Kichcha Sudeep: ‘ನನಗೆ ಆ ಎರಡು ಪಕ್ಷಕ್ಕಿಂತ ಮೂರನೇ ಪಕ್ಷ ಮಖ್ಯ’; ಸುದೀಪ್ ನೇರ ಮಾತು

Kichcha Sudeep: ‘ನನಗೆ ಆ ಎರಡು ಪಕ್ಷಕ್ಕಿಂತ ಮೂರನೇ ಪಕ್ಷ ಮಖ್ಯ’; ಸುದೀಪ್ ನೇರ ಮಾತು

ರಾಜೇಶ್ ದುಗ್ಗುಮನೆ
|

Updated on: Feb 16, 2023 | 9:50 AM

. ಕಿಚ್ಚ ಸುದೀಪ್ ಅವರಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಕಡೆಗಳಲ್ಲಿ ಆಪ್ತರಿದ್ದಾರೆ.  ಹೀಗಾಗಿ, ಅವರು ಯಾವ ಪಕ್ಷ ಸೇರುತ್ತಾರೆ ಅನ್ನೋದು ಸದ್ಯದ ಕುತೂಹಲ.

ಕಿಚ್ಚ ಸುದೀಪ್ (Kichcha Sudeep) ಅವರ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಮಾತುಕತೆ ನಡೆದ ವಿಚಾರವನ್ನು ಸ್ವತಃ ಸುದೀಪ್ ಅವರೇ ಒಪ್ಪಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಕಡೆಗಳಲ್ಲಿ ಆಪ್ತರಿದ್ದಾರೆ.  ಹೀಗಾಗಿ, ಅವರು ಯಾವ ಪಕ್ಷ ಸೇರುತ್ತಾರೆ ಅನ್ನೋದು ಸದ್ಯದ ಕುತೂಹಲ. ‘ಸುದೀಪ್ ರಾಜಕೀಯಕ್ಕೆ ಬರಲೇಬಾರದು ಎನ್ನುವ ಅಭಿಪ್ರಾಯ ಜನರಲ್ಲಿ ಇರಬಹುದು. ಹೀಗಾಗಿ, ಆ ಎರಡು ಪಕ್ಷಕ್ಕಿಂತ ನನಗೆ ಮೂರನೇ ಪಕ್ಷ (ಜನರ ಪಕ್ಷ) ಮುಖ್ಯ’ ಎಂದಿದ್ದಾರೆ ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ