Imran Khan | ಬಹುಮತ ಸಾಬೀತುಪಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್​; 2 ಮತ ಹೆಚ್ಚೇ ಕೊಡುಗೆಯಾಗಿ ಸಿಕ್ತು ಮಾಜಿ ಕ್ರಿಕೆಟಿಗನಿಗೆ

| Updated By: ಸಾಧು ಶ್ರೀನಾಥ್​

Updated on: Mar 06, 2021 | 2:25 PM

Pakistan Govt: ‘ಸಂಸತ್​ನಲ್ಲಿ ಇಮ್ರಾನ್ ಖಾನ್ ಬಹುಮತ ಪಡೆದಿದ್ದು, ಇದೀಗ ದೇಶದ ಜನರ ಬೆಂಬಲ ಪಡೆಯುವುದು ಸರ್ಕಾರದ ಜವಾಬ್ದಾರಿ’ ಎಂದು ಪಾಕಿಸ್ತಾನ ಪ್ರಮುಖ ರಾಜಕೀಯ ಮುಖಂಡರೋರ್ವರು ಇಮ್ರಾನ್ ಖಾನ್​ ಅವರನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ್ದಾರೆ.

Imran Khan | ಬಹುಮತ ಸಾಬೀತುಪಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್​; 2 ಮತ ಹೆಚ್ಚೇ ಕೊಡುಗೆಯಾಗಿ ಸಿಕ್ತು ಮಾಜಿ ಕ್ರಿಕೆಟಿಗನಿಗೆ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
Follow us on

ಇಸ್ಲಾಮಾಬಾದ್: ವಿಶೇಷ ಅಧಿವೇಷನದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸಮತ ಸಾಬೀತುಪಡಿಸಿದ್ದಾರೆ. ಇಮ್ರಾನ್​ ಖಾನ್​ ಸರ್ಕಾರದ ಪರ 178 ಮತಗಳು ಚಲಾವಣೆಯಾಗಿದ್ದು, ಪಾಕಿಸ್ತಾನದ ಸದ್ಯದ ಸರ್ಕಾರ ಅಪಾಯದ ತೂಗುಗತ್ತಿಯಿಂದ ಹೊರಬಂದಿದೆ. ಬಹುಮತ ಸಾಬೀತಿಗೆ 172 ಮತಗಳ ಅಗತ್ಯವಿದ್ದು, 178 ಮತಗಳನ್ನು ಪಡೆಯುವ ಮೂಲಕ ಇಮ್ರಾನ್ ಖಾನ್ ಸರ್ಕಾರ ಬಹುಮತ ಸಾಬೀತುಪಡಿಸಿದೆ. 8 ವರ್ಷಗಳ ಹಿಂದೆ 176 ಸ್ಥಾನಗಳೊಂದಿಗೆ ಅಧಿಕಾರ ಪಡೆದಿದ್ದ ಇಮ್ರಾನ್ ಖಾನ್ ಬಹುಮತ ಸಾಬೀತಿನಲ್ಲಿ ಇನ್ನೂ ಎರಡು ಹೆಚ್ಚು ಮತಗಳನ್ನು ಗಳಿಸಿದಂತಾಗಿದೆ. ಈ ವಿಷಯವನ್ನು ಉಲ್ಲೇಖಿಸಿ ಪಾಕಿಸ್ತಾನ ಸಂಸತ್​ನ ಸ್ಪೀಕರ್ ಸರ್ಕಾರ ಬಹುಮತ ಪಡೆದಿರುವುದಾಗಿ ಘೋಷಿಸಿದ್ದಾರೆ.

‘ಸಂಸತ್​ನಲ್ಲಿ ಇಮ್ರಾನ್ ಖಾನ್ ಬಹುಮತ ಪಡೆದಿದ್ದು, ಇದೀಗ ದೇಶದ ಜನರ ಬೆಂಬಲ ಪಡೆಯುವುದು ಸರ್ಕಾರದ ಜವಾಬ್ದಾರಿ’ ಎಂದು ಪಾಕಿಸ್ತಾನ ಪ್ರಮುಖ ರಾಜಕೀಯ ಮುಖಂಡರೋರ್ವರು ಇಮ್ರಾನ್ ಖಾನ್​ ಅವರನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಅತಿಮುಖ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷವು ಸೋಲನುಭವಿಸಿತ್ತು. ಇಮ್ರಾನ್ ಸಂಪುಟದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರನ್ನು ಪಾಕಿಸ್ತಾನ ಸಂಸತ್ತಿನ ಪ್ರಮುಖ ಪ್ರತಿಪಕ್ಷ ಪಾಕಿಸ್ತಾನ್ ಪೀಪಲ್ಸ್​ ಪಾರ್ಟಿಯ (ಪಿಪಿಪಿ) ಮುಖ್ಯಸ್ಥರೂ ಆಗಿರುವ ಮಾಜಿ ಪ್ರಧಾನಿ ಸೈಯದ್ ಯೂಸುಫ್ ರಾಜಾ ಗಿಲಾನಿ ಸೋಲಿಸಿದ್ದರು. ಈ ಫಲಿತಾಂಶವು ಇಮ್ರಾನ್ ಖಾನ್ ಮತ್ತು ಅವರ ಪಿಟಿಐ ಪಕ್ಷಕ್ಕೆ ವ್ಯಾಪಕ ಹಿನ್ನಡೆ ತಂದೊಡ್ಡಿತ್ತು.ಗೌಪ್ಯ ಮತದಾನದಲ್ಲಿ ಕೆಲ ಸದಸ್ಯರು ಅಥವಾ ಮಿತ್ರಪಕ್ಷಗಳು ಪಕ್ಷಾಂತರ ಮಾಡಿರುವ ಸಾಧ್ಯತೆ ಕಂಡುಬಂದಿತ್ತು.

ಆದರೆ, ಈ ಎಲ್ಲ ಸಮಸ್ಯೆಗಳನ್ನೂ ಮೀರಿ ಇಮ್ರಾನ್ ಖಾನ್ ಸರ್ಕಾರ ಬಹುಮತ ಸಾಬೀತುಪಡಿಡಿಸದೆ. ಅಲ್ಲದೇ ತನ್ನ ಪಕ್ಷದ ಸದಸ್ಯರ ಸಂಖ್ಯೆಗಿಂತ ಎರಡು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ.

ಇದನ್ನೂ ಓದಿ: ಪಾಕ್​ ಕೈಹಿಡಿದ ಭಾರತ: ಆತ್ಮನಿರ್ಭರ್ ಕೊರೊನಾ ಲಸಿಕೆ ಇದೀಗ ಪಾಕಿಸ್ತಾನಕ್ಕೂ ಪೂರೈಕೆ!

ನಾವು ಎಂದಿಗೂ ಶಾಂತಿಯ ಪರ; ಭಾರತ-ಪಾಕಿಸ್ತಾನ ಕದನವಿರಾಮ ಒಪ್ಪಂದ ಸ್ವಾಗತಿಸಿ ಇಮ್ರಾನ್ ಖಾನ್ ಟ್ವೀಟ್