PM Modi In US: ಜೋ ಬೈಡನ್ ಅವರ 9 ವರ್ಷಗಳ ಆಸೆ ಇಂದು ಈಡೇರಿದೆ ಎಂದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ(Narendra Modi) ಅಮೆರಿಕ ಪ್ರವಾಸದಲ್ಲಿದ್ದಾರೆ, ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ದಂಪತಿ ಔತಣಕೂಟವೊಂದನ್ನು ಆಯೋಜಿಸಿದ್ದರು.

PM Modi In US: ಜೋ ಬೈಡನ್ ಅವರ 9 ವರ್ಷಗಳ ಆಸೆ ಇಂದು ಈಡೇರಿದೆ ಎಂದ ಪ್ರಧಾನಿ ಮೋದಿ
ಮೋದಿ
Image Credit source: Hindustan Times

Updated on: Jun 23, 2023 | 8:19 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಅಮೆರಿಕ ಪ್ರವಾಸದಲ್ಲಿದ್ದಾರೆ, ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ದಂಪತಿ ಔತಣಕೂಟವೊಂದನ್ನು ಆಯೋಜಿಸಿದ್ದರು. ಈ ಔತಣ ಕೂಟ ಆಯೋಜನೆಗಾಗಿ ಮೋದಿ ಧನ್ಯವಾದ ಅರ್ಪಿಸಿದರು. ಬೈಡನ್ ಅವರ 9 ವರ್ಷದ ಆಸೆ ಏನು?: ಪ್ರಧಾನಿ ನರೇಂದ್ರ ಮೋದಿಯವರುಗೆ ಔತಣ ಕೂಟವನ್ನು ಆಯೋಜಿಸುವ ಮೂಲಕ ಜೋ ಬೈಡನ್ ತಮ್ಮ 9 ವರ್ಷದ ಆಸೆಯನ್ನು ಪೂರೈಸಿಕೊಂಡಿದ್ದಾರೆ.

2014ರಲ್ಲಿ ಕಾಕತಾಳೀಯವೆಂಬಂತೆ ನರೇಂದ್ರ ಮೋದಿಯವರು 9 ದಿನಗಳ ನವರಾತ್ರಿ ಉಪವಾಸ ಕೈಗೊಂಡಿದ್ದರು, ಅದೇ ಸಮಯದಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು, ಜೋ ಬೈಡನ್ ಅವರು ಮೋದಿಯವರ ಬಳಿ ಏನನ್ನೂ ತಿನ್ನುವುದಿಲ್ಲವೇ ಎಂದು ಪದೇ ಪದೇ ಕೇಳಿದ್ದರಂತೆ. ಬೈಡನ್ ಈ ಬಗ್ಗೆ ತುಂಬಾ ಬೇಸರ ಮಾಡಿಕೊಂಡಿದ್ದರು, ಆ ಸಮಯದಲ್ಲಿ ನನಗೆ ಪ್ರೀತಿ ಉಣಬಡಿಸಬೇಕೆಂಬ ನಿಮ್ಮ ಆಸೆ ಈಗ ಈಡೇರಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ಮತ್ತಷ್ಟು ಓದಿ: PM Modi Speech: ಭಾರತ, ಅಮೆರಿಕ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳು; ಅಮೆರಿಕ ಸಂಸತ್ ಜಂಟಿ ಅಧಿವೇಶನದಲ್ಲಿ ಮೋದಿ ಮಾತು

ಭಾರತೀಯ ಮೌಲ್ಯಗಳು, ಭಾರತದ ಪ್ರಜಾಸತ್ತಾತ್ಮಕ ಸಂಪ್ರದಾಯಗಳಿಂದ ತುಂಬಿರುವ ಭಾರತೀಯ ಅಮೆರಿಕನ್ ಜನರು ಬಹಳ ದೂರ ಸಾಗಿದ್ದಾರೆ. ಭಾರತೀಯರಿಗೆ ಅಮೆರಿಕವೂ ಸದಾ ಗೌರವದಿಂದ ಬರಮಾಡಿಕೊಂಡಿದೆ.

ಭಾರತೀಯ ಮೌಲ್ಯಗಳನ್ನು ಹೊತ್ತು ಅಮೆರಿಕದಲ್ಲಿ ಸಮಾಜ ಹಾಗೂ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಸುಮಾರು ಒಂದು ದಶಕದ ಹಿಂದೆ ಜೋ ಬೈಡನ್ ಅಮೆರಿಕದ ಉಪಾಧ್ಯಕ್ಷರಾಗಿದ್ದಾಗ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಇಂದಿಗೂ ಅವರು ಅದೇ ಬದ್ಧತೆಯನ್ನು ಅವರಲ್ಲಿ ಕಾಣುತ್ತಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us