ಬಾಂಗ್ಲಾದೇಶದ ರಾಷ್ಟ್ರಿಯ ಹುತಾತ್ಮ ಸ್ಮಾರಕದಲ್ಲಿ ಗಿಡ ನೆಟ್ಟು ನೀರೆರೆದ ಪ್ರಧಾನಿ ಮೋದಿ

|

Updated on: Mar 26, 2021 | 1:59 PM

ಬಾಂಗ್ಲಾದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸವಾರ್​ನಲ್ಲಿ ಇರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ತಾವು ಭೇಟಿ ನೀಡಿದ ಸವಿ ನೆನಪಿಗಾಗಿ ಸಸಿ ನೆಟ್ಟು ಭೇಟಿ ಇತ್ತವರ ಕಟ್ಟಿಯಲ್ಲಿ ಸಹಿ ಹಾಕಿದ್ದಾರೆ.

ಬಾಂಗ್ಲಾದೇಶದ ರಾಷ್ಟ್ರಿಯ ಹುತಾತ್ಮ ಸ್ಮಾರಕದಲ್ಲಿ ಗಿಡ ನೆಟ್ಟು ನೀರೆರೆದ ಪ್ರಧಾನಿ ಮೋದಿ
ಗಿಡ ನೆಟ್ಟು ನೀರೆರೆದ ಪ್ರಧಾನಿ ಮೋದಿ
Follow us on

ಢಾಕಾ: ಬಾಂಗ್ಲಾದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸವಾರ್​ನಲ್ಲಿ ಇರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ತಾವು ಭೇಟಿ ನೀಡಿದ ಸವಿ ನೆನಪಿಗಾಗಿ ಸಸಿ ನೆಟ್ಟು ಭೇಟಿ ಇತ್ತವರ ಕಟ್ಟಿಯಲ್ಲಿ ಸಹಿ ಹಾಕಿದ್ದಾರೆ. ಕೊವಿಡ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ವಿದೇಶ ಪ್ರವಾಸಕ್ಕೆ ತೆರಳಿದ್ದು ಇಂದು ಬೆಳಗ್ಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಬಂದಿಳಿದ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸ್ವಾಗತಿಸಿದ್ದಾರೆ. ಬಾಂಗ್ಲಾದ 50ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗಯಾಗಲಿರುವ ಪ್ರಧಾನಿ ಮೋದಿ, ನಾಳೆ ಮಾಟುವ ಸಮುದಾಯದ ಒರಾಕಂಡಿಯಲ್ಲಿರುವ ದೇಗುಲ ದರ್ಶನ ಕೈಗೊಳ್ಳಲಿದ್ದಾರೆ. ಅವರ ಬಾಂಗ್ಲಾ ಭೇಟಿಯ ಹಿಂದೆ ‘ವಿವಿದೋದ್ಧೇಶಗಳು’ ಕಂಡುಬಂದಿವೆ.

ಭಾರತ ಉತ್ಪಾದಿಸುವ ಕೊರೊನಾ ಲಸಿಕೆಯನ್ನು ಬಾಂಗ್ಲಾದೇಶಕ್ಕೂ ಒದಗಿಸುತ್ತೇವೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾರಿಗೆ ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ ಎಂದು ಬಾಂಗ್ಲಾದ ವಿದೇಶಾಂಗ ಸಚಿವ  ಎಕೆ ಅಬ್ದುಲ್ ಮೊನೆನ್ ತಿಳಿಸಿದ್ದಾರೆ. ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಆಚರಣೆಯ ನಿಮಿತ್ತ ಈಗಾಗಲೇ 2 ಮಿಲಿಯನ್ ಡೋಸ್ ಕೊರೊನಾ ಲಸಿಕೆಯನ್ನು ಉಡುಗೊರೆಯಾಗಿ ಬಾಂಗ್ಲಾದೇಶಕ್ಕೆ ನೀಡಿದ್ದು, ಇನ್ನೂ 1.2 ಮಿಲಿಯನ್ ಡೋಸ್ ಲಸಿಕೆಯನ್ನು ಭಾರತ ಬಾಂಗ್ಲಾದೇಶಕ್ಕೆ  ನೀಡಲಿದೆ.

ಕೊವಿಡ್ ಸೋಂಕು ವಿಶ್ವದಾದ್ಯಂತ ಕಾಣಿಸಿಕೊಂಡ ನಂತರ ಅಂತಾರಾಷ್ಟ್ರೀಯ ಪ್ರವಾಸ, ತಿರುಗಾಟಗಳು ಸ್ಥಗಿತಗೊಂಡಿದ್ದವು. ಯಾವುದೇ ರಾಷ್ಟ್ರಗಳ ನಾಯಕೂ ವಿದೇಶ ಪ್ರಯಾಣ ಕೈಗೊಂಡಿರಲಿಲ್ಲ. ಕೊವಿಡ್​ಗೂ ಮುನ್ನ ಹಲವು ದೇಶಗಳಿಗೆ ಭೇಟಿಯಿಡುವ ಸಂಪ್ರದಾಯ ಹೊಂದಿದ್ದ ಪ್ರಧಾನಿ ನರೇಂದ್ರ ಮೋದಿ, ಕೊವಿಡ್ ಕಾರಣಗಳಿಂದ ವಿದೇಶ ಪ್ರಯಾಣಗಳನ್ನು ಸ್ಥಗಿತಗೊಳಿಸಿದ್ದರು. ಇಂದಿನಿಂದ ಆರಂಭವಾಗಿರುವ ಅವರ ಬಾಂಗ್ಲಾದೇಶ ಭೇಟಿ ಈ ಕಾರಣಗಳಿಂದ ಅತ್ಯಂತ ಮಹತ್ವ ಪಡೆದಿದೆ.

ಸಿಎಎ ಕಾಯ್ದೆ; ಬಾಂಗ್ಲಾ ಮುನಿಸು
ಭಾರತದಲ್ಲಿ ಸಿಎಎ ಕಾಯ್ದೆಯ ಪ್ರಸ್ತಾಪದ ನಂತರ ಬಾಂಗ್ಲಾದೇಶ ಕೇಂದ್ರ ಸರ್ಕಾರದ ಜತೆ ಮುನಿಸು ಪ್ರದರ್ಶನ ಮಾಡಿತ್ತು. ದೇಶದ ವಿವಿಧೆಡೆ ಹರಡಿರುವ ಬಾಂಗ್ಲಾ ನಿರಾಶ್ರಿತರು ತಮ್ಮ ವಾಸ್ತವ್ಯ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಬಹು ಚರ್ಚಿತ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನರೇಂದ್ರ ಮೋದಿ ಸರ್ಕಾರಕ್ಕೆ ಅಲ್ಪಸಂಖ್ಯಾತ ವಿರೋಧಿ ಎಂಬ ಹಣೆಪಟ್ಟಿ ಸಹ ದೊರೆತಿತ್ತು. ಈ ಎಲ್ಲ ವಿರೋಧಗಳನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಬಗ್ಗೆಯೂ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಟೊಮೆಟೊ ಬೆಳೆದು ಕೈ ಸುಟ್ಟುಕೊಂಡ ರೈತನಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲು ತಯಾರಿ

‘ಓರ್ವ ನೃತ್ಯಗಾರ್ತಿಗೆ ಗಾಯವಾದ್ರೆ ಮೋದಿ ಟ್ವೀಟ್ ಮಾಡ್ತಾರೆ; ಆದ್ರೆ ಇಷ್ಟು ರೈತರು ಮೃತಪಟ್ಟಿದ್ರೂ ಪ್ರಧಾನಿ ಟ್ವೀಟ್ ಮಾಡಿಲ್ಲ’