ಪ್ರಯಾಣಿಕ ಸಾವು: ಜೆಡ್ಡಾದಿಂದ ಹೈದರಾಬಾದ್​ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

|

Updated on: Nov 24, 2023 | 10:09 AM

ಜೆಡ್ಡಾ(Jeddah)ದಿಂದ ಹೈದರಾಬಾದ್​(Hyderabad)ಗೆ ಬರುತ್ತಿದ್ದ ಇಂಡಿಗೋ(IndiGo) ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಜೆಡ್ಡಾದಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ವಿಮಾನವನ್ನು ಇಳಿಸಲಾಯಿತು.

ಪ್ರಯಾಣಿಕ ಸಾವು: ಜೆಡ್ಡಾದಿಂದ ಹೈದರಾಬಾದ್​ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ
ಇಂಡಿಗೋ ವಿಮಾನ
Follow us on

ಜೆಡ್ಡಾ(Jeddah)ದಿಂದ ಹೈದರಾಬಾದ್​(Hyderabad)ಗೆ ಬರುತ್ತಿದ್ದ ಇಂಡಿಗೋ(IndiGo) ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಜೆಡ್ಡಾದಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ವಿಮಾನವನ್ನು ಇಳಿಸಲಾಯಿತು.

ಪ್ರಯಾಣಿಕರಿಗೆ ಸೂಕ್ತ ಚಿಕಿತ್ಸೆ ನೀಡಿದರೂ ವೈದ್ಯರು ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇಂಡಿಗೋ ಅಧಿಕಾರಿಗಳು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ತಿಳಿದುಬಂದಿದೆ. ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಜೆಡ್ಡಾದಿಂದ ಹೈದರಾಬಾದ್‌ಗೆ 6E68 ವಿಮಾನವು ಕರಾಚಿಯಲ್ಲಿ ದೀರ್ಘ ನಿಲುಗಡೆ ಮಾಡಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ಔಪಚಾರಿಕತೆಗಳನ್ನು ಪೂರ್ಣಗೊಳಿಸಲಾಯಿತು. ಇದಾದ ಬಳಿಕ ಗುರುವಾರ ಬೆಳಗ್ಗೆ ವಿಮಾನ ಹೈದರಾಬಾದ್‌ಗೆ ಬಂದಿಳಿಯಿತು.

ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಸ್ವೀಡನ್​ನಲ್ಲಿ ತುರ್ತು ಭೂಸ್ಪರ್ಶ

ಫ್ಲೈಟ್ ಕ್ಯಾಪ್ಟನ್ ವಿಮಾನವನ್ನು ಕರಾಚಿಗೆ ತಿರುಗಿಸಿದರು ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನವನ್ನು ಇಳಿಸಿದ ನಂತರ ಪ್ರಯಾಣಿಕನನ್ನು ಪರೀಕ್ಷಿಸಿದ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಏರ್‌ಲೈನ್ಸ್ ಪ್ರಕಾರ, ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ, ವಿಮಾನವು ಕರಾಚಿಯಿಂದ ಹೊರಟು ಗುರುವಾರ ಬೆಳಗ್ಗೆ 09.08 ಕ್ಕೆ ಹೈದರಾಬಾದ್‌ಗೆ ಬಂದಿಳಿಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:08 am, Fri, 24 November 23