ರಮ್ಯಾ ನನಗೊಬ್ಬ ಸಹೋದರಿಯಂತೆ, ಅವರು ನನ್ನ ವಿರುದ್ಧ ಸ್ಪರ್ಧಿಸಬಯಸಿದರೆ ಬೇಡ ಅನ್ನೋಕ್ಕಾಗುತ್ತಾ? ಹೆಚ್ ಡಿ ಕುಮಾರಸ್ವಾಮಿ
ಸ್ಪರ್ಧಿಸಲಿರುವ ಬಗ್ಗೆ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಹ ಆಭ್ಯರ್ಥಿಗಳು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದಾಗಿದೆ, ಆ ಸಹೋದರಿ ಸ್ಪರ್ಧಿಸುವುದಾದರೆ ಬೇಡ ಅನ್ನೋಕಾಗುತ್ತಾ ಎಂದರು.
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಸ್ಯಾಂಡಲ್ ವುಡ್ ಅಪರಚಿತವೇನೂ ಅಲ್ಲ. ಅವರೊಬ್ಬ ಸಿನಿಮಾ ನಿರ್ಮಾಪಕ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದನ್ನು ಯಾಕೆ ಪ್ರಸ್ತಾಪಿಸಬೇಕಾಗಿದೆಯೆಂದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwar) ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಅನ್ನೋದು ನಿರ್ಧಾರವಾಗಿದೆ. ಏತನ್ಮಧ್ಯೆ ಕಾಂಗ್ರೆಸ್, ಚಿತ್ರನಟಿ ಮತ್ತು ಪಕ್ಷದ ಧುರೀಣೆ ರಮ್ಯಾರನ್ನು (Ramya) ಇದೇ ಕ್ಷೇತ್ರದಿಂದ ಕಣಕ್ಕಿಳಿಸುವ ನಿರ್ಧಾರ ಮಾಡಿಕೊಂಡಂತಿದೆ. ಈ ಬಗ್ಗೆ ಮಾಧ್ಯಮದವರು ಕುಮಾರಸ್ವಾಮಿಯವರನ್ನು ಪ್ರಶ್ನಿಸಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಹ ಆಭ್ಯರ್ಥಿಗಳು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದಾಗಿದೆ, ಆ ಸಹೋದರಿ ಸ್ಪರ್ಧಿಸುವುದಾದರೆ ಬೇಡ ಅನ್ನೋಕಾಗುತ್ತಾ? ಯಾರನ್ನು ಆರಿಸಬೇಕು ಅಂತ ಮತದಾರರಿಗೆ ಗೊತ್ತಿರುತ್ತದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ