ವಿಮಾನದ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಪತ್ತೆ, ತಕ್ಷಣ ಪೈಲಟ್ ಮಾಡಿದ್ದೇನು?

|

Updated on: Apr 06, 2023 | 9:03 AM

ವಿಮಾನದ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡು ಪೈಲಟ್​ಗಳಿಗೆ ಭಯ ಹುಟ್ಟಿಸಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ವಿಮಾನದ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಪತ್ತೆ, ತಕ್ಷಣ ಪೈಲಟ್ ಮಾಡಿದ್ದೇನು?
ವಿಮಾನ
Image Credit source: The Economic Times
Follow us on

ವಿಮಾನದ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡು ಪೈಲಟ್​ಗಳಿಗೆ ಭಯ ಹುಟ್ಟಿಸಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ದಕ್ಷಿಣ ಆಫ್ರಿಕಾದ ಪೈಲಟ್ ರುಡಾಲ್ಫ್​ ಎರಾಸ್ಮಸ್ ವಿಮಾನದ ಮಧ್ಯದಲ್ಲಿ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡಿತ್ತು. ಆದರೆ ಪೈಲಟ್ ಧೈರ್ಯಗೆಡದೆ, ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ವೋರ್ಸೆಸ್ಟರ್‌ನಿಂದ ನೆಲ್ಸ್‌ಪ್ರೂಟ್‌ಗೆ ನಾಲ್ಕು ಪ್ರಯಾಣಿಕರೊಂದಿಗೆ ಸಣ್ಣ ವಿಮಾನವನ್ನು ಹಾರಿಸುತ್ತಿದ್ದರು. ಬೆಳಗ್ಗೆ ವಿಮಾನದ ರೆಕ್ಕೆಯ ಬಳಿ ಹಾವನ್ನು ಸಿಬ್ಬಂದಿ ನೋಡಿದ್ದರು ಅದನ್ನು ಹಿಡಿಯಲು ಪ್ರಯತ್ನಿಸಿದ್ದರು. ಎಂಜಿನ್ ಕೌಲಿಂಗ್ ಬಳಿ ಇತ್ತು, ಬಳಿಕ ಅಲ್ಲಿಯೂ ಕಾಣಿಸಲಿಲ್ಲ, ಎಲ್ಲೋ ಹೋಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ವಿಮಾನ ಹಾರಾಟ ಆರಂಭವಾದ ಬಳಿಕ ಕಾಕ್​ಪಿಟ್​ನಲ್ಲಿ ಕಾಣಿಸಿಕೊಂಡಿದ್ದು, ಪೈಲಟ್​ ಎದೆ ಒಮ್ಮೆ ಝೆಲ್​ ಎಂದಿತ್ತು.

ಮತ್ತಷ್ಟು ಓದಿ: Nepal Air Crash: ಯೇತಿ ಏರ್‌ಲೈನ್ಸ್ ವಿಮಾನ ಪತನಕ್ಕೆ ಎಂಜಿನ್ ಸಮಸ್ಯೆ ಕಾರಣ: ವರದಿ

ಸಾಮಾನ್ಯವಾಗಿ ನೀರಿನ ಬಾಟಲಿಯೊಂದಿಗೆ ನಾನು ಪ್ರಯಾಣಿಸುತ್ತೇನೆ, ಪೈಲಟ್ ಕೂರುವ ಆಸನದ ಹಿಡಿಕೆಗಳು ತಣ್ಣನೆಯ ಅನುಭವ ನೀಡಿತ್ತು, ಬಳಿಕ ನೀರು ಚೆಲ್ಲಿದೆಯೇ ಎಂದು ನೋಡಿದರು ಆದರೆ ಬಾಟಲಿ ದೂರದಲ್ಲಿತ್ತು, ಬಳಿಕ ಸೀಟಿನ ಕೆಳಗೆ ಹಾವು ತಲೆ ಹಾಕುತ್ತಿರುವುದು ಕಾಣಿಸಿತ್ತು ಎಂದು ಎರಾಸ್ಮಸ್ ಹೇಳಿದ್ದಾರೆ.

ಒಂದು ಕ್ಷಣ ಮೌನವಾಗಿದ್ದೆ, ಇದನ್ನು ಪ್ರಯಾಣಿಕರಿಗೆ ಹೇಳಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದೆ. ಆದರೆ ಧೈರ್ಯ ಮಾಡಿ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಸೀಟಿನ ಕೆಳಗೆ ಹಾವು ಇರುವ ಕಾರಣ ಎಲ್ಲಾದರೂ ತುರ್ತು ಭೂ ಸ್ಪರ್ಶ ಮಾಡಲೇಬೇಕಿದೆ ಎಂದು ಹೇಳಿದೆ. ವಿಮಾನವು ವೆಲ್​ಕಾಮ್​ನ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿತ್ತು, ಹಾಗಾಗಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಮೊದಲು ಮೂರು ಪ್ರಯಣಿಕರು ಹೊರಗಡೆ ಬಂದರು, ಬಳಿಕ ಉಳಿದವರು ಪೈಲಟ್​ ಜತೆ ವಿಮಾನದಿಂದ ಕೆಳಗಿಳಿದಿದ್ದರು. ಬಳಿಕ ಆಸನವನ್ನು ಮುಂದೆ ಮಾಡಿದಾಗ ಸೀಟಿಗೆ ಸುರುಳಿಯಾಕಾರಾದಲ್ಲಿ ಸುತ್ತಿಕೊಂಡಿರುವುದನ್ನು ಗಮನಿಸಿದರು. ಆದರೆ ಮತ್ತೆ ಹಾವು ಅಲ್ಲಿಂದ ಮಾಯವಾಗಿತ್ತು, ಮತ್ತೆ ಒಂದು ದಿನಗಳ ಕಾಲ ಅದನ್ನು ಹುಡುಕಿದರೂ ಕಾಣಿಸಿಲ್ಲ. ವಾಯುಯಾನ ಉದ್ಯಮದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಇಂತಹ ಪ್ರಕರಣಗಳು ಕೇಳಿರಲಿಲ್ಲ ಎಂದು ಎರಾಸ್ಮಸ್ ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ