ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ (COP28) ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ(Narendra Modi) ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದುಬೈನಲ್ಲಿರುವ ಭಾರತೀಯ ವಲಸಿಗರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಜನರು ಮೋದಿ-ಮೋದಿ ಮತ್ತು ಈ ಬಾರಿ ಮೋದಿ ಸರ್ಕಾರ ಎಂಬ ಘೋಷಣೆಗಳನ್ನು ಕೂಗಿದರು. ಜತೆಗೆ 400ಕ್ಕೂ ಅಧಿಕ ಸೀಟುಗಳಿಂದ ಗೆಲ್ಲುವಂತೆ ಶುಭ ಹಾರೈಸಿದರು.
ಎಎನ್ಐ ಹಂಚಿಕೊಂಡಿರುವ ವಿಡಿಯೋದಲ್ಲಿ, ಮೋದಿ, ಮೋದಿ, ಅಬ್ಕಿ ಬಾರ್ ಮೋದಿ ಸರ್ಕಾರ್ ಮತ್ತು ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಅನಿವಾಸಿ ಭಾರತೀಯರೊಬ್ಬರು ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿ, ನಾನು 20 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿದ್ದೇನೆ, ಆದರೆ ಇಂದು ನನ್ನವರೊಬ್ಬರು ಈ ದೇಶಕ್ಕೆ ಬಂದಂತೆ ಭಾಸವಾಗುತ್ತಿದೆ ಎಂದಿದ್ದಾರೆ.
ಮೋದಿ ಭಾರತದ ವಜ್ರ, ಪ್ರಧಾನಿ ಮೋದಿಯನ್ನು ಇಲ್ಲಿ ನೋಡಲು ನಮಗೆ ತುಂಬಾ ಸಂತೋಷವಾಗಿದೆ. ಜಗತ್ತಿಗೆ ಪ್ರಧಾನಿ ಮೋದಿಯಂತಹ ನಾಯಕನ ಅಗತ್ಯವಿದೆ ಎಂದರು.
#WATCH | Members of the Indian diaspora raise slogans of ‘Abki Baar Modi Sarkar’ and ‘Vande Mataram’ as Prime Minister Narendra Modi arrived at the hotel in Dubai pic.twitter.com/fQvnFv6Sxs
— ANI (@ANI) November 30, 2023
ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಲ್ಲದೆ, ಮೋದಿ ಇತರೆ ಮೂರು ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಲಿದ್ದಾರೆ.
ದುಬೈನಲ್ಲಿರುವ ಭಾರತೀಯ ಸಮುದಾಯದ ಆತ್ಮೀಯ ಸ್ವಾಗತದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅವರ ಬೆಂಬಲ ಮತ್ತು ಉತ್ಸಾಹವು ನಮ್ಮ ರೋಮಾಂಚಕ ಸಂಸ್ಕೃತಿ ಮತ್ತು ಬಲವಾದ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
Deeply moved by the warm welcome from the Indian community in Dubai. Their support and enthusiasm is a testament to our vibrant culture and strong bonds. pic.twitter.com/xQC64gcvDJ
— Narendra Modi (@narendramodi) November 30, 2023
ಈ ಸಮಾವೇಶದಲ್ಲಿ ಭಾಗವಹಿಸಲು ದೆಹಲಿಯಿಂದ ಹೊರಟಿದ್ದ ಪ್ರಧಾನಿ ಮೋದಿ ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ ದುಬೈನ ಅಲ್ ಮಕ್ತೂಮ್ ವಿಮಾನ ನಿಲ್ದಾಣಕ್ಕೆ ತಲುಪಿದರು. ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ