AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aero India 2023: ಹಿಂದುಳಿದ ಸಮುದಾಯಗಳ 2,500 ಮಕ್ಕಳಿಂದ ಏರೋ ಇಂಡಿಯಾ ಶೋ ವೀಕ್ಷಣೆ

Aero India 2023; ಬೆಂಗಳೂರು ಗ್ರಾಮಾಂತರ ಪ್ರದೇಶದ ವಾಲ್ಮೀಕಿ ಆಶ್ರಮ ಶಾಲೆ, ಅಂಬೇಡ್ಕರ್ ವಸತಿ ಶಾಲೆ ಮತ್ತು ವಾಲ್ಮೀಕಿ ವಸತಿ ಶಾಲೆ ಶಾಲೆಗಳ ವಿದ್ಯಾರ್ಥಿಗಳು ಫೆಬ್ರವರಿ 14, 2023 ರಂದು ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿದರು. ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಮತ್ತು ಭಾರತೀಯ ವಾಯುಪಡೆಯ ಸೇರಿ ಹಿಂದುಳಿದ ಸಮುದಾಯದ ಮಕ್ಕಳಿಗೆ ಇಂತಹ ಒಂದು ಅಪರೂಪದ ಅವಕಾಶವನ್ನು ಮಾಡಿಕೊಟ್ಟರು.

Aero India 2023: ಹಿಂದುಳಿದ ಸಮುದಾಯಗಳ 2,500 ಮಕ್ಕಳಿಂದ ಏರೋ ಇಂಡಿಯಾ ಶೋ ವೀಕ್ಷಣೆ
ಏರೋ ಇಂಡಿಯಾ ಶೋ 2023Image Credit source: The hindu
ನಯನಾ ಎಸ್​ಪಿ
|

Updated on:Feb 16, 2023 | 10:49 AM

Share

ಬೆಂಗಳೂರು: ಏಷ್ಯಾದ ಅತಿ ದೊಡ್ಡ ಏರ್​ ಶೋ ‘ಏರೋ ಇಂಡಿಯಾ-2023‘(Aero India 2023) ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದೆ. ಫೆಬ್ರವರಿ 13 ರಿಂದ 17 ರ ವರೆಗೂ ನಡೆಯುವ ವೈಮಾನಿಕ ಪ್ರದರ್ಶನ ಇಡೀ ದೇಶದ ಗಮನ ಸೆಳೆದಿದೆ. ರಾಜ್ಯದ ವಿವಿಧ ಭಾಗಗಳ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಸಮುದಾಯಗಳಿಂದ ಬಂದಿರುವ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಏರೋ ಇಂಡಿಯಾ 2023 ಪ್ರದರ್ಶನವನ್ನು ವೀಕ್ಷಿಸಲು ಅವಕಾಶವನ್ನು ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರ ಪ್ರದೇಶದ ವಾಲ್ಮೀಕಿ ಆಶ್ರಮ ಶಾಲೆ, ಅಂಬೇಡ್ಕರ್ ವಸತಿ ಶಾಲೆ ಮತ್ತು ವಾಲ್ಮೀಕಿ ವಸತಿ ಶಾಲೆ ಶಾಲೆಗಳ ವಿದ್ಯಾರ್ಥಿಗಳು ಫೆಬ್ರವರಿ 14, 2023 ರಂದು ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿದರು. ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಮತ್ತು ಭಾರತೀಯ ವಾಯುಪಡೆಯ ಸೇರಿ ಹಿಂದುಳಿದ ಸಮುದಾಯದ ಮಕ್ಕಳಿಗೆ ಇಂತಹ ಒಂದು ಅಪರೂಪದ ಅವಕಾಶವನ್ನು ನೀಡಿದೆ.

“ಈ ಅವಕಾಶವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ವಿದ್ಯಾರ್ಥಿಗಳ ಕನಸುಗಳನ್ನು ಮುಂದುವರಿಸಲು ಮತ್ತು ಅಂತರಿಕ್ಷಯಾನ ಉದ್ಯಮದಲ್ಲಿ ಸಾಧನೆಯನ್ನು ಮಾಡಲು ಈ ಒಂದು ಅವಕಾಶ ಮಕ್ಕಳಿಗೆ ಸ್ಫೂರ್ತಿ ನೀಡಿದೆ” ಎಂದು ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರು ಪೊಲೀಸ್ ವಶಕ್ಕೆ, ರಹಸ್ಯ ಸ್ಥಳದಲ್ಲಿ ವಿಚಾರಣೆ

ಸಮಾಜ ಕಲ್ಯಾಣ ಇಲಾಖೆ, ಭಾರತೀಯ ವಾಯುಪಡೆಯೊಂದಿಗೆ ಕರ್ನಾಟಕ ಸರ್ಕಾರದ ಈ ಜಂಟಿ ಉಪಕ್ರಮವು ಸುಮಾರು 300 ಸರ್ಕಾರಿ ವಸತಿ ಶಾಲೆಗಳ 2,500 ಕ್ಕೂ ಹೆಚ್ಚು ಮಕ್ಕಳಿಗೆ ತಮ್ಮ ಕನಸುಗಳನ್ನು ಇನ್ನೂ ಎತ್ತರಕ್ಕೆ ಕರೆದೊಯ್ಯಲು ಒಂದು ಅದ್ಬುತ ವೇದಿಕೆಯನ್ನು ನೀಡಿದೆ ಎಂದು ಯಲ್ಲಿ ತಿಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:29 am, Thu, 16 February 23