ಈಗ ಸ್ಮಾರ್ಟ್​ಫೋನ್​ ಮೂಲಕವೇ ಕೊರೊನಾ ವೈರಸ್​ ಪತ್ತೆ ಹಚ್ಚಬಹುದು!

ನನ್ನ ಗೆಳೆಯನೋರ್ವನಿಗೆ ಕೊರೊನಾ ಟೆಸ್ಟ್​​ ಮಾಡಲಾಗಿತ್ತು. ಈ ಪರೀಕ್ಷೆ ನಡೆದ 8 ದಿನಗಳ ನಂತರ ವರದಿ ನೀಡಲಾಗಿತ್ತು. ಹೀಗಾಗಿ, ನಾವು ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದೇವೆ ಎಂದು ತಜ್ಞ ತಿಳಿಸಿದ್ದಾರೆ.

ಈಗ ಸ್ಮಾರ್ಟ್​ಫೋನ್​ ಮೂಲಕವೇ ಕೊರೊನಾ ವೈರಸ್​ ಪತ್ತೆ ಹಚ್ಚಬಹುದು!
ಪ್ರಾತಿನಿಧಿಕ ಚಿತ್ರ
Edited By: ಸಾಧು ಶ್ರೀನಾಥ್​

Updated on: Jan 30, 2021 | 5:05 PM

ಕೊರೊನಾ ವೈರಸ್​ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರೆ ಹತ್ತಿರದ ಆಸ್ಪತ್ರೆಗೆ ತೆರಳಬೇಕು. ಅಲ್ಲಿ ಗಂಟೆಗಟ್ಟಲೆ ಕಾಯಬೇಕು. ಇಷ್ಟಕ್ಕೇ ನಿಂತಿಲ್ಲ. ವೈದ್ಯರು ನಿಮ್ಮ ಗಂಟಲು ದ್ರವ ತೆಗೆದುಕೊಂಡು ಪರಿಕ್ಷೆಯನ್ನೇನೋ ಮಾಡುತ್ತಾರೆ. ಆದರೆ, ಇದರ ವರದಿ ನೀಡೋಕೆ ಹಲವು ದಿನಗಳನ್ನೇ ತೆಗೆದುಕೊಳ್ಳುತ್ತಾರೆ. ಈ ತಲೆನೋವನ್ನು ಕಡಿಮೆ ಮಾಡಲು ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕರು ಮೊಬೈಲ್​ ಮೂಲಕವೇ ಕೊರೊನಾ ಪರೀಕ್ಷೆ ನಡೆಸಲು ಹೊಸ ತಂತ್ರಜ್ಞಾನ ಅಭಿವೃದ್ಧಿ ಮಾಡಿದ್ದಾರೆ.

ಅರಿಜೋನಾ ವಿಶ್ವವಿದ್ಯಾಲಯದ ಜಿಯಾಂಗ್-ಯಿಯೋಲ್ ಯೂನ್ ಈ ಸಂಶೋಧನೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಅವರು, ಕೊರೊನಾ ವೈರಸ್​ ಪತ್ತೆ ಹಚ್ಚಲು ನಾವು ನಮ್ಮದೇ ಹೊಸ ಅನ್ವೇಷಣೆ ಮಾಡಿದ್ದೇವೆ. ನಿಮ್ಮ ಸ್ಮಾರ್ಟ್​ಫೋನ್​ ಬಳಕೆ ಮಾಡಿಕೊಂಡೇ ನೀವು ಕೊರೊನಾ ವೈರಸ್​ ಪತ್ತೆ ಹಚ್ಚಬಹುದು ಎಂದಿದ್ದಾರೆ ತಜ್ಞರು.

ತಜ್ಞರು ಅಭಿವೃದ್ಧಿ ಮಾಡಿರುವ ಸಂಶೋಧನೆ ಪ್ರಕಾರ ಸ್ಮಾರ್ಟ್​ಫೋನ್​ಗೆ ಒಂದು ಮೈಕ್ರೋಸ್ಕೋಪ್​ ಅವಶ್ಯಕತೆ ಇದೆ. ಇದರ ಜೊತೆಗೆ ನಿಮಗೆ ಮೈಕ್ರೋಫ್ಲೂಯಿಡ್ ಪೇಪರ್ ಕೂಡ ಬೇಕು. ನಂತರ ಗಂಟಲು ದ್ರವವನ್ನು ಮೈಕ್ರೋಫ್ಲೂಯಿಡ್ ಪೇಪರ್ ಮೇಲೆ ಹಾಕಿದಾಗ ಅಲ್ಲಿ ಆಗುವ ರಿಯಾಕ್ಷನ್​ ಆಧರಿಸಿ ನಿಮಗೆ ಕೊರೊನಾ ಇದೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಂಡು ಹಿಡಿಯಬಹುದಾಗಿದೆ. ಅಲ್ಲಿ ಆಗುವ ರಿಯಾಕ್ಷನ್ನು ಮೊಬೈಲ್​ನಲ್ಲಿರುವ ಮೈಕ್ರೋಸ್ಕೋಪ್ ಬಳಸಿಕೊಂಡು ನೋಡಬಹುದು. ಈ ಪರೀಕ್ಷೆಯನ್ನು ಕೇವಲ 45 ರೂಪಾಯಿಯಲ್ಲಿ ಮಾಡಬಹುದು.

ನನ್ನ ಗೆಳೆಯನೋರ್ವನಿಗೆ ಕೊರೊನಾ ಟೆಸ್ಟ್​​ ಮಾಡಲಾಗಿತ್ತು. ಈ ಪರೀಕ್ಷೆ ನಡೆದ 8 ದಿನಗಳ ನಂತರ ವರದಿ ನೀಡಲಾಗಿತ್ತು. ಹೀಗಾಗಿ, ನಾವು ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದೇವೆ ಎಂದು ಯಿಯೋಲ್ ಯೂನ್ ತಿಳಿಸಿದ್ದಾರೆ.

ಕೊರೊನಾ ನಂತರದ ಮೊದಲ ಘಟಿಕೋತ್ಸವಕ್ಕೆ ಸಾಕ್ಷಿಯಾಗ್ತಿದೆ ಬೆಂಗಳೂರು ವಿವಿ! ಇಸ್ರೋ ಮುಖ್ಯಸ್ಥ ಶಿವನ್ ಮುಖ್ಯ ಅತಿಥಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us