಾಸ ತಿಳಿಸುವ ಫೋಟೋ, ವಿಡಿಯೋಗಳು ವೈರಲ್​ ಆದ ಬೆನ್ನಲ್ಲೇ ಇನ್ನಷ್ಟು ಅನುಮಾನಗಳು ಹುಟ್ಟುಕೊಂಡಿವೆ.

ಇದೀಗ ಗುಪ್ತಚರ ದಳವೊಂದು ನೀಡಿದ ಮಾಹಿತಿಯನ್ನು ದಕ್ಷಿಣ ಕೊರಿಯಾ ಜನಪ್ರತಿನಿಧಿಯೊಬ್ಬರು ಬಹಿರಂಗಪಡಿಸಿದ್ದಾರೆ. ಅದರ ಪ್ರಕಾರನ ಉತ್ತರ ಕೊರಿಯಾ ನಾಯಕ ಕಿಮ್​ ಜಾಂಗ್​ ಉನ್​ ಅವರು ಸುಮಾರು 44 ಪೌಂಡ್​ ಅಂದರೆ ಅಜಮಾಸು 20 ಕೆಜಿ ತೂಕ ಕಳೆದುಕೊಂಡಿದ್ದಾರೆ. ಆದರೆ ಆಡಳಿತದ ಮೇಲೆ ಪರಿಣಾಮ ಬೀರುವಂಥ ಗಂಭೀರ ಆರೋಗ್ಯ ಸಮಸ್ಯೆಯೇನೂ ಅವರಿಗೆ ಇಲ್ಲ ಎಂದು ದಕ್ಷಿಣ ಕೊರಿಯಾ ಜನಪ್ರತಿನಿಧಿ ಕಿಮ್ ಬೈಂಗ್ ಕೀ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಿಮ್ ಜಾಂಗ್​ ಉನ್​ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯೇನಾದರೂ ಇದ್ದರೆ ಅದು ಗೊತ್ತಾಗುತ್ತದೆ. ಅವರ ಚಿಕಿತ್ಸೆಯ ಜವಾಬ್ದಾರಿ ಹೊತ್ತಿರುವ ಆಸ್ಪತ್ರೆಗೆ ಅಗತ್ಯ ಔಷಧಿಗಳು ಆಮದಾಗುತ್ತವೆ. ಒಂದಲ್ಲ ಒಂದು ಕಾರಣದಿಂದ ತಿಳಿದೇ ತಿಳಿಯುತ್ತದೆ. ಆದರೆ ಅಂಥ ಲಕ್ಷಣಗಳೇನೂ ಕಂಡುಬಂದಿಲ್ಲ ಎಂದು ಕಿಮ್​ ಬೈಂಗ್​ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರು ಹಲವು ತಾಸುಗಳ ಸಭೆ ನಡೆಸುತ್ತಾರೆ..ಸಹಜವಾಗಿಯೇ ನಡೆದಾಡುತ್ತಾರೆ. ಹಾಗಾಗಿ ಅವರಿಗೆ ಆರೋಗ್ಯ ಸಮಸ್ಯೆ ಏನೂ ಆದಂತಿಲ್ಲ ಎಂದೂ ಹೇಳಿದ್ದಾರೆ. 37ವರ್ಷದ ಕಿಮ್ ಜಾಂಗ್​ ಉನ್ ಮೇ ತಿಂಗಳಲ್ಲಿ ಜನರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಜೂನ್​ನಲ್ಲಿ ಕಾಣಿಸಿಕೊಂಡಾಗ ಅಚ್ಚರಿ ಪಡುವ ಸರದಿ ಜನರದ್ದಾಗಿತ್ತು. ಊಹೆಗೂ ಮೀರಿ ಸಪೂರ ಆಗಿದ್ದರು. ಮುಖವೆಲ್ಲ ಇಳಿದಿತ್ತು.

ನಿರಂಕುಶಾಧಿಕಾರಿ ಕಿಮ್​ ಜಾಂಗ್​ ಉನ್​ ರಹಸ್ಯ ಆಡಳಿತದ ಮೇಲೆ ದಕ್ಷಿಣ ಕೊರಿಯಾದ ಪತ್ತೇದಾರಿ ಏಜೆನ್ಸಿಗಳು ಸದಾ ಒಂದು ಕಣ್ಣಿಟ್ಟಿರುತ್ತವೆ. ಈ ಗುಪ್ತಚರ ದಳಗಳು ಹೇಳುವ ಪ್ರಕಾರ, ಕಿಮ್​ ಜಾಂಗ್​ ಉನ್ ಸುಮಾರು 140 ಕೆಜಿ ತೂಕವಿದ್ದರು. ಅವರ ಕುಟುಂಬಕ್ಕೆ ಹೃದ್ರೋಗ ಇತಿಹಾಸವಿದ್ದು, ಹಲವರು ಈ ರೋಗಕ್ಕೆ ತುತ್ತಾಗಿದ್ದಾರೆ. ಹಾಗಾಗಿಯೇ ಈಗ ಕಿಮ್​ ಜಾಂಗ್​ ಉನ್​ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ತೂಕ ಇಳಿಸುತ್ತಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: ಚೆನ್ನೈನಲ್ಲಿ ಅರ್ಜುನ್​ ಸರ್ಜಾ ನಿರ್ಮಿಸಿದ ಆಂಜನೇಯ ಸ್ವಾಮಿ ದೇವಾಲಯದ ದರ್ಶನ ಪಡೆದ ಜ್ಯೂ. ಚಿರು

North Korean leader Kim Jong Un lost 44 pounds Says South Korean Spy Agency

Follow Us
Lakshmi Hegde
Lakshmi Hegde
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್