ಭಾರತದ ವಿರುದ್ಧದ ಭಯೋತ್ಪಾದನಾ ಸಂಘಟನೆಗೆ ಪಾಕಿಸ್ತಾನ ಆಶ್ರಯ ನೀಡುತ್ತಲೇ ಇದೆ; ಅಮೆರಿಕದ ಸಂಶೋಧನಾ ವರದಿ

ಆಪರೇಷನ್ ಸಿಂಧೂರ್ ನಂತರ ಕೂಡ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುವುದನ್ನು ಮುಂದುವರೆಸಿದೆ ಎಂದು ಯುಎಸ್ ಕಾಂಗ್ರೆಸ್ ಸಂಶೋಧನಾ ವರದಿ ಎಚ್ಚರಿಕೆ ನೀಡಿದೆ. ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುವುದನ್ನು ಮುಂದುವರೆಸಿದೆ ಎಂದು ಯುಎಸ್ ಕಾಂಗ್ರೆಸ್ ವರದಿ ಹೇಳಿದೆ. ಜೆಇಎಂ 500 ಪಾಕಿಸ್ತಾನದಲ್ಲಿ ಸಶಸ್ತ್ರ ಬೆಂಬಲಿಗರನ್ನು ಹೊಂದಿದೆ. ಹಿಜ್ಬುಲ್ ಮುಜಾಹಿದ್ದೀನ್ 1500 ಕೇಡರ್ ಹೊಂದಿದೆ. ಪಾಕಿಸ್ತಾನ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ಸೋಲಿಸುವಲ್ಲಿ ಕಾರ್ಯಾಚರಣೆಗಳು ವಿಫಲವಾಗಿವೆ ಎಂದು ಈ ವರದಿ ತಿಳಿಸಿದೆ. 

ಭಾರತದ ವಿರುದ್ಧದ ಭಯೋತ್ಪಾದನಾ ಸಂಘಟನೆಗೆ ಪಾಕಿಸ್ತಾನ ಆಶ್ರಯ ನೀಡುತ್ತಲೇ ಇದೆ; ಅಮೆರಿಕದ ಸಂಶೋಧನಾ ವರದಿ
Shehbaz Sharif
Image Credit source: AP

Updated on: Mar 28, 2026 | 3:15 PM

ಇಸ್ಲಮಾಬಾದ್, ಮಾರ್ಚ್ 28: ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ನಡೆಸಿತ್ತು. ಆದರೆ, ಪಾಕಿಸ್ತಾನ (Pakistan) ತಮ್ಮ ದೇಶದಲ್ಲಿ ಯಾವುದೇ ಉಗ್ರರಿಗೆ ನೆಲೆ ಕಲ್ಪಿಸಿಲ್ಲ ಎಂದು ಹೇಳಿಕೊಂಡಿತ್ತು. ಅಲ್ಲದೆ, ಭಾರತ ಉಗ್ರರ ಮೇಲೆ ದಾಳಿ ನಡೆಸಿಲ್ಲ, ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಪಾಕ್ ಸುಳ್ಳು ಹೇಳಿಕೆ ನೀಡಿತ್ತು. ಇದಾದ ನಂತರ ಪಾಕಿಸ್ತಾನದ ಮೇಲೆ ಸಮರ ಸಾರಿದ್ದ ಭಾರತದ ಕಾರ್ಯಾಚರಣೆಯಿಂದ ಕಂಗೆಟ್ಟಿದ್ದ ಪಾಕಿಸ್ತಾನ ಕದನವಿರಾಮಕ್ಕೆ ಮನವಿ ಮಾಡಿತ್ತು. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿದ ಬಳಿಕ ಭಾರತ ಕದನವಿರಾಮಕ್ಕೆ ಒಪ್ಪಿಕೊಂಡರೂ ಇಂದಿಗೂ ಪಾಕಿಸ್ತಾನ ಮಾತ್ರ ಭಾರತದ ವಿರುದ್ಧ ಕತ್ತಿ ಮಸೆಯುವುದು ನಿಲ್ಲಿಸಿಲ್ಲ.

ಯುಎಸ್ ಕಾಂಗ್ರೆಸ್ ಸಂಶೋಧನಾ ಸೇವೆ (CRS)ಯ ಹೊಸ ವರದಿಯು ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳಿಗೆ ನಿರಂತರವಾಗಿ ಆಶ್ರಯ ನೀಡುತ್ತಿದೆ ಎಂದು ಘೋಷಿಸಿದೆ. ಹಾಗೇ, ಈ ವರದಿಯಲ್ಲಿ ಭಾರತದ ಉಲ್ಲೇಖವನ್ನೂ ಮಾಡಲಾಗಿದ್ದು, ಭಾರತದ ಮೇಲೆ ಅದರಲ್ಲೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಮೇಲೆ ದೀರ್ಘಕಾಲದಿಂದ ಕಣ್ಣು ನೆಟ್ಟಿರುವ ಉಗ್ರರ ಗುಂಪುಗಳು ಪಾಕಿಸ್ತಾನದ ನೆಲದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿವೆ ಎಂದು ಈ ವರದಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಮಾರ್ಚ್ 25ರ ಸಿಆರ್​​ಎಸ್​ “ಇನ್ ಫೋಕಸ್” ವರದಿ ಪಾಕಿಸ್ತಾನದಲ್ಲಿರುವ 15 ಉಗ್ರ ಸಂಘಟನೆಗಳ ಹೆಸರುಗಳನ್ನು ಉಲ್ಲೇಖಿಸಿದೆ. ಅವುಗಳಲ್ಲಿ ಹಲವು ಅಮೆರಿಕದಿಂದ ವಿದೇಶಿ ಭಯೋತ್ಪಾದಕ ಸಂಘಟನೆಗಳು (ಎಫ್‌ಟಿಒ) ಎಂದು ಘೋಷಿಸಲ್ಪಟ್ಟಿದೆ. ಅವುಗಳಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ), ಹರಕತ್-ಉಲ್ ಜಿಹಾದ್ ಇಸ್ಲಾಮಿ (ಎಚ್‌ಯುಜಿ), ಹರಕತ್ ಉಲ್-ಮುಜಾಹಿದೀನ್ (ಎಚ್‌ಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ)ನಂತಹ ಭಯೋತ್ಪಾದಕ ಗುಂಪುಗಳು ಸೇರಿವೆ.

ದಕ್ಷಿಣ ಏಷ್ಯಾ ತಜ್ಞ ಕೆ. ಅಲನ್ ಕ್ರೋನ್‌ಸ್ಟಾಡ್ ಸಿದ್ಧಪಡಿಸಿದ ಸಿಆರ್‌ಎಸ್ ವರದಿಯು ಪಾಕಿಸ್ತಾನವನ್ನು ಬಲಿಪಶು ದೇಶ ಎಂದು ಚಿತ್ರಿಸಿದೆ. ಆದರೂ ಅದು ಭಾರತವನ್ನು ದೀರ್ಘಕಾಲದಿಂದ ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಜಾಲಗಳನ್ನು ಹೊಂದಿದೆ ಎಂದು ಕೂಡ ಉಲ್ಲೇಖಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us