‘ಮಸ್ಕಿಗೆ ಒಂದು ದೊಡ್ಡ ಹುಲಿ ಬಂದಿದೆ, ಅದು ರಾಜಾಹುಲಿ; ಈಗ ಇನ್ನೊಂದು ಮರಿ ಹುಲಿಯನ್ನ ಕ್ಷೇತ್ರಕ್ಕೆ ಕಳಿಸುತ್ತೇವೆ’
ಮಸ್ಕಿಗೆ ಒಂದು ದೊಡ್ಡ ಹುಲಿ ಬಂದಿದೆ, ಅದು ರಾಜಾಹುಲಿ. ರಾಜಾಹುಲಿಯ ಇನ್ನೊಂದು ಮರಿ ಹುಲಿ ಕ್ಷೇತ್ರಕ್ಕೆ ಕಳಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ರಾಯಚೂರು: ಮಸ್ಕಿಗೆ ಒಂದು ದೊಡ್ಡ ಹುಲಿ ಬಂದಿದೆ, ಅದು ರಾಜಾಹುಲಿ. ರಾಜಾಹುಲಿಯ ಇನ್ನೊಂದು ಮರಿ ಹುಲಿ ಕ್ಷೇತ್ರಕ್ಕೆ ಕಳಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಆ ಹುಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತದೆ ಎಂದು ಮಸ್ಕಿ ಸಮಾವೇಶದಲ್ಲಿ ವಿಜಯೇಂದ್ರರನ್ನು ಸವದಿ ಹೊಗಳಿದರು. ಈ ಧರ್ಮಯುದ್ಧದಲ್ಲಿ ಗೆಲ್ಲೋದು ಬಿಜೆಪಿಯ ಪಾಂಡವರು. ಕಟೀಲು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಕಾಲ್ಗುಣ ಚೆನ್ನಾಗಿದೆ. ರಾಜ್ಯದಲ್ಲಿ ನಡೆದ ಎಲ್ಲಾ ಉಪ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದೇವೆ ಎಂದು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಡಿಸಿಎಂ ಸವದಿ ಹೇಳಿದರು. ಏ. 17ರಂದು ಮಸ್ಕಿ ಬೈಎಲೆಕ್ಷನ್ ಹಿನ್ನೆಲೆಯಲ್ಲಿ ಇಂದು ಸಮಾವೇಶ ನಡೆದ ವೇಳೆ ಸವದಿ ಮಾತನಾಡಿದರು.
‘ಸಿಎಂ ಬಿಎಸ್ವೈ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಜೋಡೆತ್ತು’ ಅತ್ತ, ಸಿಎಂ ಬಿಎಸ್ವೈ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಜೋಡೆತ್ತು ಎಂದು ಬಿಜೆಪಿ ಸಮಾವೇಶದಲ್ಲಿ ಸಚಿವ K.S.ಈಶ್ವರಪ್ಪ ಹೇಳಿದ್ದಾರೆ. ಕಟೀಲು ರಾಜ್ಯದಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲೂ ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. ಸಿಎಂ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಕಂಡಿದೆ. ಜೋಡೆತ್ತುಗಳ ನಾಯತಕ್ವ ಇದ್ದರೆ ಹೀಗಿರಬೇಕೆಂದು ಈಶ್ವರಪ್ಪ ಇಬ್ಬರು ನಾಯಕರನ್ನು ಹಾಡಿ ಹೊಗಳಿದರು.
ಮೈಸೂರು ಪಾಲಿಕೆ ಮೇಯರ್ ಎಲೆಕ್ಷನ್ನಲ್ಲಿ ಮೈತ್ರಿ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಯಕತ್ವ ಬೆತ್ತಲಾಗಿದೆ. ವಿಶ್ವ ನಾಯಕ ಅಂದರೆ ನರೇಂದ್ರ ಮೋದಿ. ನಾಯಕರು ಹೇಗಿರಬೇಕು ಅಂದ್ರೆ ಮೋದಿ ಥರ ಇರಬೇಕು. ಇದಿ ವಿಶ್ವವೇ ಮೋದಿ ಥರ ಇರಬೇಕೆಂದು ಹೇಳುತ್ತಿದ್ದಾರೆ. ನಮ್ಮ ಸರ್ಕಾರವನ್ನು ಸಿದ್ದರಾಮಯ್ಯ ಟೀಕಿಸಿದ್ದರು. ಆಗ ಬೈಎಲೆಕ್ಷನ್ನಲ್ಲಿ ಯಾರು ಗೆಲ್ಲುತ್ತಾರೆಂದು ನೋಡೋಣ ಎಂದು ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಸವಾಲು ಹಾಕಿದ್ರು. ನೀವೇ ಗೆಲ್ಲುತ್ತೀರಿ ಬಿಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆ ಬಂದ್ರೆ ಬಿಜೆಪಿ ಗೆಲ್ಲುತ್ತೆ ಎಂಬುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಸ್ಕಿ ಬಿಜೆಪಿ ಸಮಾವೇಶದಲ್ಲಿ ಸಚಿವ K.S.ಈಶ್ವರಪ್ಪ ಹೇಳಿದ್ದಾರೆ.
‘ಸಿದ್ದರಾಮಯ್ಯಗೆ ಸುಳ್ಳು ಹೇಳುವುದಕ್ಕೆ ನೊಬೆಲ್ ಕೊಡಬೇಕು’ ಸಿದ್ದರಾಮಯ್ಯಗೆ ಸುಳ್ಳು ಹೇಳುವುದಕ್ಕೆ ನೊಬೆಲ್ ಕೊಡಬೇಕು. ಆರ್ಎಸ್ಎಸ್ ಬಗ್ಗೆ ಅದು ಇದು ಎಂದು ಸುಳ್ಳು ಹೇಳುತ್ತಾರೆ. ಹೀಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುಳ್ಳಿನ ಸರದಾರ. ಸಿದ್ದರಾಮಯ್ಯ ಮತ್ತೆ ಬಾದಾಮಿ ಕ್ಷೇತ್ರದಲ್ಲಿ ನಿಲ್ತೀನಿ ಅಂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನ ಸೋಲಿಸುತ್ತೇವೆ ಎಂದು ಮಸ್ಕಿ ಬಿಜೆಪಿ ಸಮಾವೇಶದಲ್ಲಿ ಸಚಿವ K.S.ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಬೈಕ್ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗೋವಾಗ ಮನೆಗೆ ನುಗ್ಗಿದ ಕಾರು; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ