ಪಹಲ್ಗಾಮ್ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾನನ್ನು ಸಮರ್ಥಿಸಿಕೊಂಡ ಪಾಕ್ ರಾಜಕಾರಣಿ

ಪಾಕಿಸ್ತಾನದ ಪಂಜಾಬ್‌ನ ಪ್ರಾಂತೀಯ ವಿಧಾನಸಭೆಯ ಸ್ಪೀಕರ್ ಮತ್ತು ಆಡಳಿತಾರೂಢ ಪಿಎಂಎಲ್(ಎನ್) ಪಕ್ಷದ ನಾಯಕ ಮಲಿಕ್ ಅಹ್ಮದ್ ಖಾನ್, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.ಈ ವರ್ಷ ಮೇ 28 ರಂದು ನಡೆದ ಭಾರತ ವಿರೋಧಿ ರ್ಯಾಲಿಯಲ್ಲಿ ಮಲಿಕ್ ಅಹ್ಮದ್ ಖಾನ್ ಸೈಫುಲ್ಲಾನೊಂದಿಗೆ ವೇದಿಕೆ ಹಂಚಿಕೊಂಡಿದ್ದರು.ಸೈಫುಲ್ಲಾ ಕಸೂರಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಆಗಿದ್ದು, ಪಹಲ್ಗಾಮ್ ದಾಳಿಯ ಹಿಂದಿನ ಮಾಸ್ಟರ್​​ಮೈಂಡ್ ಎಂದೇ ಹೇಳಲಾಗುತ್ತದೆ.

ಪಹಲ್ಗಾಮ್ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾನನ್ನು ಸಮರ್ಥಿಸಿಕೊಂಡ ಪಾಕ್ ರಾಜಕಾರಣಿ
ಕಸೂರಿ

Updated on: Jun 03, 2025 | 10:17 AM

ಇಸ್ಲಾಮಾಬಾದ್, ಜೂನ್ 03: ಪಾಕಿಸ್ತಾನ(Pakistan)ವು ಭಯೋತ್ಪಾದಕರನ್ನು ಸಲಹುತ್ತಿದೆ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ಕಣ್ಣಮುಂದಿದೆ. ಪಹಲ್ಗಾಮ್ ದಾಳಿಯ ಮಾಸ್ಟರ್​ಮೈಂಡ್​ ಸೈಫುಲ್ಲಾ ಕಸೂರಿಯನ್ನು ಪಾಕ್ ರಾಜಕಾರಣಿ ಸಮರ್ಥಿಸಿಕೊಂಡಿದ್ದಾರೆ. ಪಾಕಿಸ್ತಾನದ ಪಂಜಾಬ್​ನ ವಿಧಾನಸಭೆಯ ಸ್ಪೀಕರ್ ಮೊಹಮ್ಮದ್ ಖಾನ್, ಲಷ್ಕರ್-ಎ-ತೊಯ್ಬಾ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಪರವಾಗಿ ಮಾತನಾಡಿದ್ದಾರೆ. ಉಗ್ರ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್​ನೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಟೈಮ್ಸ್​ ಆಫ್ ಇಂಡಿಯಾ ವರದಿ ಪ್ರಕಾರ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್​​ಮೈಂಡ್​ಗಳಲ್ಲಿ ಒಬ್ಬರಾದ ಕಸೂರಿಯನ್ನು ಯಾವುದೇ ತನಿಖೆ ಇಲ್ಲದೆ ಆರೋಪಿಯಾಗಿ ನೋಡಬಾರದು ಎಂದು ಮಲಿಕ್ ಅಹ್ಮದ್​ಖಾನ್ ಹೇಳಿದ್ದಾರೆ. ಇದಲ್ಲದೇ ಕಸೂರಿಯೊಂದಿಗಿನ ವೈಯಕ್ತಿಕ ಸಂಬಂಧಗಳನ್ನು ಸಹ ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಸೈಬರ್ ಅಪರಾಧಿಗಳ ವಿರುದ್ಧ 19 ಕಡೆ ಸಿಬಿಐ ಕಾರ್ಯಾಚರಣೆ
ಬುರ್ಖಾ ಧರಿಸಿ ಸೊಸೆ ಮನೆಗೆ ನುಗ್ಗಿದ ಮಾವ, ಮುಂದೇನಾಯ್ತು?
ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ನಿರ್ಬಂಧದ ನಡುವೆ ಇಲ್ಲಿದೆ ಗುಡ್ ನ್ಯೂಸ್

ಭಯೋತ್ಪಾದಕರ ಸಾವಿಗೆ ದುಃಖ ವ್ಯಕ್ತಪಡಿಸಿದ ಕಸೂರಿ

1971ರಲ್ಲಿ ಪಾಕಿಸ್ತಾನ ವಿಭಜನೆಯಾದಾಗ ನನಗೆ ನಾಲ್ಕು ವರ್ಷ. ಭಾರತದ ಆಗಿನ ಪ್ರಧಾನಿ ಇಂದಿರಾಗಅಂಧಿ ಅವರು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಖಲೀಜ್(ಬಂಗಾಳಕೊಲ್ಲಿ)ನಲ್ಲಿ ಮುಳುಗಿಸಿರುವುದಾಗಿ ಘೋಷಿಸಿದ್ದರು. ಮೇ 10ರಂದು ನಾವು 1971ರ ಸೇಡು ತೀರಿಸಿಕೊಂಡೆವು ಎಂದು ಹೇಳಿದ್ದಾನೆ.

ಭಾರತ ಮುರಿಡ್ಕಯಲ್ಲಿ ನಡೆಸಿದ ದಾಳಿಯಲ್ಲಿ ಉಗ್ರ ಮುದಾಸರ್ ಸಾವನ್ನಪ್ಪಿದ್ದನ್ನು ಉಲ್ಲೇಖಿಸಿದ್ದಾನೆ.ಆತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನನಗೆ ಅವಕಾಶವಿರಲಿಲ್ಲ. ಆತನ ಅಂತ್ಯಕ್ರಿಯೆಯ ದಿನದಂದು ನಾನು ತುಂಬಾ ಅಳುತ್ತಿದ್ದೆ ಎಂದು ಹೇಳಿದ್ದಾನೆ.

ಪಿಒಕೆಯನ್ನು ವಾಪಾಸ್ ಕೊಟ್ಟ ನಂತರವೇ ಮುಂದಿನ ಮಾತುಕತೆ; ಪಾಕಿಸ್ತಾನದ ಪ್ರಧಾನಿಗೆ ಭಾರತ ಪ್ರತಿಕ್ರಿಯೆ

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನಿ ಗೂಢಚಾರರ ವಿರುದ್ಧ ಭಾರತೀಯ ಭದ್ರತಾ ಸಂಸ್ಥೆಗಳು ಭಾರಿ ಕಾರ್ಯಾಚರಣೆ ಆರಂಭಿಸಿವೆ. ಈ ಕಾರ್ಯಾಚರಣೆಯ ಭಾಗವಾಗಿ, ಮತ್ತೊಬ್ಬ ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಲಾಗಿದೆ, ಈ ಬಾರಿ ಪಂಜಾಬ್‌ನಿಂದ ಗಗನ್‌ದೀಪ್ ಸಿಂಗ್‌ನನ್ನು ತರಣ್ ತರಣ್‌ನಿಂದ ಬಂಧಿಸಲಾಗಿದೆ. ಅವರು ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನಿ ಭಯೋತ್ಪಾದಕ ಗೋಪಾಲ್ ಸಿಂಗ್ ಚಾವ್ಲಾ ಅವರೊಂದಿಗೆ ಸಂಪರ್ಕದಲ್ಲಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:16 am, Tue, 3 June 25