ಮದ್ಯ ಮಾರಾಟ ಮತ್ತು ಸೇವನೆ ನಿಷೇಧಿತ ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಮಲಮಗ ಲಿಕ್ಕರ್​​ನೊಂದಿಗೆ ಸಿಕ್ಕಿಬಿದ್ದ!

ಮನೇಕಾ ಅವರನ್ನು ತಮ್ಮೊಂದಿಗೆ ಲಿಕ್ಕರ್ ಹೊಂದಿದ್ದ ಕಾರಣ ಬಂಧಿಸಲಾಗಿತ್ತು ಮತ್ತು ಬಂಧನಕ್ಕೊಳಗಾದ ಬಳಿಕ ಅವರು ತಾನು ಪಾಕಿಸ್ತಾನದ ಪ್ರಥಮ ಮಹಿಳೆಯ ಮಗನಾಗಿದ್ದು ಬಂಧಿಸಿರುವುದಕ್ಕೆ ಭಾರಿ ದಂಡ ತೆರಬೇಕಾಗುತ್ತದೆ ಅಂತ ಭದ್ರತಾ ಅಧಿಕಾರಿಗಳನ್ನು ಹೆದರಿಸಿದರೆಂದು ಅಧಿಕಾರಿ ಹೇಳಿದ್ದಾರೆ.

ಮದ್ಯ ಮಾರಾಟ ಮತ್ತು ಸೇವನೆ ನಿಷೇಧಿತ ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಮಲಮಗ ಲಿಕ್ಕರ್​​ನೊಂದಿಗೆ ಸಿಕ್ಕಿಬಿದ್ದ!
ಇಮ್ರಾನ್ ಖಾನ್ ಮಲ ಮಗ ಮುಸಾ ಮನೇಕ
Follow us
TV9 Web
| Updated By: shivaprasad.hs

Updated on:Feb 24, 2022 | 7:36 AM

ಲಾಹೋರ್: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ಅವರ ಮಲಮಗ (stepson) ಮತ್ತು ಅವರ ಜೊತೆ ಇನ್ನಿಬ್ಬರು ಮದ್ಯದ ಬಾಟಲಿಗಳ ಜೊತೆ ಪೊಲೀಸರಿಗೆ ಸಿಕ್ಕಿಬಿದ್ದ ನಂತರ ‘ಮೇಲಿನವರ’ ಆದೇಶದ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ. ಲಾಹೋರಿನ (Lahore) ಪೊಲೀಸ್ ಠಾಣೆಯೊಂದರಲ್ಲಿ ದಾಖಲಾಗಿರುವ ಎಫ್ ಐ ಆರ್ ಪ್ರಕಾರ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬು ಅವರು ತಮ್ಮ ಹಿಂದಿನ ಪತಿಯಿಂದ ಪಡೆದಿರುವ ಮಗ ಮುಸಾ ಮನೇಕಾ ಮತ್ತು ಅವರ ಇಬ್ಬರು ಸ್ನೇಹಿತರನ್ನು ಸೋಮವಾರದಂದು ಗಡ್ಡಾಫಿ ಸ್ಟೇಡಿಯಂ ಬಳಿ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾದ ಬಳಿಕ ಬಂಧಿಸಲಾಗಿತ್ತು.

‘ದೇಶದ ಪ್ರಥಮ ಮಹಿಳೆಯ ಮಗ ಸೇರಿದಂತೆ ಮೂವರು ಯುವಕರನ್ನು ಮೇಲಿನ ಆದೇಶದ ಹಿನ್ನೆಲೆಯಲ್ಲಿ ಮೇರೆಗೆ ಬಂಧಿಸಿದ ದಿನವೇ ಬಿಡುಗಡೆ ಮಾಡಲಾಯಿತು. ಅರೋಪಿಗಳ ಕುಟುಂಬಗಳ ವೈಯಕ್ತಿಕ ಬಾಂಡ್ ಮತ್ತು ಕಾನೂನಿನ ಇತರ ಕ್ರಮಗಳನ್ನು ಪೂರೈಸಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು,’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಮಂಗಳವಾರ ತಿಳಿಸಿದರು.

ಮನೇಕಾ ಅವರನ್ನು ತಮ್ಮೊಂದಿಗೆ ಲಿಕ್ಕರ್ ಹೊಂದಿದ್ದ ಕಾರಣ ಬಂಧಿಸಲಾಗಿತ್ತು ಮತ್ತು ಬಂಧನಕ್ಕೊಳಗಾದ ಬಳಿಕ ಅವರು ತಾನು ಪಾಕಿಸ್ತಾನದ ಪ್ರಥಮ ಮಹಿಳೆಯ ಮಗನಾಗಿದ್ದು ಬಂಧಿಸಿರುವುದಕ್ಕೆ ಭಾರಿ ದಂಡ ತೆರಬೇಕಾಗುತ್ತದೆ ಅಂತ ಭದ್ರತಾ ಅಧಿಕಾರಿಗಳನ್ನು ಹೆದರಿಸಿದರೆಂದು ಅಧಿಕಾರಿ ಹೇಳಿದ್ದಾರೆ.

ಮನೇಕಾ ವಿರುದ್ಧ ಪ್ರಕರಣ ದಾಖಲಾದ ಕೂಡಲೇ ಪಂಜಾಬ್ ಪೊಲೀಸ್ ಚೀಫ್ ಅವರಿಗೆ ‘ಮೇಲಿಂದ’ ಕರೆಗಳು ಬರಲಾರಂಭಿಸಿದವು. ಆದರೆ, ಪೊಲೀಸ್ ಮನೇಕಾ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಕೆಲ ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು,’ ಅಂತ ಅಧಿಕಾರಿ ತಿಳಿಸಿದ್ದಾರೆ.

ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಮದ್ಯ ಮಾರಾಟ ಮತ್ತು ಸೇವನೆ ಕಾನೂನು ಬಾಹಿರವಾಗಿದೆ.

ಕಳೆದ ವಾರವಷ್ಟೇ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಮೂರನೇ ಪತ್ನಿ ಬುಶ್ರಾ ಅವರ ನಡುವೆ ವಿರಸ ತಲೆದೋರಿರುವ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

ಬುಶ್ರಾ ಅವರ ಆಪ್ತ ಗೆಳತಿ ಫರ್ಹಾ ಖಾನ್ ಈ ವದಂತಿಗಳು ಸತ್ಯಕ್ಕೆ ದೂರವಾಗಿವೆ, ಪಾಕಿಸ್ತಾನದ ಪ್ರಥಮ ಮಹಿಳೆ ತಮ್ಮ ಪತಿಯೊಂದಿಗೆ ಇಸ್ಲಾಮಾಬಾದ್ ನಲ್ಲಿರುವ ಬಾನಿ ಗಾಲಾ ನಿವಾಸದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು.

‘ಪಾಕಿಸ್ತಾನದ ಪ್ರಥಮ ದಂಪತಿ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ, ವಾಟ್ಸ್ಯಾಪ್ಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಲಾಗುತ್ತಿದೆ. ಅವರು ನನ್ನ ಜೊತೆ ವಾಸಮಾಡುತ್ತಿಲ್ಲ, ಬದಲಿಗೆ ಇಸ್ಲಾಮಾಬಾದ್ ನಲ್ಲಿರುವ ಪ್ರಧಾನ ಮಂತ್ರಿಗಳ ಬಾನಿ ಗಾಲಾ ನಿವಾಸದಲ್ಲಿ ವಾಸಿಸುತ್ತಿದ್ದಾರೆ,’ ಎಂದುದ ಅವರು ಹೇಳಿದ್ದರು.

ಫೆಬ್ರವರಿ ಮೊದಲ ವಾರದಲ್ಲಿ ಪಾಕಿಸ್ತಾನದ ಫೆಡರಲ್ ತನಿಖಾ ಏಜೆನ್ಸಿಯು ದೇಶದಾದ್ಯಂತ ಕಾರ್ಯಾಚರಣೆ ನಡೆಸಿ ಇಮ್ರಾನ್ ಖಾನ್, ಅವರ ಪತ್ನಿ ಬುಶ್ರಾ ಮತ್ತು ಪಾಕಿಸ್ತಾನದ ಸೇನೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ದುರುದ್ದೇಶಪೂರಿತ ಅಭಿಯಾನ ನಡೆಸುತ್ತಿದ್ದ ಐದು ಜನರನ್ನು ಬಂಧಿಸಿತ್ತು.

ಇದನ್ನೂ ಓದಿ:  Imran Khan: ಭಾರತ- ಪಾಕ್ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಟಿವಿ ಚರ್ಚೆ ನಡೆಸೋಣ; ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಆಹ್ವಾನ

Published On - 7:29 am, Thu, 24 February 22

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?