ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಪಾಕಿಸ್ತಾನದ ಆಟ ನಡೀಲಿಲ್ಲ, ಗುಪ್ತ ಸಭೆಯಲ್ಲಿ ನಡೆದಿದ್ದೇನು?

ವಿಶ್ವಸಂಸ್ಥೆ ಎದುರು ಪಾಕಿಸ್ತಾನದ ಆಟ ನಡೀಲಿಲ್ಲ, ಸೋಮವಾರ ಮಧ್ಯಾಹ್ನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒಂದೂವರೆ ಗಂಟೆಗಳ ಕಾಲ ನಡೆದ ಗುಪ್ತ ಸಭೆಯ ನಂತರ ಪಾಕಿಸ್ತಾನ ಮುಜುಗರಕ್ಕೀಡಾಯಿತು. ಈ ಸಭೆಯ ನಂತರ, ವಿಶ್ವಸಂಸ್ಥೆಯು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲಿಲ್ಲ ಅಥವಾ ಯಾವುದೇ ನಿರ್ಣಯವನ್ನು ಅಂಗೀಕರಿಸಲಿಲ್ಲ. ಸಭೆಯಲ್ಲಿ, ವಿಶ್ವಸಂಸ್ಥೆಗೆ ಪಾಕಿಸ್ತಾನದ ಖಾಯಂ ಪ್ರತಿನಿಧಿ, ರಾಯಭಾರಿ ಆಸಿಮ್ ಇಫ್ತಿಕರ್, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಉದ್ದೇಶವನ್ನು ಸಾಧಿಸಲಾಗಿದೆ ಎಂದು ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಪಾಕಿಸ್ತಾನದ ಆಟ ನಡೀಲಿಲ್ಲ, ಗುಪ್ತ ಸಭೆಯಲ್ಲಿ ನಡೆದಿದ್ದೇನು?
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒಂದೂವರೆ ಗಂಟೆಗಳ ಕಾಲ ನಡೆದ ಗುಪ್ತ ಸಭೆಯ ನಂತರ ಪಾಕಿಸ್ತಾನ ಮುಜುಗರಕ್ಕೀಡಾಯಿತು. ಈ ಸಭೆಯ ನಂತರ, ವಿಶ್ವಸಂಸ್ಥೆಯು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲಿಲ್ಲ ಅಥವಾ ಯಾವುದೇ ನಿರ್ಣಯವನ್ನು ಅಂಗೀಕರಿಸಲಿಲ್ಲ. ಸಭೆಯಲ್ಲಿ, ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಆಸಿಮ್ ಇಫ್ತಿಕರ್, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಉದ್ದೇಶವನ್ನು ಸಾಧಿಸಲಾಗಿದೆ ಎಂದು ಹೇಳಿದರು. ಈ ಸಭೆಯಲ್ಲಿ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆಯೂ ಚರ್ಚಿಸಿದೆ ಎಂದು ಅವರು ಹೇಳಿದರು.

Updated on: May 06, 2025 | 11:00 AM

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿರುವ ಪಹಲ್ಗಾಮ್(Pahalgam)​ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಪಾಕಿಸ್ತಾನ ಹಾಗೂ ಭಾರತ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಪಾಕಿಸ್ತಾನದ ಬೇಡಿಕೆ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ(UNSC)ಯ ಗುಪ್ತ ಸಭೆ(Closed Door Meeting)ಯನ್ನು ನಡೆಸಿದ್ದರೂ ಕೂಡ ಯಾವುದೇ ನಿರ್ದಿಷ್ಟ ಫಲಿತಾಂಶ ಬಂದಿಲ್ಲ.

ಸೋಮವಾರ ಮಧ್ಯಾಹ್ನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒಂದೂವರೆ ಗಂಟೆಗಳ ಕಾಲ ನಡೆದ ಗುಪ್ತ ಸಭೆಯ ನಂತರ ಪಾಕಿಸ್ತಾನ ಮುಜುಗರಕ್ಕೀಡಾಯಿತು. ಈ ಸಭೆಯ ನಂತರ, ವಿಶ್ವಸಂಸ್ಥೆಯು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲಿಲ್ಲ ಅಥವಾ ಯಾವುದೇ ನಿರ್ಣಯವನ್ನು ಅಂಗೀಕರಿಸಲಿಲ್ಲ.

ಸಭೆಯಲ್ಲಿ, ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಆಸಿಮ್ ಇಫ್ತಿಕರ್, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಉದ್ದೇಶವನ್ನು ಸಾಧಿಸಲಾಗಿದೆ ಎಂದು ಹೇಳಿದರು. ಈ ಸಭೆಯಲ್ಲಿ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆಯೂ ಚರ್ಚಿಸಿದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಪಹಲ್ಗಾಮ್ ದಾಳಿಗೆ ವಿಶ್ವಸಂಸ್ಥೆಯ ಮುಖ್ಯಸ್ಥ ಖಂಡನೆ; ಯುದ್ಧ ಮಾಡದಿರಲು ಭಾರತ- ಪಾಕಿಸ್ತಾನಕ್ಕೆ ಒತ್ತಾಯ

ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಇತ್ತೀಚಿನ ವರ್ಷಗಳಲ್ಲೇ ಈ ಅತ್ಯಂತ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ನೀಡಿದ ಎಚ್ಚರಿಕೆಯ ನಂತರ ಈ ಸಭೆ ನಡೆಯಿತು.

ಪಾಕಿಸ್ತಾನದ ಸುಳ್ಳು ಹೇಳಿಕೆ

ಈ ಸಭೆಯಲ್ಲಿ ಪಾಕಿಸ್ತಾನ ನಿರಂತರವಾಗಿ ಸುಳ್ಳು ಹೇಳಿಕೆಗಳನ್ನು ನೀಡಿತು. ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸುವ ಕ್ರಮವನ್ನು ಕಾನೂನುಬಾಹಿರ ಎಂದು ಕರೆದಿದೆ ಎಂದು ಗುಟೆರಸ್ ಹೇಳಿದರು. ಇದು ಈ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುತ್ತದೆ.

ಈ ಸಮಯದಲ್ಲಿ ಅವರು ಕಾಶ್ಮೀರವನ್ನು ಅಂತಾರಾಷ್ಟ್ರೀಯ ವಿವಾದವಾಗಿ ಬಿಂಬಿಸಲು ಪ್ರಯತ್ನಿಸಿದರು. ಇದು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.

ಅಟ್ಟಾರಿ ಗಡಿಯನ್ನು ಮುಚ್ಚುವುದು, ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಕೆಳಮಟ್ಟಕ್ಕೆ ಇಳಿಸುವುದು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ಮತ್ತು ನಿರ್ಣಾಯಕ ನಿಲುವು ಈ ಪ್ರದೇಶದಲ್ಲಿ ಅಸ್ಥಿರತೆಯನ್ನು ಹೆಚ್ಚಿಸುತ್ತಿವೆ ಎಂದು ಪಾಕಿಸ್ತಾನವು ಸುಳ್ಳುಗಳ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿತು.

ಪಾಕಿಸ್ತಾನದ ಕೋರಿಕೆ ಮೇರೆಗೆ ಸಭೆ

ಈ ಸಭೆಯ ನಂತರ, ಆಸಿಮ್ ಇಫ್ತಿಕರ್ ಅವರು ತಮ್ಮ ಬೇಡಿಕೆಯ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯನ್ನು ನಡೆಸಿದ್ದು ತಮ್ಮ ರಾಜತಾಂತ್ರಿಕ ಗೆಲುವು ಎಂದು ಹೇಳಿಕೊಂಡರು.

ಪಾಕಿಸ್ತಾನವು ವಿಶ್ವಸಂಸ್ಥೆಯ ತಾತ್ಕಾಲಿಕ  ಸದಸ್ಯ ರಾಷ್ಟ್ರವಾಗಿದ್ದು, ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಈ ವಿಷಯವನ್ನು ಚರ್ಚಿಸಲು ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿನಂತಿಸಿತ್ತು. 15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮೇ ತಿಂಗಳಿಗೆ ಗ್ರೀಸ್ ಅಧ್ಯಕ್ಷತೆ ವಹಿಸಿದ್ದು, ಮೇ 5 ರಂದು ಪಾಕಿಸ್ತಾನದೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿತ್ತು.

ಅಣಕು ಕವಾಯತು

ನೆರೆಯ ದೇಶದೊಂದಿಗಿನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿನ ಕೇಂದ್ರ ಗೃಹ ಸಚಿವಾಲಯ (MHA) ಸೋಮವಾರ ಸಂಜೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು (UTs) ನಾಗರಿಕ ರಕ್ಷಣೆಗಾಗಿ ಮೇ 7 ರಂದು ಅಣಕು ಕವಾಯತುಗಳನ್ನು ನಡೆಸುವಂತೆ ಕೇಳಿಕೊಂಡಿದೆ.

ಗೃಹ ಸಚಿವಾಲಯ ಕಳುಹಿಸಿರುವ ಪತ್ರದಲ್ಲಿ, ಅಣಕು ಪ್ರದರ್ಶನದ ಸಮಯದಲ್ಲಿ, ವಾಯುದಾಳಿ ಸೈರನ್‌ಗಳು, ನಾಗರಿಕ ರಕ್ಷಣೆಯ ಕುರಿತು ಸಾರ್ವಜನಿಕರಿಗೆ ತರಬೇತಿ, ನಿರ್ಬಂಧಿತ ಕ್ರಮಗಳ ಅಭ್ಯಾಸ ನಡೆಯಲಿದೆ.

ಈ ಅಣಕು ಕವಾಯತು ಮೇ 7 ರಂದು ದೇಶದ 244 ಗುರುತಿಸಲಾದ ಜಿಲ್ಲೆಗಳಲ್ಲಿ ನಡೆಯಲಿದ್ದು, ಇದನ್ನು ಹಳ್ಳಿಗಳಲ್ಲಿಯೂ ನಡೆಸಲಾಗುವುದು. ನಾಗರಿಕ ರಕ್ಷಣೆಯ ಸನ್ನದ್ಧತೆಯನ್ನು ಪರಿಶೀಲಿಸುವುದು ಮತ್ತು ಸುಧಾರಿಸುವುದು ಇದರ ಉದ್ದೇಶವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಪ್ರವಾಸಿ ತಾಣದ ಮೇಲೆ ಏಪ್ರಿಲ್ 22 ರ ಮಧ್ಯಾಹ್ನ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಹೆಚ್ಚಿನವರು ಪ್ರವಾಸಿಗರಾಗಿದ್ದರು. 2019 ರಲ್ಲಿ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ.

ಫೆಬ್ರವರಿ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಕಣಿವೆಯಲ್ಲಿ ಅತ್ಯಂತ ಮಾರಕ ದಾಳಿ ಪಹಲ್ಗಾಮ್‌ನಲ್ಲಿ ನಡೆದಿದೆ . ಪಹಲ್ಗಾಂ ಪಟ್ಟಣದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಬೈಸರನ್, ದಟ್ಟವಾದ ಪೈನ್ ಕಾಡುಗಳು ಮತ್ತು ಪರ್ವತಗಳಿಂದ ಆವೃತವಾದ ಬೃಹತ್ ಹುಲ್ಲುಗಾವಲು ಮತ್ತು ದೇಶ ಮತ್ತು ಪ್ರಪಂಚದ ಪ್ರವಾಸಿಗರಲ್ಲಿ ನೆಚ್ಚಿನ ತಾಣವಾಗಿದೆ.

ಗುಪ್ತ ಸಭೆ ಎಂದರೇನು?
ಗುಪ್ತ ಸಭೆ ಎಂದರೆ ಸಾರ್ವಜನಿಕವಾಗಿ ಸಭೆಯ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ, ಕೋಣೆಯಲ್ಲಿ ಏನು ನಡೆಯುತ್ತದೋ ಅದು ಆ ಕೋಣೆಯಲ್ಲಿಯೇ ಇರುತ್ತದೆ. ಸಭೆ ಬಳಿಕ ರಾಯಭಾರಿಗಳು ಹೇಳಿಕೆಗಳನ್ನು ನೀಡಬಹುದು. 2019ರಲ್ಲಿ ಚೀನಾ ಈ ಸಭೆ ಕರೆದಿತ್ತು ಆದರೆ 2025ರಲ್ಲಿ ಪಾಕಿಸ್ತಾನ ಕರೆದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:54 am, Tue, 6 May 25