Question on Dr K Sudhakar’s efficiency: ಗೂಳಿಹಟ್ಟಿ ಶೇಖರ್ ಬಳಿಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ರಿಂದ ಪೇಚಿಗೆ ಸಿಕ್ಕ ಸರ್ಕಾರ!
ಹಾವೇರಿಯ ಮೆಡಿಕಲ್ ಕಾಲೇಜಿನಲ್ಲಿ 70 ಹುದ್ದೆಗಳಿಗಾಗಿ ಪ್ರಾವಿಜನಲ್ ಪಟ್ಟಿ ಜನೆವರಿ 2020ರಲ್ಲೇ ಬಿಡುಗಡೆಯಾದರೂ ಇದುವರೆಗೆ ನೇಮಕಾತಿಗಳು ಜರುಗಿಲ್ಲ ಅಂತ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರನ್ನು ಪ್ರಶ್ನಿಸುತ್ತಾರೆ.
ಬೆಂಗಳೂರು: ರಾಜ್ಯ ಸರ್ಕಾರದ ಗ್ರಹಗತಿ ಸರಿ ಇದ್ದಂತಿಲ್ಲ ಮಾರಾಯ್ರೇ. ಯಾಕೆ ಅಂತ ನಿಮಗೂ ಗೊತ್ತು. ಬಿಜೆಪಿ ಶಾಸಕರೇ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪೇಚಿಗೆ ಸಿಲುಕಿಸುತ್ತಿದ್ದಾರೆ. ಇಂದಿನ ವಿಧಾನ ಮಂಡಲದ ಕಾರ್ಯಕಲಾಪಗಳಲ್ಲಿ ಬಿಜೆಪಿಯ ಹಿರಿಯ ಶಾಸಕ ಜಗದೀಶ್ ಶೆಟ್ಟರ್ (Jagadish Shettar) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಜಿಲ್ಲೆ ಹಾವೇರಿಯ ಮೆಡಿಕಲ್ ಕಾಲೇಜಿನಲ್ಲಿ 70 ಹುದ್ದೆಗಳಿಗಾಗಿ ಪ್ರಾವಿಜನಲ್ ಪಟ್ಟಿ ಜನೆವರಿ 2020ರಲ್ಲೇ ಬಿಡುಗಡೆಯಾದರೂ ಇದುವರೆಗೆ ನೇಮಕಾತಿಗಳು ಜರುಗಿಲ್ಲ ಅಂತ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರನ್ನು ಪ್ರಶ್ನಿಸಿ ಇದು ಅವರ ಕ್ಷಮತೆಯನ್ನು ಸಂದೇಹಿಸುವ ವಿಚಾರವಾಗಿದೆ ಎನ್ನುತ್ತಾರೆ. ಅವರು ಮಾತು ಮುಂದುವರಿಸುವಾಗಲೇ ಸುಧಾಕರ್ ಮಧ್ಯಪ್ರವೇಶಿಸಿ ಶೆಟ್ಟರ್ ಎತ್ತಿದ ಪ್ರಶ್ನೆಗೆ ಉತ್ತರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

