AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್​ ದಾಳಿ: ಜರ್ಮನಿಯಲ್ಲಿ ಹಿಂದೂ ಸಮುದಾಯದ ಒಗ್ಗಟ್ಟಿನ ಸಂದೇಶ ಸಾರಿದ ಭಾರತೀಯರು

ಪಹಲ್ಗಾಮ್​(Pahalgam)ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವವರ ಸ್ಮರಣಾರ್ಥ ಸ್ಟಟ್​ಗಾರ್ಟ್​ನಲ್ಲಿ ಭಾರತೀಯ ಸಮುದಾಯವು ಶಾಂತಿಯುವ ಮೆರವಣಿಗೆಯನ್ನು ನಡೆಸಿತು. ಭಾರತೀಯ ಪರಿವಾರ್ ಬಿಡಬ್ಲ್ಯೂ ಬ್ಯಾನರ್ ಅಡಿಯಲ್ಲಿ, ಸ್ಟಟ್‌ಗಾರ್ಟ್‌ನಲ್ಲಿರುವ ಭಾರತೀಯ ವಲಸಿಗರು, ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಮುಗ್ಧ ಜೀವಗಳಿಗೆ ಗೌರವ ಸಲ್ಲಿಸಲು ಸ್ಕ್ಲೋಸ್‌ಪ್ಲಾಟ್ಜ್‌ನಲ್ಲಿ ಶಾಂತಿಯುತ ಮೆರವಣಿಗೆಯನ್ನು ಭಾನುವಾರ ಆಯೋಜಿಸಿದ್ದರು.

ಪಹಲ್ಗಾಮ್​ ದಾಳಿ: ಜರ್ಮನಿಯಲ್ಲಿ ಹಿಂದೂ ಸಮುದಾಯದ ಒಗ್ಗಟ್ಟಿನ ಸಂದೇಶ ಸಾರಿದ ಭಾರತೀಯರು
ಜರ್ಮನಿ
ನಯನಾ ರಾಜೀವ್
|

Updated on: May 05, 2025 | 9:48 AM

Share

ಸ್ಟಟ್​ಗಾರ್ಟ್​, ಮೇ 05: ಪಹಲ್ಗಾಮ್​(Pahalgam)ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವವರ ಸ್ಮರಣಾರ್ಥ ಸ್ಟಟ್​ಗಾರ್ಟ್​ನಲ್ಲಿ ಭಾರತೀಯ ಸಮುದಾಯವು ಶಾಂತಿಯುವ ಮೆರವಣಿಗೆಯನ್ನು ನಡೆಸಿತು. ಭಾರತೀಯ ಪರಿವಾರ್ ಬಿಡಬ್ಲ್ಯೂ ಬ್ಯಾನರ್ ಅಡಿಯಲ್ಲಿ, ಸ್ಟಟ್‌ಗಾರ್ಟ್‌ನಲ್ಲಿರುವ ಭಾರತೀಯ ವಲಸಿಗರು, ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಮುಗ್ಧ ಜೀವಗಳಿಗೆ ಗೌರವ ಸಲ್ಲಿಸಲು ಸ್ಕ್ಲೋಸ್‌ಪ್ಲಾಟ್ಜ್‌ನಲ್ಲಿ ಶಾಂತಿಯುತ ಮೆರವಣಿಗೆಯನ್ನು ಭಾನುವಾರ ಆಯೋಜಿಸಿದ್ದರು.

ಸಂಜೆ 5 ಗಂಟೆಗೆ ಭಾರತೀಯ ಸಮುದಾಯದ 300 ಕ್ಕೂ ಹೆಚ್ಚು ಸದಸ್ಯರ ಆಗಮನದೊಂದಿಗೆ ಪ್ರಾರಂಭವಾಯಿತು. ಎಲ್ಲಾ ಭಾರತೀಯರು ಹಣೆಯ ಮೇಲೆ ತಿಲಕವನ್ನು ಹಾಕಿಕೊಂಡಿದ್ದರು. ಆದರೆ ಕಾರ್ಯಕ್ರಮಕ್ಕೆ ಸ್ವಾಗತ ಕೋಲು ಅಲ್ಲ ಬದಲಾಗಿ ಆಂತರಿಕ ಗೌರವ ಮತ್ತು ಸಾಂಸ್ಕೃತಿಕ ಏಕತೆಯ ಗಂಭೀರ ಸಂಕೇತವಾಗಿ ತಿಲಕ ಇಟ್ಟುಕೊಂಡಿದ್ದರು.

Germany (3)

ಕಾರ್ಯಕ್ರಮದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಭಾಷಣಗಳು ನಡೆದವು, ನಂತರ ಶಾಂತಿ ಮಾರ್ಗ ಹಾಗೂ ಮೃತರ ಸ್ಮರಣಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಕ್ಷಣಗಳಲ್ಲಿ ಹನುಮಾನ್ ಚಾಲೀಸಾದ ಸಾಮೂಹಿಕ ಪಠಣವು ನಡೆಯಿತು. ಅದರ ಎಲ್ಲರಲ್ಲಿ ಧೈರ್ಯ, ನಂಬಿಕೆ ಮತ್ತು ಏಕತೆಯ ಭಾವವನ್ನು ಮತ್ತೊಮ್ಮೆ ಮೂಡಿಸಿತು.

ಮತ್ತಷ್ಟು ಓದಿ: ಭಾರತದೊಂದಿಗಿನ ಉದ್ವಿಗ್ನತೆ ಕಡಿಮೆ ಮಾಡಲು ರಷ್ಯಾದ ಮೊರೆ ಹೋದ ಪಾಕ್

ಅಲ್ಲಿ ಪಾಲ್ಗೊಂಡವರು ಹಮ್ ಹೋಂಗೆ ಕಾಮಿಯಾಬ್ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು. ಈ ಮೆರವಣಿಗೆ ಸ್ಟಟ್‌ಗಾರ್ಟ್‌ನಲ್ಲಿರುವ ಹಿಂದೂ ಸಮುದಾಯದಿಂದ ಪ್ರಬಲ ಮತ್ತು ಒಗ್ಗಟ್ಟಿನ ಸಂದೇಶವನ್ನು ಸಾರಿತು.

ಉಗ್ರರು ಪಹಲ್ಗಾಮ್​ನಲ್ಲಿ ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾದ ಟಿಆರ್​ಎಫ್​ ಹೊತ್ತಿತ್ತು. ಈ ದಾಳಿಗೆ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸಿದೆ. ಭಯೋತ್ಪಾದಕರ ವಿರುದ್ಧದ ಸಮರಕ್ಕೆ ಜತೆಯಾಗಿ ನಿಂತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ