ಸಿಲಿಕಾನ್ ಸಿಟಿಯಲ್ಲಿ ನ್ಯೂಟ್ರಿಷಿಯನ್, ಪ್ರೋಟೀನ್ ರಿಚ್ ಇರೋ ಮಶ್ರೂಮ್ ಮೇಳ
ದ್ರಾಕ್ಷಿ ಮೇಳದ ಬಗ್ಗೆ ಕೇಳಿದ್ದೀರಾ. ಮ್ಯಾಂಗೋ ಮೇಳಕ್ಕೂ ಹೋಗಿದ್ದೀರಾ.. ಆದ್ರೆ ಮಶ್ರೂಮ್ ಮೇಳದ ಬಗ್ಗೆ ಕೇಳಿದ್ದೀರಾ? ಹೌದು ನ್ಯೂಟ್ರಿಷಿಯನ್, ಪ್ರೋಟೀನ್ ರಿಚ್ ಇರೋ ಅಣಬೆ ಮೇಳವೊಂದು ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದೆ.
ಬೆಂಗಳೂರು: ನಂಬರ್ ಒನ್ ಸ್ಥಾನದಲ್ಲಿರೋ ಶಿತಾಕೆ ಅಣಬೆ. ಜನ ಹೆಚ್ಚು ಹೆಚ್ಚು ಬಳಸೋ ಬಟನ್ ಮಶ್ರೂಮ್. ನಾರ್ತ್ ಕರ್ನಾಟಕದಲ್ಲಿ ಬೆಳೆಯೋ ಮಿಲ್ಕಿ ಮಶ್ರೂಮ್. ಡ್ರೈ ಫಾರ್ಮ್, ಆಯಿಸ್ಟರ್ ಹೀಗೆ ಒಂದಕ್ಕಿಂತ ಮತ್ತೊಂದು ವೆರೈಟಿಯಾಗಿರೋ ಮಶ್ರೂಮ್ಗಳು.
ಅಂದಹಾಗೆ ಮಶ್ರೂಮ್ ಬೇಸಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸೋಕೆ ಮಶ್ರೂಮ್ ಒಫನ್ ಡೇ ಆಚರಿಸಲಾಯ್ತು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ತೋಟಗಾರಿಕಾ ಇಲಾಖೆ ನೇತೃತ್ವದಲ್ಲಿ ಲಾಲ್ ಬಾಗ್‌ನಲ್ಲಿ ಅಣಬೆ ಮೇಳ ಆಯೋಜನೆ ಮಾಡಲಾಗಿತ್ತು. ಮೇಳದಲ್ಲಿ 10 ಕ್ಕೂ ಹೆಚ್ಚು ಬಗೆಯ ಅಣಬೆ ಪ್ರದರ್ಶನ ಮಾಡಲಾಯ್ತು. ಕೆಜಿಗೆ 900 ರೂಪಾಯಿಯಿಂದ 7000 ರೂಪಾಯಿ ಬೆಲೆಯಿದ್ದು, ಜನರಿಗೆ ಮಶ್ರೂಮ್ ಬೆಳೆಯೋ ಬಗ್ಗೆ ಅರಿವು ಮೂಡಿಸಲು ಅಣಬೆ ಮೇಳ ಸಹಕಾರಿ ಆಯ್ತು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮಶ್ರೂಮ್ ಜತೆಗೆ ಉಪ ಉತ್ಪನ್ನಗಳಾದ ರಸಂ ಪೌಡರ್, ಪಿಕ್ಕಲ್, ಚಟ್ನಿ ಪೌಡರ್, ಪುಳಿಯೊಗರೆ ಪುಡಿಯನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರವಾಸಿಗರು ಮಶ್ರೂಮ್ ರಸಂ ಸೇವನೆ ಮಾಡಿ ಬಾಯಿ ಚಪ್ಪರಿಸಿದ್ರು. ಇನ್ನು ಜನ ಈಸಿಯಾಗಿ ಪಾಲಿ ಬ್ಯಾಗ್‌ನಲ್ಲೇ ಮಶ್ರೂಮ್ ಬೆಳೆಯಬಹುದು. ಈ ಬಗ್ಗೆ ಐಐಎಚ್ ಆರ್ ತರಬೇತಿಯು ನೀಡ್ತಿದೆ.
ಹಿಮಾಲಯದಲ್ಲಿ ಅಪರೂಪಕ್ಕೆ ಬಿಡೋ ಮಶ್ರೂಮನ್ನ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಕಲ್ಟಿವೇಷನ್ ಮಾಡಲಾಗ್ತಿದೆ. ಕೆಲವೇ ದಿನದಲ್ಲಿ ಮತ್ತೊಂದು ವೆರೈಟಿ ಮಶ್ರೂಮ್ ಬೆಂಗಳೂರಿನಲ್ಲಿ ಜೀವ ಪಡೆಯಲಿದ್ದು, ಸದ್ಯ ಲಾಲ್ಬಾಗ್ ನಲ್ಲಿ ಆಯೋಜನೆ ಮಾಡಿದ್ದ ಅಣಬೆ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.