ಪೋರ್ಚುಗಲ್ ಬೇಜಾ ಏರ್​ ಶೋ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ, ಪೈಲಟ್​ ಸಾವು

|

Updated on: Jun 03, 2024 | 10:51 AM

ಏರ್​ ಶೋ ವೇಳೆ ಎರಡು ಸಣ್ಣ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೈಲಟ್​ ಸಾವನ್ನಪ್ಪಿರುವ ಘಟನೆ ಲಿಸ್ಬನ್​ನಲ್ಲಿ ನಡೆದಿದೆ.

ಪೋರ್ಚುಗಲ್ ಬೇಜಾ ಏರ್​ ಶೋ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ, ಪೈಲಟ್​ ಸಾವು
Image Credit source: ABP Live
Follow us on

ಏರ್​ ಶೋ(Air Show) ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮಕ್ಕಳನ್ನು ಕರೆದುಕೊಂಡು ಸಾವಿರಾರು ಮಂದಿ ಏರ್​ ಶೋ ನೋಡಲು ಬಂದಿದ್ದರು. ಆದರೆ ಖುಷಿಯೆಲ್ಲವೂ ಕೆಲವೇ ಕ್ಷಣದಲ್ಲಿ ನೋವಾಗಿ ಬದಲಾಗಿತ್ತು, ನೋಡ ನೋಡುತ್ತಿದ್ದಂತೆ ಎರಡು ವಿಮಾನಗಳು ಡಿಕ್ಕಿ ಹೊಡೆದು ವಿಮಾನ ಕೆಳಗುರುಳಿತ್ತು, ಕ್ಷಣ ಮಾತ್ರದಲ್ಲಿ ಪೈಲಟ್​​ ಸಾವನ್ನಪ್ಪಿದ್ದಾರೆ.

ದಕ್ಷಿಣ ಪೋರ್ಚುಗಲ್‌ನಲ್ಲಿ ನಡೆದ ಏರ್ ಶೋ ಪ್ರದರ್ಶನದ ವೇಳೆ ಎರಡು ಸಣ್ಣ ವಿಮಾನಗಳು ಡಿಕ್ಕಿ ಹೊಡೆದು ಓರ್ವ ಪೈಲಟ್ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿದ್ದಾರೆ ಎಂದು ವಾಯುಪಡೆ ತಿಳಿಸಿದೆ.

ಆರು ವಿಮಾನಗಳನ್ನು ಒಳಗೊಂಡ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಎರಡು ವಿಮಾನಗಳು ಅಪಘಾತಕ್ಕೆ ಒಳಗಾದವು.
ಪೋರ್ಚುಗಲ್ ನಲ್ಲಿ ನಡೆದ ಬೇಜಾ ಏರ್ ಶೋ ವೇಳೆ ಅಪಘಾತ ಸಂಭವಿಸಿದೆ. ಜೂನ್ 2ರ ಭಾನುವಾರದಂದು ಎರಡು ವಿಮಾನಗಳು ಆಕಾಶದಲ್ಲಿ ಸಾಹಸ ಪ್ರದರ್ಶಿಸುತ್ತಿದ್ದವು.

ಮತ್ತಷ್ಟು ಓದಿ: ವಿಮಾನ ಅಪಘಾತ, ಸ್ನೇಹಿತನ ಮೃತದೇಹ ತಿಂದು ಬದುಕುಳಿದ ವ್ಯಕ್ತಿ ಹೇಳಿದ ಕಥೆ

ಇದೇ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಅದರ ನಂತರ ವಿಮಾನ ಪತನಗೊಂಡಿತು. ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಅಪಘಾತದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡು ವಿಮಾನಗಳ ಡಿಕ್ಕಿಯ ನಂತರ ಒಂದು ವಿಮಾನವು ನೆಲಕ್ಕೆ ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದು. ಅದರ ನಂತರ ವಿಮಾನವು ಹಾನಿಗೊಳಗಾಗುತ್ತದೆ. ಸ್ಪ್ಯಾನಿಷ್ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ವಿಡಿಯೋ:


ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಖುಷಿಯ ಕ್ಷಣ, ನೋವಿನ ಕ್ಷಣವಾಗಿ ಬದಲಾಗಿತ್ತು. ಸೋವಿಯತ್ ಯೂನಿಯನ್ ವಿನ್ಯಾಸಗೊಳಿಸಿದ ಏರೋಬ್ಯಾಟಿಕ್ ತರಬೇತಿ ಮಾದರಿಯಾದ ಯಾಕೋವ್ಲೆವ್ ಯಾಕ್ -52 ವಿಮಾನಗಳು ಇದ್ದವು. ವಿಡಿಯೋದಲ್ಲಿ ಆರು ವಿಮಾನಗಳ ಹಾರಾಟ ಕಾಣಬಹುದು, ಒಂದು ಮೇಲಕ್ಕೆ ಏರುತ್ತಿದ್ದಂತೆ ಮತ್ತೊಂದು ಅದನ್ನು ಸ್ಪರ್ಶಿಸಿದೆ. ನಂತರ ಕೆಳಗೆ ಬೀಳುವ ದೃಶ್ಯ ವಿಡಿಯೋದಲ್ಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ