ನಿಖಿಲ್ ಗುಪ್ತಾ ವಿರುದ್ಧ ಹತ್ಯೆ ಸಂಚು ಆರೋಪ; ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದ ಅಮೆರಿಕ
ಅಮೆರಿಕದಲ್ಲಿ ವಿಫಲವಾದ ಹತ್ಯೆಯ ಸಂಚಿನಲ್ಲಿ ಭಾರತೀಯ ಪ್ರಜೆಯ ಮೇಲೆ ಅಮೆರಿಕ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯನ್ನು ಉಲ್ಲೇಖಿಸಿದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, ನಾವು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಈ ಆರೋಪಗಳು ಮತ್ತು ಈ ತನಿಖೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ
ವಾಷಿಂಗ್ಟನ್ ಡಿಸೆಂಬರ್ 01: ಭಾರತದೊಂದಿಗೆ ಅಮೆರಿಕ (US) ತನ್ನ ಕಾರ್ಯತಂತ್ರದ ಪಾಲುದಾರಿಕೆಯನ್ನು ಸುಧಾರಿಸುವುದನ್ನು ಮುಂದುವರೆಸಿದೆ ಎಂದು ಶ್ವೇತಭವನದ (White House) ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ (John Kirby) ಶುಕ್ರವಾರ ಹೇಳಿದ್ದಾರೆ. ವಿಫಲವಾದ ಹತ್ಯೆಯ ಸಂಚಿನಲ್ಲಿ ಭಾರತೀಯನ ವಿರುದ್ಧ ಯುಎಸ್ ನ್ಯಾಯಾಂಗ ಇಲಾಖೆಯು ದೋಷಾರೋಪಣೆಯನ್ನು ಉಲ್ಲೇಖಿಸಿದ ಅಮೆರಿಕ ನಾವು ಇದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿರ್ಬಿ, “ಭಾರತವು ಕಾರ್ಯತಂತ್ರದ ಪಾಲುದಾರನಾಗಿ ಉಳಿದಿದೆ.ಭಾರತದೊಂದಿಗೆ ಆ ಕಾರ್ಯತಂತ್ರದ ಪಾಲುದಾರಿಕೆಯನ್ನು ಸುಧಾರಿಸಲು ಮತ್ತು ಬಲಪಡಿಸಲು ನಾವು ಕೆಲಸ ಮಾಡುವುದನ್ನು ಮುಂದುವರಿಸಲಿದ್ದೇವೆ ಎಂದಿದ್ದಾರೆ.
ಅಮೆರಿಕದಲ್ಲಿ ವಿಫಲವಾದ ಹತ್ಯೆಯ ಸಂಚಿನಲ್ಲಿ ಭಾರತೀಯ ಪ್ರಜೆಯ ಮೇಲೆ ಅಮೆರಿಕ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯನ್ನು ಉಲ್ಲೇಖಿಸಿದ ಕಿರ್ಬಿ, ನಾವು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಈ ಆರೋಪಗಳು ಮತ್ತು ಈ ತನಿಖೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದನ್ನು ತನಿಖೆ ಮಾಡಲು ತಮ್ಮದೇ ಆದ ಪ್ರಯತ್ನಗಳನ್ನು ಘೋಷಿಸುವ ಮೂಲಕ ಭಾರತವೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ನೋಡಲು ನಮಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಈ ಆಪಾದಿತ ಅಪರಾಧಗಳಿಗೆ ಜವಾಬ್ದಾರರಾಗಿರುವವರನ್ನು ಹೊಣೆಗಾರರನ್ನಾಗಿ ಮಾಡಲು ನಾವು ಬಯಸುತ್ತೇವೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ ಎಂದಿದ್ದಾರೆ ಕಿರ್ಬಿ. ಸಿಖ್ ಪ್ರತ್ಯೇಕತಾವಾದಿ ಆಂದೋಲನದ ಯುಎಸ್ ಮೂಲದ ನಾಯಕ ಮತ್ತು ನ್ಯೂಯಾರ್ಕ್‌ನಲ್ಲಿನ ನಾಗರಿಕನನ್ನು ಹತ್ಯೆ ಮಾಡುವ ವಿಫಲ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಭಾರತೀಯ ಪ್ರಜೆಯ ವಿರುದ್ಧ ಅಮೆರಿಕ ನ್ಯಾಯಾಂಗ ಇಲಾಖೆ ದೋಷಾರೋಪಣೆಯನ್ನು ಬಹಿರಂಗಪಡಿಸಿದೆ.
ಮ್ಯಾನ್‌ಹ್ಯಾಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ದೋಷಾರೋಪಣೆಯಲ್ಲಿ ಗುರುತಿಸಲ್ಪಡದ ಭಾರತೀಯ ಸರ್ಕಾರಿ ನೌಕರ (CC-1 ಎಂದು ಹೆಸರಿಸಲಾಗಿದೆ), ಹತ್ಯೆಯನ್ನು ನಡೆಸಲು ಹಿಟ್‌ಮ್ಯಾನ್‌ನನ್ನು ನೇಮಿಸಿಕೊಳ್ಳಲು ನಿಖಿಲ್ ಗುಪ್ತಾ ಎಂಬ ಭಾರತೀಯನನ್ನು ನೇಮಿಸಿಕೊಂಡಿದ್ದಾನೆ ಎಂದು US ನ್ಯಾಯ ಇಲಾಖೆ ಹೇಳಿಕೊಂಡಿದೆ.
ಗುಪ್ತಾ ಅವರು CC-1 ರ ಸಹವರ್ತಿಯಾಗಿದ್ದಾರೆ. CC-1 ರೊಂದಿಗಿನ ಅವರ ಸಂವಹನದಲ್ಲಿ ಅವರು ಅಂತರರಾಷ್ಟ್ರೀಯ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಯುಎಸ್ ನ್ಯಾಯಾಂಗ ಇಲಾಖೆ ಹೇಳಿಕೊಂಡಿದೆ. CC -1 ಹತ್ಯೆಯ ಸಂಚು ಭಾರತದಿಂದ ನಿರ್ದೇಶಿಸಲ್ಪಟ್ಟಿದೆ ಎಂದು ದೋಷಾರೋಪಣೆ ಹೇಳುತ್ತದೆ.
ಇದಲ್ಲದೆ, ಗುರುವಾರ ಸುದ್ದಿಗೋಷ್ಠಿಯಲ್ಲಿ ಎಂಇಎ, ಯುಎಸ್ ನ್ಯಾಯಾಲಯದಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಭಾರತೀಯ ಅಧಿಕಾರಿಯೊಂದಿಗೆ ಸಂಪರ್ಕಿಸಲಾಗಿದೆ ಎಂದು ಆರೋಪಿಸಿರುವುದು “ಕಳವಳಕಾರಿ ವಿಷಯ”. ಇದು ಸರ್ಕಾರದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ನಿಖಿಲ್ ಗುಪ್ತಾ ವಿರುದ್ಧ ಕೊಲೆ ಸಂಚು ಆರೋಪ ಕಳವಳಕಾರಿ ಸಂಗತಿ: ಅರಿಂದಮ್ ಬಾಗ್ಚಿ
ಇಂತಹ ಭದ್ರತಾ ವಿಷಯಗಳ ಕುರಿತು ನಾವು ಯಾವುದೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ವಿರುದ್ಧ ಭಾರತೀಯ ಅಧಿಕಾರಿಯೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಅಮೆರಿಕ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದು ಕಳವಳಕಾರಿ ವಿಷಯವಾಗಿದೆ. ನಾವು ಹೇಳಿದ್ದನೇನೇನ್ನು ಪುನರುಚ್ಚರಿಸುತ್ತೇನೆ. ಇದು ಸರ್ಕಾರದ ನೀತಿಗೆ ವಿರುದ್ಧವಾಗಿದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
“ಸಂಘಟಿತ ಅಪರಾಧ, ಕಳ್ಳಸಾಗಣೆ ಮತ್ತು ಬಂದೂಕು ಚಲಾಯಿಸುವುದು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉಗ್ರಗಾಮಿಗಳ ನಡುವಿನ ಸಂಬಂಧವು ಕಾನೂನು ಜಾರಿ ಸಂಸ್ಥೆಗಳು ಮತ್ತು ಸಂಸ್ಥೆಗಳಿಗೆ ಗಂಭೀರ ಸಮಸ್ಯೆಯಾಗಿದೆ. ಈ ಕಾರಣಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಮತ್ತು ನಾವು ನಿಸ್ಸಂಶಯವಾಗಿ ಮಾಡುತ್ತೇವೆ ಎಂದು ಬಾಗ್ಚಿ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ