ಅಮೇರಿಕದ ಅಧ್ಯಕ್ಷ ಚುನಾವಣೆಗೆ ಮುನ್ನ, ಕಳೆದ ವರ್ಷದ ಮೇ ತಿಂಗಳಿನಲ್ಲಿ ನಡೆದ ಜಾರ್ಜ್ ಫ್ಲೈಡ್ ಎಂಬ ಕಪ್ಪು ವರ್ಣೀಯನ ಹತ್ಯೆ ನಡೆಯಿತಲ್ಲ. ಆ ಜಾಗದಿಂದ 16 ಕಿಲೋ ಮೀಟರ್ ದೂರದಲ್ಲಿ ಮತ್ತೋರ್ವ ಕಪ್ಪು ವರ್ಣೀಯನನ್ನು ರವಿವಾರ ಗುಂಡಿಟ್ಟು ಸಾಯಿಸಲಾಗಿದೆ. ಇದ ಕೂಡ ಮಿನಿಯಾಪೊಲೀಸ್ ನಗರದ ಭಾಗದಲ್ಲಿ ನಡೆದಿರುವುದು ವಿಶೇಷವಾಗಿದೆ. ನಿನ್ನೆಯ ಘಟನೆಯಲ್ಲಿ ಸತ್ತಿರುವ ವ್ಯಕ್ತಿಯನ್ನು 20-ವರ್ಷದ ಡಾಂಟೇ ರೈಟ್ ಎಂದು ಗುರುತಿಸಲಾಗಿದೆ, ಈ ಘಟನೆಯ ಬೆನ್ನಲ್ಲೆ ಆ ನಗರದಲ್ಲಿ ಉದ್ವಗ್ನ ಪರಿಸ್ಥಿತಿ ಉದ್ಭವಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ತಾವು ಹೇಳಿದಂತೆ ಕೇಳಿಲ್ಲ ಎಂಬ ಸಿಟ್ಟಿಗೆ ಮಿನಿಯಾಪೊಲೀಸ್ ನಗರದ ಪೊಲೀಸರು ಫ್ಲೈಡ್ನನ್ನು ಉಸಿರುಗಟ್ಟಿಸಿ ಸಾಯಿಸಿದ್ದರು. ಅದಾದ ನಂತರ, ಇಡೀ ಅಮೇರಿಕಾ ಮಾತ್ರವಲ್ಲ ಯುರೋಪಿನಲ್ಲಿ ಬ್ಲಾಕ್ ಲೈವ್ಸ್ ಮ್ಯಾಟರ್ ಎಂಬ ಚಳುವಳಿ ನಡೆಯಿತು. ಅಮೇರಿಕ, ಹಿಂದೆಂದು ಕಂಡರಿಯದ ಹಿಂಸಾಚಾರವನ್ನು ನೋಡುವಂತಾಯಿತು.
ರವಿವಾರದ ಘಟನೆಯ ವಿವರ ಏನು?
ಮಿನಿಯಾಪೊಲೀಸ್ ನಗರದ ಹೊರವಲಯದ ಬ್ರೂಕ್ಲಿನ್ ಉಪನಗರದಲ್ಲಿ, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಕಾರೊಂದು ನಿಂತಿರುತ್ತದೆ. ಬಹಳ ದಿನಗಳಿಂದ ಕೋರ್ಟ್ ವಾರೆಂಟ್ ಇದ್ದರೂ ತಲೆ ತಪ್ಪಿಸಿಕೊಂಡು ಓಡಾಡುತ್ತಿರುವ ವ್ಯಕ್ತಿ ಅಲ್ಲಿಗೆ ಬಂದಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಬ್ರೂಕ್ಲಿನ್ ನಗರದ ಪೊಲೀಸರು ಮಿನ್ನಾಸೋಟಾ ನಗರ ಅಪರಾಧಿ ಹುಡುಕಾಟ ತಂಡ (Minnesota Bureau of Crime Apprehension) ಕ್ಕೆ ನೀಡುತ್ತಾರೆ. ಆ ಮಾಹಿತಿ ಆಧರಿಸಿ, ಮಿನ್ನಾಸೋಟಾ ನಗರ ಅಪರಾಧಿ ಹುಡುಕಾಟ ತಂಡದ ಸದಸ್ಯರು ಅಲ್ಲಿಗೆ ಬರುತ್ತಾರೆ, ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೊಲೀಸರ ಹೇಳಿಕೆ ಪ್ರಕಾರ, ತಾವು ಆ ಡ್ರೈವರ್ಗೆ ನಿಲ್ಲಲ್ಲಿ ಹೇಳಿದೆವು ಮತ್ತು ತಮಗೆ ಸಹಕಾರ ನೀಡಲು ಹೇಳದೆವು. ಆದರೆ, ಆತ ಇದ್ದಕ್ಕಿದ್ದಂತೆ ತನ್ನ ಕಾರನ್ನು ಸ್ಟಾರ್ಟ್ ಮಾಡಿಕೊಂಡು ಹೊರಟ. ಆಗ ಓರ್ವ ಅಧಿಕಾರಿ ಹಾರಿಸಿದ ಗುಂಡು ರೈಟ್ಗೆ ತಗುಲಿದೆ. ಆದರೆ, ಕಾರಿನ ಡ್ರೈವರ್ ಸುಮಾರು ದೂರ ಚಲಿಸಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ. ಆತನ ಜೊತಯಿದ್ದ ಓರ್ವ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ರು ತಿಳಿಸಿದ್ದಾರೆ.
ಇದಾದ ಸ್ವಲ್ಪ ಹೊತ್ತಿನಲ್ಲಿ, ಪೊಲೀಸ್ ಸ್ಟೇಶನ್ ಮುಂದೆ ಜಮಾಯಿಸಿದ್ದ ಕಪ್ಪು ವರ್ಣೀಯ ಜನ ಬ್ಲಾಕ್ ಲೈವ್ಸ್ ಮ್ಯಾಟರ್ ಎಂದು ಕೂಗಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಆ ರಾಜ್ಯದ ರಾಜ್ಯಪಾಲ (governor), ಟಾಮ್ ವಾಲ್ಝ ಈ ಕುರಿತು ಟ್ವೀಟ್ ಮಾಡಿ ತಾನು ಪರಿಸ್ಥತಿಯನ್ನು ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.
I am closely monitoring the situation in Brooklyn Center. Gwen and I are praying for Daunte Wright’s family as our state mourns another life of a Black man taken by law enforcement.
— Governor Tim Walz (@GovTimWalz) April 12, 2021
ಬ್ಲಾಕ್ ಲೈವ್ಸ್ ಮ್ಯಾಟರ್ ಕೇಸು
ಕಳೆದ ವರ್ಷ ಸತ್ತ ಜಾರ್ಜ್ ಫ್ಲೈಡ್ ಕುಟುಂಬಕ್ಕೆ ಈಗಾಗಲೇ 20 ಮಿಲಿಯನ್ ಡಾಲರ್ ಹಣವನ್ನು ಅಲ್ಲಿನ ಆಡಳಿತ ನೀಡಿದೆ. ಈಗ ಫ್ಲೈಡ್ ಅವರ ಸಾವಿನ ಕೇಸಿನ ವಿಚಾರಣೆ ಕೋರ್ಟ್ ನಲ್ಲಿ ಪ್ರಾರಂಭಾವಾಗಿದೆ. ಈ ಕೇಸಿನಲ್ಲಿ, ಫ್ಲಾಯ್ಡ್ನನ್ನು ಮಲಗಿಸಿ ಆತನ ಕುತ್ತಿಗೆ ಮೇಲೆ ತನ್ನ ಮೊಣಕಾಲು ಊರಿ ಒತ್ತಿದ್ದ ಕೊಂದಿರುವ ಅಧಿಕಾರಿಯ ವಿರುದ್ಧ ಅತ್ಯಂತ ತೀವ್ರತರದ ಆರೋಪ ಮಾಡಲಾಗಿದೆ.
ಇದನ್ನೂ ಓದಿ:
2020ರ ಟ್ವೀಟ್ ಪರ್ಸನ್ ಟ್ರಂಪ್, ಟಾಪ್ 10ರಲ್ಲಿ ಬಿಡೆನ್-ಮೋದಿಗೂ ಸ್ಥಾನ
Published On - 1:25 pm, Mon, 12 April 21