AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಐಟಿ ಎದುರು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ.. ಮಾಜಿ ಶಾಸಕ ನಾಗರಾಜ್ ಮೂಲಕ ಹಣಕ್ಕೆ ಡಿಮ್ಯಾಂಡ್?

ಯಾರ ಮೂಲಕ ನಿಮಗೆ ಹಣಕ್ಕಾಗಿ ಡಿಮ್ಯಾಂಡ್ ಮಾಡಲಾಗಿತ್ತು ಎಂದು ಪ್ರಶ್ನೆ ಮಾಡಿದ್ದು ಇದಕ್ಕೆ ಉತ್ತರ ನೀಡಿದ ರಮೇಶ್ ಜಾರಕಿಹೊಳಿ ನೆಲಮಂಗಲದ ಮಾಜಿ MLA ನಾಗರಾಜ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ಹೇಳಿದ್ದಾರೆ.

ಎಸ್​ಐಟಿ ಎದುರು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ.. ಮಾಜಿ ಶಾಸಕ ನಾಗರಾಜ್ ಮೂಲಕ ಹಣಕ್ಕೆ ಡಿಮ್ಯಾಂಡ್?
ರಮೇಶ್​ ಜಾರಕಿಹೊಳಿ
ಆಯೇಷಾ ಬಾನು
|

Updated on:Mar 21, 2021 | 8:42 AM

Share

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿಡಿ ಕೇಸ್ ಸಂಬಂಧ ವಿಚಾರಣೆಗೆ ಕರೆದಿದ್ದ SIT ಗೆ ಮಾಜಿ ಸಚಿವ ಜಾರಕಿಹೊಳಿ ಅನೇಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ SITಗೆ ರಮೇಶ್ ಏನು ಉತ್ತರ ಕೊಟ್ಟಿದ್ದಾರೆ. ಏನೆಲ್ಲಾ ಪ್ರಶ್ನೆಗಳನ್ನು ಕೇಳಲಾಯಿತು ಎಂಬ ರೋಚನ ಸುದ್ದಿ ಇಲ್ಲಿದೆ.

ವಿಚಾರಣೆಗೆ ಕರೆದಿದ್ದ SIT ಸಿಡಿ ಮಾಡಿದ್ಯಾರು ಅನ್ನೋ ಕುರಿತು ಜಾರಕಿಹೊಳಿಯನ್ನ ಪ್ರಶ್ನಿಸಿದ್ದಾರೆ. ಸದಾಶಿವನಗರ ಠಾಣೆಗೆ ನೀಡಿದ ದೂರಿನಲ್ಲಿ ಹಣ ಪಡೆಯಲು ಪ್ರಯತ್ನ ಎಂದು ರಮೇಶ್ ಜಾರಕಿಹೊಳಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರ ಕುರಿತು ಎಸ್ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರಂತೆ. ಯಾರ ಮೂಲಕ ನಿಮಗೆ ಹಣಕ್ಕಾಗಿ ಡಿಮ್ಯಾಂಡ್ ಮಾಡಲಾಗಿತ್ತು ಎಂದು ಪ್ರಶ್ನೆ ಮಾಡಿದ್ದು ಇದಕ್ಕೆ ಉತ್ತರ ನೀಡಿದ ರಮೇಶ್ ನೆಲಮಂಗಲದ ಮಾಜಿ MLA ನಾಗರಾಜ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ಹೇಳಿದ್ದಾರೆ.

ಕಳೆದ ಮೂರ್ನಾಕು ತಿಂಗಳ ಹಿಂದೆಯೇ ಸಿಡಿ ಕುರಿತು ನಾಗರಾಜ್ ಪ್ರಸ್ತಾಪ ಮಾಡಿದ್ದರು. ನಿಮ್ಮ ಸಿಡಿ ಇದೆ ಮಾತ್ನಾಡಬೇಕೆಂದು ಹೇಳ್ತಿದ್ದಾರೆ ಎಂದು ನಾಗರಾಜ್ ಹೇಳಿದ್ದರು. ಈ ವೇಳೆ ನನ್ನಾದ್ಯಾವ್ದು ಸಿಡಿ ಇಲ್ಲ ಎಂದಿದ್ದೆ. ನಂತರ ಮತ್ತೆ ಒಂದು ತಿಂಗಳ ಬಳಿಕ ನಾಗರಾಜ್ ಸಂಪರ್ಕಿಸಿ ಸಿಡಿ ವಿಚಾರ ಪ್ರಸ್ತಾಪ ಮಾಡಿದ್ರು. ಎರಡನೇ ಬಾರಿ 10 ಸೆಕೆಂಡ್ ವಿಡಿಯೋ ತೋರಿಸಿ ಸಿಡಿ ಇದೆ ಎಂದಿದ್ರು. ಯಾವ ಸಿಡಿ, ಏನು ಎತ್ತಾ ಎಂದಾಗ ಹಣಕ್ಕಾಗಿ ಕೆಲವರು ಡಿಮ್ಯಾಂಡ್ ಮಾಡ್ತಿದ್ದಾರೆ? ನೀವೂ ಕೊಡಬೇಕಂತೆ ಎಂದಿದ್ದ ನಾಗರಾಜ್. ನನ್ನ ಯಾವ ಸಿಡಿಯೂ ಇಲ್ಲ ಎಂದು ಹೇಳಿ ಕಳುಹಿಸಿದ್ದಾಗಿ ಎಸ್ಐಟಿ ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಮಾಜಿ ಶಾಸಕ ನಾಗರಾಜ್​ಗೆ ಎಸ್ಐಟಿ ಬುಲಾವ್ ಸಾಧ್ಯತೆ ನೆಲಮಂಗಲ ಮಾಜಿ MLA ನಾಗರಾಜ್​ಗೆ ಎಸ್ಐಟಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಮೂರು-ನಾಲ್ಕು ತಿಂಗಳ ಹಿಂದೆಯೇ ಸಿಡಿ ವಿಚಾರ ಪ್ರಸ್ತಾಪ ಹಿನ್ನೆಲೆಯಲ್ಲಿ ಹಾಗೂ ಒಂದು ತಿಂಗಳ ಬಳಿಕ ಮತ್ತೆ ಸಿಡಿ ವಿಚಾರವನ್ನು ರಮೇಶ್ ಜಾರಕಿಹೊಳಿಗೆ ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕ ನಾಗರಾಜ್​ಗೆ ಎಸ್ಐಟಿ ನಾಳೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಮಾಜಿ ಶಾಸಕ ನಾಗರಾಜ್ ರಮೇಶ್ ಜಾರಕಿಹೊಳಿಗೆ ಆಪ್ತರಾಗಿದ್ದಾರೆ. ಹಾಗೂ ಸಿಡಿ ಕೇಸ್ ಸಂಬಂಧ ರಮೇಶ್ ಪರವಾಗಿ ಈ ಹಿಂದೆ ದೂರು ನೀಡಿದ್ದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತಡರಾತ್ರಿಯವರೆಗೂ ಜಾರಕಿಹೊಳಿ ಸಹೋದರರ ಮಾತುಕತೆ.. SITಯಿಂದ ಮತ್ತೊಮ್ಮೆ ಭವಿತ್ ವಿಚಾರಣೆ

Published On - 8:40 am, Sun, 21 March 21