Assembly Polls 2023: ನಾರಾಯಣಗೌಡರಿಗೆ ಟಿಕೆಟ್ ನೀಡಿದರೆ ಠೇವಣಿ ಕಳೆದುಕೊಳ್ಳುವಂಥ ಸ್ಥಿತಿ ನಿರ್ಮಿಸುತ್ತೇವೆ: ಚಂದ್ರಶೇಖರ್, ಮಾಜಿ ಶಾಸಕ
ತಮ್ಮನ್ನು ಕತ್ತಲೆಯಲ್ಲಿಟ್ಟು ನಾರಾಯಣಗೌಡರಿಗೆ ಟಿಕೆಟ್ ನೀಡಿದರೆ ಠೇವಣಿ ಕಳೆದುಕೊಳ್ಳುವಂಥ ಸ್ಥಿತಿ ನಿರ್ಮಿಸುವುದಾಗಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಎಚ್ಚರಿಸಿದರು.
ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿರುವ ಕೆಸಿ ನಾರಾಯಣಗೌಡ (KC Narayanagowda) ಅವರು ಕಾಂಗ್ರೆಸ್ ಪಕ್ಷ ಸೇರುವ ತರಾತುರಿಯಲ್ಲಿದ್ದಾರೆ. ಆದರೆ, ಆವರು ಪ್ರತಿನಿಧಿಸುವ ಕೆಆರ್ ಪೇಟೆ (KR Pet) ಕ್ಷೇತ್ರದಲ್ಲಿ ಸಚಿವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಾಲ್ಲೂಕಿನ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಇಂದು ಮಾತಾಡಿದ ಮಾಜಿ ಶಾಸಕ ಕೆಬಿ ಚಂದ್ರಶೇಖರ್ (KB Chandrashekhar) ಅವರು ತಮ್ಮನ್ನು ಕತ್ತಲೆಯಲ್ಲಿಟ್ಟು ನಾರಾಯಣಗೌಡರಿಗೆ ಟಿಕೆಟ್ ನೀಡಿದರೆ ಠೇವಣಿ ಕಳೆದುಕೊಳ್ಳುವಂಥ ಸ್ಥಿತಿ ನಿರ್ಮಿಸುವುದಾಗಿ ಎಚ್ಚರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 16, 2023 12:13 PM
Latest Videos