‘ಓರ್ವ ನೃತ್ಯಗಾರ್ತಿಗೆ ಗಾಯವಾದ್ರೆ ಮೋದಿ ಟ್ವೀಟ್ ಮಾಡ್ತಾರೆ; ಆದ್ರೆ ಇಷ್ಟು ರೈತರು ಮೃತಪಟ್ಟಿದ್ರೂ ಪ್ರಧಾನಿ ಟ್ವೀಟ್ ಮಾಡಿಲ್ಲ’
ಹೋರಾಟದಲ್ಲಿ ಸುಮಾರು 300ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಇಷ್ಟು ರೈತರು ಮೃತಪಟ್ಟಿದ್ದರೂ ಪ್ರಧಾನಿ ಟ್ವೀಟ್ ಮಾಡಿಲ್ಲ. ಓರ್ವ ನೃತ್ಯಗಾರ್ತಿಗೆ ಗಾಯವಾದ್ರೆ ಮೋದಿ ಟ್ವೀಟ್ ಮಾಡ್ತಾರೆ. ಇದು ದೇಶದ ನಾಚಿಗೇಡಿನ ಸಂಗತಿ ಎಂದು ಸಮಾವೇಶದಲ್ಲಿ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕ ಯುದ್ಧ ವೀರ ಸಿಂಗ್ ಹೇಳಿದರು.
ಶಿವಮೊಗ್ಗ: ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ಇಂದು ರೈತ ಸಮಾವೇಶವನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಹಲವು ರೈತ ನಾಯಕರು ಮಾತನಾಡಿದರು. ಈ ವೇಳೆ, ದೇಶದೆಲ್ಲೆಡೆ ಈಗ ರೈತರ ಆಕ್ರೋಶ ಹೊರಹೊಮ್ಮುತ್ತಿದೆ. ಮುಂದಿನ ದಿನದಲ್ಲಿ ಮೋದಿ ಸರ್ಕಾರ ಭಸ್ಮವಾಗುವುದು ಸಿದ್ಧ. ದೇಶದಲ್ಲಿ ರೈತರು ಸಾಲದ ಸುಳಿಯಲ್ಲಿ ಸಿಲುಕೊಂಡಿದ್ದಾರೆ. ರೈತರು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮಾವೇಶದಲ್ಲಿ ರೈತ ನಾಯಕ ಡಾ.ದರ್ಶನ್ ಪಾಲ್ ಹೇಳಿದ್ದಾರೆ.
ಹೋರಾಟಕ್ಕೆ ಕರ್ನಾಟಕ, ಕೇರಳ, ತಮಿಳುನಾಡು ಈ ಮೂರು ರಾಜ್ಯಗಳ ರೈತರ ಬೆಂಬಲ ಅಗತ್ಯವಿದೆ. ಬೆಂಬಲ ಸಿಕ್ಕರೆ ಮಾತ್ರ ಕೇಂದ್ರ ಸರ್ಕಾರ ಪತನವಾಗಲು ಸಾಧ್ಯ. ಮೋದಿ ವಿರುದ್ಧದ ಈ ಹೋರಾಟದಲ್ಲಿ ಗೆಲುವು ಖಚಿತ ಎಂದು ದರ್ಶನ್ ಪಾಲ್ ಹೇಳಿದರು.
‘ಚುನಾವಣೆ ಬಳಿಕ ದೆಹಲಿ ರೈತರನ್ನ ಒಕ್ಕಲೆಬ್ಬಿಸ್ತೇವೆ ಎಂದು ಮೋದಿ ಹೇಳ್ತಿದ್ದಾರೆ’ ಸಿಎಂ ಬಿಎಸ್ವೈ ಕೆಲವು ಕೃಷಿ ಕಾನೂನು ಜಾರಿ ಮಾಡಿದ್ದಾರೆ. ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ ಬಳಿಕ ದೆಹಲಿ ರೈತರನ್ನ ಒಕ್ಕಲೆಬ್ಬಿಸ್ತೇವೆ ಎಂದು ಮೋದಿ ಹೇಳ್ತಿದ್ದಾರೆ. ಆದರೆ, ದೆಹಲಿ ರೈತರ ಹೋರಾಟ ಇನ್ನೂ ಮುಂದುವರಿಯಲಿದೆ ಎಂದು ಸಮಾವೇಶದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಜಗತ್ತಿನ ದೊಡ್ಡ ಹೋರಾಟ ಇದಾಗಿದೆ. ಪಂಜಾಬ್, ತಮಿಳುನಾಡು, ಕೇರಳ, ಪಶ್ವಿಮ ಬಂಗಾಳ 4 ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದ ಕೋಡಿಹಳ್ಳಿ ರೈತರನ್ನ ಮುಟ್ಟಿದ್ರೆ ಶಿವಮೊಗ್ಗದಿಂದಲೇ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಟಿಕಾಯತ್ ಬಂಧನವಾದರೆ ರೈತರು ಬುದ್ಧಿ ಕಲಿಸುತ್ತಾರೆ. ಕೇಂದ್ರ, ರಾಜ್ಯ ಸರ್ಕಾರಕ್ಕೆ ಜನ, ರೈತರು ಬುದ್ಧಿ ಕಲಿಸ್ತಾರೆ. ಸಿಎಂ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಬೇಕು. ಸಾಲ ಮನ್ನಾ ಮಾಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಸಹ ನೀಡಿದರು.
‘ರೈತರ ಜಮೀನು ಕಸಿಯುವಂತಹ ಷಡ್ಯಂತ್ರ ನಡೆಯುತ್ತಿವೆ’ ನಂತರ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್ ದೆಹಲಿಯ ರೈತರ ಹೋರಾಟ ಸುದೀರ್ಘವಾಗಿ ನಡೆಯಲಿದೆ. ಈ ಆಂದೋಲನ ನಗರ, ಹಳ್ಳಿ ಹಳ್ಳಿಯಲ್ಲಿ ನಡೆಯಬೇಕಿದೆ. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವವರೆಗೂ ಪ್ರತಿಭಟನೆ ನಡೆಸುತ್ತೇವೆ. ರೈತರ ಜಮೀನು ಕಸಿಯುವಂತಹ ಷಡ್ಯಂತ್ರ ನಡೆಯುತ್ತಿವೆ ಎಂದು ಹೇಳಿದರು.
ದೇಶದಲ್ಲಿ ಲೂಟಿ ನಡೆಯುತ್ತಿದೆ. ಇಂತಹ ಲೂಟಿಕೋರರಿಂದ ದೇಶ ರಕ್ಷಣೆ ಮಾಡಬೇಕಿದೆ. ಬೆಂಗಳೂರನ್ನು ದೆಹಲಿ ಮಾಡಬೇಕಿದೆ ಎಂದು ಟಿಕಾಯತ್ ಹೇಳಿದರು. 4 ದಿಕ್ಕುಗಳಿಂದ ಬೆಂಗಳೂರಿಗೆ ಮುತ್ತಿಗೆ ಹಾಕಿ ರೈತರು ಹೋರಾಟ ಮಾಡಬೇಕಿದೆ ಎಂದು ಸಮಾವೇಶದಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದರು.
‘ಓರ್ವ ನೃತ್ಯಗಾರ್ತಿಗೆ ಗಾಯವಾದ್ರೆ ಮೋದಿ ಟ್ವೀಟ್ ಮಾಡ್ತಾರೆ’ ದೆಹಲಿಯಲ್ಲಿ 115 ದಿನದಿಂದ ರೈತರು ಧರಣಿ ಮಾಡುತ್ತಿದ್ದಾರೆ. ಹೋರಾಟದಲ್ಲಿ ಸುಮಾರು 300ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಇಷ್ಟು ರೈತರು ಮೃತಪಟ್ಟಿದ್ದರೂ ಪ್ರಧಾನಿ ಟ್ವೀಟ್ ಮಾಡಿಲ್ಲ. ಓರ್ವ ನೃತ್ಯಗಾರ್ತಿಗೆ ಗಾಯವಾದ್ರೆ ಮೋದಿ ಟ್ವೀಟ್ ಮಾಡ್ತಾರೆ. ಇದು ದೇಶದ ನಾಚಿಗೇಡಿನ ಸಂಗತಿ ಎಂದು ಸಮಾವೇಶದಲ್ಲಿ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕ ಯುದ್ಧ ವೀರ ಸಿಂಗ್ ಹೇಳಿದರು.
ಅನ್ನದಾತರ ಹೋರಾಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರದ ಅನೇಕ ಸಂಸ್ಥೆಗಳನ್ನ ಮೋದಿ ಮಾರಾಟ ಮಾಡಿದ್ದಾರೆ. ಜನರು ಹೀಗೆ ಸುಮ್ಮನಿದ್ದರೆ ಮೋದಿ ದೇಶವನ್ನೇ ಮಾರುತ್ತಾರೆ. ದೆಹಲಿಯಲ್ಲಿ ಅತಿ ದೊಡ್ಡ ಜನಾಂದೋಲನ ನಡೆಯುತ್ತಿದೆ. ಇಂಥ ದೊಡ್ಡ ಹೋರಾಟ ಮತ್ತೆ ನಡೆಯುವುದು ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ಜನತೆ ಈ ಹೋರಾಟಕ್ಕೆ ಬೆಂಬಲ ನೀಡ್ಬೇಕು ಎಂದು ಸಮಾವೇಶದಲ್ಲಿ ರೈತ ನಾಯಕ ಯುದ್ಧ ವೀರ ಸಿಂಗ್ ಹೇಳಿದರು.
ಇದನ್ನೂ ಓದಿ: ಆರತಿ ಸಮಯದಲ್ಲಿ ನದಿ ಪಕ್ಕದಲ್ಲೇ ಹಾಕಿದ್ದ ವೇದಿಕೆ ಕುಸಿತ.. ಸ್ವಲ್ಪದರಲ್ಲೇ ಸಚಿವ ಸಿ.ಪಿ.ಯೋಗೇಶ್ವರ್ ಪಾರು