ಲಾಹೋರ್: ದುರಾದೃಷ್ಟಕರ ಘಟನೆಯಲ್ಲಿ ಇಂದು ಬೆಳಗ್ಗೆ ಪಾಕಿಸ್ತಾನದಲ್ಲಿ ರೈಲು ಹಳಿ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಎಕ್ಸ್ಪ್ರೆಸ್ ಟ್ರೈನ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಲಾಹೋರ್ ಕಡೆಗೆ ಹೊರಟಿದ್ದ ಸರ್ ಸಯ್ಯದ್ ಎಕ್ಸ್ಪ್ರೆಸ್ ಟ್ರೈನ್ (Sir Syed Express), ಮಿಲಾತ್ ಎಕ್ಸ್ಪ್ರೆಸ್ ಟ್ರೈನ್ ನಡುವೆ ಈ ಅಪಘಾತವಾಗಿದೆ. ಘೋಟ್ಕಿ (Ghotki) ಸಮೀಪ ರೇತಿ ಮತ್ತು ದಹಾರ್ಕಿ ರೈಲ್ವೆ ನಿಲ್ದಾಣಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಮಿಲಾತ್ ಎಕ್ಸ್ಪ್ರೆಸ್ (Millat Express) ಟ್ರೈನ್ ಕರಾಚಿಯಿಂದ ಸರಗೋಢಾ ಕಡೆಗೆ ತೆರಳುತ್ತಿತ್ತು. ಇನ್ನೂ 50 ಮಂದಿಗೆ ಗಾಯಗಳಾಗಿವೆ.
ಮಿಲಾತ್ ಎಕ್ಸ್ಪ್ರೆಸ್ ಟ್ರೈನಿನ 13 ಬೋಗಿಗಳು ಹಳಿ ತಪ್ಪಿದ್ದು, 8 ಬೋಗಿಗಳು ನಜ್ಜುಗುಜ್ಜಾಗಿವೆ. ಅಪಘಾತಕ್ಕೆ ತುತ್ತಾದ ಟ್ರೈನ್ಗಳ ಅವಶೇಷಗಳಲ್ಲಿ ಹತ್ತಾರು ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಕಷ್ಟಸಾಧ್ಯವಾಗಿದೆ ಎಂದು ಸ್ಥಳಕ್ಕೆ ದೌಡಾಯಿಸಿದ ಉನ್ನತಾಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನ್ ರೇಂಜರ್ಸ್ ಸಿಂಧ್ಗೆ ಸೇರಿದ ಭದ್ರತಾ ಪಡೆಗಳು (Pakistan Rangers Sindh) ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.
At least twenty passengers were killed and several others injured after a collision between two trains near Ghotki this morning@PakrailPK https://t.co/Zts8dyU2p4
— Radio Pakistan (@RadioPakistan) June 7, 2021
#BREAKING #Pakistan Train #Accident. #Millat Express collides with Sir Sayyed Express (DN). Incident happened near #Daharki (in between Sukkur & Sadiqabad). Many casualties expected. pic.twitter.com/i2CD0sZnr3
— Chaudhary Parvez (@chaudharyparvez) June 7, 2021
(Pakistan train accident: derailed Millat Express train collide with Sir Syed Express at Ghotki near Lahore in Pakistan 30 passengers killed)
Published On - 9:16 am, Mon, 7 June 21