Aero India-2023: ಆಗಸದಲ್ಲಿ ಲೋಹದ ಹಕ್ಕಿಗಳು ಪ್ರದರ್ಶಿಸುತ್ತಿರುವ ಚಮತ್ಕಾರ ಕಂಡು ಜನರಲ್ಲಿ ರೋಮಾಂಚನ, ದಿಗಿಲು!

Aero India-2023: ಆಗಸದಲ್ಲಿ ಲೋಹದ ಹಕ್ಕಿಗಳು ಪ್ರದರ್ಶಿಸುತ್ತಿರುವ ಚಮತ್ಕಾರ ಕಂಡು ಜನರಲ್ಲಿ ರೋಮಾಂಚನ, ದಿಗಿಲು!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 15, 2023 | 7:28 PM

ಉಕ್ಕಿನ ಹಕ್ಕಿಗಳ ಚಮತ್ಕಾರ ಕಂಡು ರೋಮಾಂಚನಗೊಳ್ಳುತ್ತಿರುವ ಜನ ದೃಶ್ಯಗಳನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2023 (Aero India 2023) ಕೇವಲ ಬೆಂಗಳೂರು ಮಾತ್ರವಲ್ಲದೆ, ಪಕ್ಕದ ಜಿಲ್ಲೆ, ರಾಜ್ಯ ಮತ್ತು ವಿದೇಶಗಳ ಜನರನ್ನು ಸಹ ಸೆಳೆಯುತ್ತಿದೆ. ಇದು ಪ್ರಾರಂಭಗೊಂಡು 3 ದಿಮ ಕಳೆದಿವೆ, ಆದರೆ ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಈ ವಿಡಿಯೋದಲ್ಲಿ ಬಣ್ಣ ಬಣ್ಣದ ಹೆಲಿಕಾಪ್ಟರ್ ಗಳು (helicopter) ಬಾನಂಗಳದಲ್ಲಿ ಮಾಡುತ್ತಿರುವ ಮೋಡಿ ಗಮನಿಸಿ. ಪೈಲಟ್ ಗಳು ನಡೆಸುವ ಸಾಹಸ ಕಂಡು ಜನ ನಿಬ್ಬೆರಗಾಗುತ್ತಿದ್ದಾರೆ. ಇಂದು ರಫೈಲ್ (Rafale), ತೇಜಸ್ ಮತ್ತು ಇತರ ಎಲ್ ಸಿಎ ಗಳು ತಮ್ಮ ಕರಾಮತ್ತು ಪ್ರದರ್ಶಿಸಿದವು. ಉಕ್ಕಿನ ಹಕ್ಕಿಗಳ ಚಮತ್ಕಾರ ಕಂಡು ರೋಮಾಂಚನಗೊಳ್ಳುತ್ತಿರುವ ಜನ ದೃಶ್ಯಗಳನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ