AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2020ರ ಟ್ವೀಟ್​ ಪರ್ಸನ್ ಟ್ರಂಪ್, ಟಾಪ್​ 10ರಲ್ಲಿ ಬಿಡೆನ್-ಮೋದಿಗೂ ಸ್ಥಾನ

ಟಾಪ್-10ರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು 7ನೇ ಸ್ಥಾನದಲ್ಲಿದೆ ಎಂದು ಟ್ವಿಟರ್​ನ ವಾರ್ಷಿಕ ಪರಾಮರ್ಶೆ ವರದಿ ತಿಳಿಸಿದೆ.

2020ರ ಟ್ವೀಟ್​ ಪರ್ಸನ್ ಟ್ರಂಪ್, ಟಾಪ್​ 10ರಲ್ಲಿ ಬಿಡೆನ್-ಮೋದಿಗೂ ಸ್ಥಾನ
ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 10, 2020 | 4:29 PM

Share

ವಾಷಿಂಗ್​ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರ ಹೆಸರುಗಳು 2020ರ ಟಾಪ್​-10 ಟ್ವೀಟ್​ಗಳಲ್ಲಿ ಕ್ರಮವಾಗಿ ಮೊದಲ ಮತ್ತು 2ನೇ ಸ್ಥಾನ ಪಡೆದಿವೆ. ಟಾಪ್-10ರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು 7ನೇ ಸ್ಥಾನದಲ್ಲಿದೆ ಎಂದು ಟ್ವಿಟರ್​ನ ವಾರ್ಷಿಕ ಪರಾಮರ್ಶೆ ವರದಿ ತಿಳಿಸಿದೆ.

ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ನಿಯೋಜಿತರಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಈ ಪಟ್ಟಿಯಲ್ಲಿರುವ ಏಕೈಕ ಮಹಿಳೆ. ಅವರ ಹೆಸರು 10ನೇ ಸ್ಥಾನದಲ್ಲಿದೆ.

ಫೇಸ್​ಬುಕ್ ಮೂಲಕ ಜನರು ವಿಶ್ವ ನಾಯಕರಿಂದ ಬದಲಾವಣೆ ಮತ್ತು ಉತ್ತರದಾಯಿತ್ವಕ್ಕೆ ಒತ್ತಾಯಿಸುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ 2020ರಲ್ಲಿ ಸುಮಾರು 70 ಕೋಟಿ ಟ್ವೀಟ್​ಗಳು ಬಂದಿವೆ. ಡೊನಾಲ್ಡ್​ ಟ್ರಂಪ್, ಜೋಬಿಡೆನ್, ಬರಾಕ್ ಒಬಾಮ, ನರೇಂದ್ರ ಮೋದಿ ಮತ್ತು ಕಮಲಾ ಹ್ಯಾರಿಸ್​ ಹೆಸರುಗಳು ಜಾಗತಿಕವಾಗಿ ಹೆಚ್ಚು ಬಳಕೆಯಾಗಿವೆ ಎಂದು ಟ್ವಿಟರ್​ನ ಗ್ರಾಹಕ ಸಂವಹನ ವಿಭಾಗದ ಮುಖ್ಯಸ್ಥರಾದ ಟ್ರೇಸಿ ಮೆಕ್​ಗ್ರಾ ಹೇಳಿದ್ದಾರೆ.

2020ರ ಜನಪ್ರಿಯ ಹ್ಯಾಷ್​ಟ್ಯಾಗ್ #COVID19 ಆಗಿತ್ತು. ಇದರ ಜೊತೆಗೆ #StayHome ಹ್ಯಾಷ್​ಟ್ಯಾಗ್ ಹೊತ್ತ ಟ್ವೀಟ್​ಗಳು ಸಹ ಗಮನಾರ್ಹ ಪ್ರಮಾಣದಲ್ಲಿ ಟ್ವೀಟ್ ಆಗಿವೆ. ಕೊರೊನಾ ಸೋಂಕಿಗೆ ಸಂಬಂಧಿಸಿದ ಸುಮಾರು 40 ಕೋಟಿ ಟ್ವೀಟ್​ಗಳು ಪೋಸ್ಟ್ ಆಗಿವೆ. #StayHome ಅತಿಹೆಚ್ಚು ಬಾರಿ ಟ್ವೀಟ್ ಆದ ಹ್ಯಾಷ್​​ಟ್ಯಾಗ್​ಗಳಲ್ಲಿ 3ನೇ ಸ್ಥಾನದಲ್ಲಿದೆ.

2ನೇ ಸ್ಥಾನದಲ್ಲಿರುವ ಹ್ಯಾಷ್​ಟ್ಯಾಗ್ #BlackLivesMatter. ಪೊಲೀಸ್ ದೌರ್ಜನ್ಯದಿಂದ ಜಾರ್ಜ್​ ಫ್ಲಾಯ್ಡ್​ ನಿಧನರಾದ ನಂತರ #BlackLivesMatter ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಪ್ರತಿಭಟನೆಯ ಅಸ್ತ್ರವಾಯಿತು. ಅತಿಹೆಚ್ಚು ಬಾರಿ ಟ್ವೀಟ್ ಆದ ಹೆಸರುಗಳ ಪಟ್ಟಿಯಲ್ಲಿ ಫ್ಲಾಯ್ಡ್​ Floyd 3ನೇ ಸ್ಥಾನದಲ್ಲಿದೆ.

Google Search | ಗೂಗಲ್​ನಲ್ಲಿ ಈ ವರ್ಷ ಹೆಚ್ಚು ಜನರು ಹುಡುಕಿದ್ದೇನು?

ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು