Aero India 2023: ಏರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ: ಹುಣಸಮಾರನಹಳ್ಳಿ ಬಳಿ ಭಾರೀ ಟ್ರಾಫಿಕ್ ಜಾಮ್
ಯಲಹಂಕ ವಾಯುನೆಲೆಯಲ್ಲಿ ಇಂದು ನಾಲ್ಕನೇ ದಿನದ ಏರ್ ಶೋ ನಡೆಯುತ್ತಿದೆ. ಹೀಗಾಗಿ ಈ ಏರ್ ಶೋಗೆ ಸಾವಿರಾರೂ ಜನ ಇಲ್ಲಿ ಆಗಮಿಸುತ್ತಿದ್ದಾರೆ. ಬೇರೆ ಬೇರೆ ಊರುಗಳಿಂದ ಕಾರಿನಲ್ಲಿ ಬರುತ್ತಿರುವ ಕಾರಣ ಟ್ರಾಫಿಕ್ ದಟ್ಟಣೆ ಉಂಟಾಗಿದೆ.
ಬೆಂಗಳೂರು: ಏಷ್ಯಾದ ಅತಿ ದೊಡ್ಡ ಏರ್ ಶೋ ‘ಏರೋ ಇಂಡಿಯಾ-2023‘(Aero India 2023) ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದು ಕಳೆದ ಮೂರು ದಿನಗಳಿಂದ ಭಾರಿ ಕಮಾಲ್ ಮಾಡುತ್ತಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳ ಕಸರತ್ತು ಕಣ್ಮನ ಸೆಳೆಯುತ್ತಿದೆ. ಸದ್ಯ ಕಳೆದ ಮೂರು ದಿನಗಳಲ್ಲಿ 80 ಸಾವಿರ ಕೋಟಿ ರೂ. ಒಪ್ಪಂದ ಆಗಿದೆ. 226 ಸಹಭಾಗಿತ್ವ, 201 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಯುದ್ಧ ವಿಮಾನಗಳ ಖರೀದಿ, ನಿರ್ಮಾಣ ಸಂಬಂಧ ಏರೋ ಇಂಡಿಯಾದಲ್ಲಿ ಕಂಪನಿಗಳ ನಡುವೆ ಪರಸ್ಪರ ಒಪ್ಪಂದಗಳಾಗಿವೆ.
ಇದೀಗ ಯಲಹಂಕ ವಾಯುನೆಲೆಯಲ್ಲಿ ಇಂದು ನಾಲ್ಕನೇ ದಿನದ ಏರ್ ಶೋ ನಡೆಯುತ್ತಿದೆ. ಹೀಗಾಗಿ ಈ ಏರ್ ಶೋಗೆ ಸಾವಿರಾರೂ ಜನ ಇಲ್ಲಿ ಆಗಮಿಸುತ್ತಿದ್ದಾರೆ. ಬೇರೆ ಬೇರೆ ಊರುಗಳಿಂದ ಕಾರಿನಲ್ಲಿ ಬರುತ್ತಿರುವ ಕಾರಣ ಟ್ರಾಫಿಕ್ ದಟ್ಟಣೆ ಉಂಟಾಗಿದೆ. ಏರ್ಪೋರ್ಟ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲು ನೂರಾರು ಕಾರುಗಳು ನಿಂತಿದೆ. ಹುಣಸಮಾರನಹಳ್ಳಿ ಬಳಿ ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
Latest Videos