ಚೀನಾ: ರನ್‌ವೇಯಿಂದ ಸ್ಕಿಡ್ ಆಗಿ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್‌ನ ವಿಮಾನ; ಪ್ರಯಾಣಿಕರು ಸುರಕ್ಷಿತ

"ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ" ಎಂದು ಟಿಬೆಟ್ ಏರ್ ಲೈನ್ಸ್  ಹೇಳಿಕೆಯಲ್ಲಿ ತಿಳಿಸಿದೆ. ಸಣ್ಣಪುಟ್ಟಗಾಯಗೊಂಡ 40 ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೀನಾ: ರನ್‌ವೇಯಿಂದ ಸ್ಕಿಡ್ ಆಗಿ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್‌ನ ವಿಮಾನ; ಪ್ರಯಾಣಿಕರು ಸುರಕ್ಷಿತ
ಹೊತ್ತಿ ಉರಿದ ವಿಮಾನ
Edited By:

Updated on: May 12, 2022 | 9:55 AM

ಚೀನಾದ ಟಿಬೆಟ್ ಏರ್‌ಲೈನ್ಸ್‌ನ (Tibet Airlines) ಪ್ರಯಾಣಿಕ ವಿಮಾನವು ಗುರುವಾರ ದೇಶದ ನೈಋತ್ಯ ಚಾಂಗ್‌ಕಿಂಗ್ ನಗರದಲ್ಲಿ ಟೇಕಾಫ್ ಆಗುವಾಗ ರನ್‌ವೇಯಿಂದ ಸ್ಕಿಡ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಸಾವುನೋವುಗಳ  ಬಗ್ಗೆ ತಕ್ಷಣವೇ ತಿಳಿದುಬಂದಿಲ್ಲ ಎಂದು ಸರ್ಕಾರಿ ಮಾಧ್ಯಮ ಸಿಜಿಟಿಎನ್ ವರದಿ ಮಾಡಿದೆ. ಚಾಂಗ್‌ಕಿಂಗ್ ಜಿಯಾಂಗ್‌ಬೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Chongqing Jiangbei international airport) ಟಾರ್‌ಮ್ಯಾಕ್‌ನಲ್ಲಿ ಟಿಬೆಟ್ ಏರ್‌ಲೈನ್ಸ್ ವಿಮಾನದ ಹೊತ್ತಿ ಉರಿಯುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಹಿಂದಿನ ಬಾಗಿಲಿನ ಇವಾಕ್ಯುವೇಷನ್ ಸ್ಲೈಡ್ ಮೂಲಕ ಜನರು ತಪ್ಪಿಸಿಕೊಂಡ ನಂತರ ವಿಮಾನದಿಂದ ಓಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಚೀನಾದ (China) ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿದ ನಂತರ ಟಿಬೆಟ್ ಏರ್‌ಲೈನ್ಸ್ ವಿಮಾನವು ಗುರುವಾರ ಬೆಂಕಿಗೆ ಆಹುತಿಯಾಗಿದೆ. ಆದರೆ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು “ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ” ಎಂದು ಏರ್‌ಲೈನ್ಸ್ ತಿಳಿಸಿದೆ. 113 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯನ್ನು ಹೊತ್ತ ವಿಮಾನವು ನೈಋತ್ಯ ನಗರವಾದ ಚಾಂಗ್‌ಕಿಂಗ್‌ನಿಂದ ಟಿಬೆಟ್‌ನ ನೈಂಗ್‌ಚಿಗೆ ತೆರಳುತ್ತಿದ್ದಾಗ “ಸಮಸ್ಯೆ” ಗಮನಕ್ಕೆ ಬಂತು. ತಕ್ಷಣವೇ ಟೇಕ್-ಆಫ್ ಅನ್ನು ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಜೆಟ್ ರನ್‌ವೇಯಲ್ಲೇ ಉಳಿಯಿತು ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

“ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ” ಎಂದು ಟಿಬೆಟ್ ಏರ್ ಲೈನ್ಸ್  ಹೇಳಿಕೆಯಲ್ಲಿ ತಿಳಿಸಿದೆ. ಸಣ್ಣಪುಟ್ಟಗಾಯಗೊಂಡ 40 ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೇಕ್-ಆಫ್ ಸಮಯದಲ್ಲಿ ಟಿವಿ9833 ಫ್ಲೈಟ್ ರನ್‌ವೇಯಿಂದ ಹೊರಗೆ ಜಾರಿದೆ. “ವಿಮಾನದ ತುದಿಯ ಎಡಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ” ಎಂದು ಚಾಂಗ್‌ಕಿಂಗ್ ಜಿಯಾಂಗ್‌ಬೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ಚಾಂಗ್‌ಕಿಂಗ್ ಜಿಯಾಂಗ್‌ಬೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ನಂತರ ಸಹಜ ಸ್ಥಿತಿಗೆ ಮರಳಿದೆ. “ಅಪಘಾತಕ್ಕೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ” ಎಂದು ವಿಮಾನ ನಿಲ್ದಾಣ ತಿಳಿಸಿದೆ.

 

Published On - 9:22 am, Thu, 12 May 22