AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ 20,000 ಮತಗಳ ಅಂತರದಿಂದ ಗೆಲ್ಲುತ್ತಾರೆ -ಬಿ.ವೈ.ವಿಜಯೇಂದ್ರ

ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸವಾಲಾಗಿ ಸ್ವೀಕರಿಸಿದ್ದೇನೆ. ಬಿಜೆಪಿ ಅಭ್ಯರ್ಥಿ 20,000 ಮತಗಳ ಅಂತರದಿಂದ ಗೆಲ್ಲುತ್ತಾರೆ. ಬಡವರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಬಜೆಟ್ ಮಂಡನೆಯಾಗಿದೆ. ನ್ಯಾಯ ಒದಗಿಸುವ ರೀತಿಯಲ್ಲಿ ಸಿಎಂ ಬಜೆಟ್ ಮಂಡಿಸಿದ್ದಾರೆ ಎಂದು ಮಸ್ಕಿ ಬಿಜೆಪಿ ಸಮಾವೇಶದಲ್ಲಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ 20,000 ಮತಗಳ ಅಂತರದಿಂದ ಗೆಲ್ಲುತ್ತಾರೆ -ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ
Follow us
KUSHAL V
|

Updated on: Mar 20, 2021 | 9:29 PM

ರಾಯಚೂರು: ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸವಾಲಾಗಿ ಸ್ವೀಕರಿಸಿದ್ದೇನೆ. ಬಿಜೆಪಿ ಅಭ್ಯರ್ಥಿ 20,000 ಮತಗಳ ಅಂತರದಿಂದ ಗೆಲ್ಲುತ್ತಾರೆ. ಬಡವರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಬಜೆಟ್ ಮಂಡನೆಯಾಗಿದೆ. ನ್ಯಾಯ ಒದಗಿಸುವ ರೀತಿಯಲ್ಲಿ ಸಿಎಂ ಬಜೆಟ್ ಮಂಡಿಸಿದ್ದಾರೆ ಎಂದು ಮಸ್ಕಿ ಬಿಜೆಪಿ ಸಮಾವೇಶದಲ್ಲಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಹಿಂದಿನ ಉಪಚುನಾವಣೆಯಲ್ಲಿ BJP 12 ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಪಕ್ಷ ಇವತ್ತು ವಿಳಾಸವನ್ನು ಕಳೆದುಕೊಳ್ಳುತ್ತಿದೆ. ಬಿಜೆಪಿ ಸಮಾವೇಶ ನೋಡಿದರೆ ಎದೆ ಒಡೆದುಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದ ನಾಯಕರು ಎದೆ ಒಡೆದುಕೊಳ್ಳುತ್ತಾರೆ ಎಂದು ಮಸ್ಕಿ ಬಿಜೆಪಿ ಸಮಾವೇಶದಲ್ಲಿ ಬಿ.ವೈ.ವಿಜಯೇಂದ್ರ ಹೇಳಿದರು.

‘6 ಜಿ.ಪಂ ಕ್ಷೇತ್ರಗಳಲ್ಲಿ ಸ್ಥಳದಲ್ಲೇ ಸಮಸ್ಯೆಗಳನ್ನ ಬಗೆಹರಿಸ್ತೇನೆ’ ಕ್ಷೇತ್ರದ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಭೇಟಿ ನೀಡ್ತೇನೆ. 6 ಜಿ.ಪಂ ಕ್ಷೇತ್ರಗಳಲ್ಲಿ ಸ್ಥಳದಲ್ಲೇ ಸಮಸ್ಯೆಗಳನ್ನ ಬಗೆಹರಿಸ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಪ್ರತಾಪಗೌಡ ಪಾಟೀಲ್​​ಗೆ ಮತ ನೀಡಿ. 2 ವರ್ಷ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಸಹ ಮಾತನಾಡಿದರು.

5A ಉಪ ಕಾಲುವೆಗೆ ನೀರಿನ ಲಭ್ಯತೆ ಇಲ್ಲ. ಹೀಗಾಗಿ, ದೊಂಡಿಗಲ್ ಏತ ನೀರಾವರಿ ಯೋಜನೆಗೆ ಡಿಪಿಆರ್​ ಸಲ್ಲಿಸುತ್ತೇವೆ. ರೈತರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ತರುತ್ತೇನೆ. ಕಾಂಗ್ರೆಸ್​ಗೆ ತನ್ನ ಅಧ್ಯಕ್ಷ ಯಾರೆಂದು ತೀರ್ಮಾನಿಸದ ಸ್ಥಿತಿ ಎದುರಾಗಿದೆ. ದೇಶ ತಲೆ ತಗ್ಗಿಸುವ ರೀತಿ ಕಾಂಗ್ರೆಸ್ ಪಕ್ಷ ಆಡಳಿತ ನೀಡಿತ್ತು ಎಂದು ಮಸ್ಕಿ ಬಿಜೆಪಿ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು.

ಈ ವೇಳೆ, ಕಾಂಗ್ರೆಸ್ ಮುಕ್ತ ರಾಷ್ಟ್ರವನ್ನಾಗಿಸುವ ಕಾರ್ಯ ಬಿಜೆಪಿ ಮಾಡ್ತಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು. ನಿಮ್ಮ ಆಶೀರ್ವಾದದಿಂದ ಪ್ರತಾಪಗೌಡ ಪಾಟೀಲ್ ಗೆಲ್ಲಲಿದ್ದಾರೆ. ಕಳೆದ ಚುನಾವಣೆಯಲ್ಲಿ 104 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೆವು. ಬಾದಾಮಿ ಕ್ಷೇತ್ರದಲ್ಲಿ ನಾನು 1,600 ಮತಗಳಿಂದ ಸೋತಿದ್ದೆ. ಮೊಳಕಾಲ್ಮೂರಿನಲ್ಲಿ 50,000 ಮತಗಳ ಅಂತರದಿಂದ ಗೆದ್ದಿದ್ದೇನೆ. ಬೇಡ ಸಮಾಜ ನನಗೆ 2 ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಿತ್ತು. ಬಿಎಸ್​ವೈ ಸಿಎಂ ಆಗುತ್ತಾರೆ ಅಂದ್ರೆ ರಾಜೀನಾಮೆಗೆ ಸಿದ್ಧನಿದ್ದೇನೆ. ಪ್ರತಾಪಗೌಡ ಪಾಟೀಲ್ ಹೇಳಿದಂತೆ ರಾಜೀನಾಮೆ ನೀಡಿದ್ದರು. ಪ್ರತಾಪಗೌಡ ಪಾಟೀಲ್​ರ ಋಣದಿಂದ ನಾವು ಸಚಿವರಾಗಿದ್ದೇವೆ. ಪ್ರತಾಪಗೌಡ ಗೆಲುವು ಮೋದಿ, ಬಿಎಸ್​ವೈ ಗೆಲುವು ಇದ್ದಂತೆ. ಪ್ರತಾಪಗೌಡ ಪಾಟೀಲ್​ ಗೆಲುವಿಗಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ಮಸ್ಕಿಯಲ್ಲಿ ಸಚಿವ ಶ್ರೀರಾಮುಲು ಹೇಳಿದರು.

‘ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆದಿದೆ’ ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ನಡುವೆ ಫೈಟ್​ ನಡೆದಿದೆ. ಕೇವಲ ಅಧಿಕಾರಕ್ಕಾಗಿ ರಾಜಕೀಯ ಮಾಡಿದ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಏನು ಮಾಡಿದ್ರು ಎಂದು ಶ್ರೀರಾಮುಲು ಪ್ರಶ್ನೆ ಹಾಕಿದರು.

ಅಹಿಂದ ಸಮಾವೇಶ ಮಾಡಿ ಯಾವ ಸಮಸ್ಯೆ ನಿವಾರಿಸಿದ್ದೀರಿ? ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯಾವ ಸಮಸ್ಯೆ ನಿವಾರಿಸಿದ್ರಿ? ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯ ಒತ್ತಡದಲ್ಲಿದ್ದಾರೆ ಎಂದು ಮಸ್ಕಿಯಲ್ಲಿ ಸಚಿವ ಶ್ರೀರಾಮುಲು ಹೇಳಿದರು.

ಇದನ್ನೂ ಓದಿ: ‘ಮಸ್ಕಿಗೆ ಒಂದು ದೊಡ್ಡ ಹುಲಿ ಬಂದಿದೆ, ಅದು ರಾಜಾಹುಲಿ; ಈಗ ಇನ್ನೊಂದು ಮರಿ ಹುಲಿಯನ್ನ ಕ್ಷೇತ್ರಕ್ಕೆ ಕಳಿಸುತ್ತೇವೆ’