Kichcha Sudeep: ‘ಇದು ಖುಷಿ ಮತ್ತು ದುಃಖ ಎರಡೂ ಹೌದು’: ಕ್ರಿಕೆಟ್ ಬಗ್ಗೆ ಮಾತಾಡುವಾಗ ಸುದೀಪ್ ಹೀಗೆ ಹೇಳಿದ್ದೇಕೆ?
Celebrity Cricket League | Kannada Chalanachitra Cup: ಕೆಸಿಸಿ ಮತ್ತು ಸಿಸಿಎಲ್ ಸಲುವಾಗಿ ಕಿಚ್ಚ ಸುದೀಪ್ ಅವರು ಅಭ್ಯಾಸ ನಡೆಸಿದ್ದಾರೆ. ಈ ನಡುವೆ ಟಿವಿ9 ಜೊತೆ ಮಾತನಾಡಿದ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಕ್ರಿಕೆಟ್ ಬಗ್ಗೆ ತುಂಬ ಆಸಕ್ತಿ ಇದೆ. ಸಿನಿಮಾಗಳ ಜೊತೆಯಲ್ಲಿ ಅವರು ಕ್ರಿಕೆಟ್ ಆಟವನ್ನೂ ಅಷ್ಟೇ ಪ್ರೀತಿಸುತ್ತಾರೆ. ಈಗ ಅವರು ‘ಕನ್ನಡ ಚಲನಚಿತ್ರ ಕಪ್’ (Kannada Chalanachitra Cup) ಮತ್ತು ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ (Celebrity Cricket League) ಸಲುವಾಗಿ ತಯಾರಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಸೆಲೆಬ್ರಿಟಿಗಳಾದ ನಾವು ಕ್ರಿಕೆಟ್ ಆಡುವಾಗ ಮೈದಾನದಲ್ಲಿ 25 ಸಾವಿರಕ್ಕೂ ಅಧಿಕ ಜನ ಸೇರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೊಳ್ಳೆಯ ಟೂರ್ನಮೆಂಟ್ ನಡೆದಾಗಲೂ ಇಷ್ಟು ಜನ ಸೇರುವುದಿಲ್ಲ. ಅಲ್ಲಿ ಕ್ರಿಕೆಟ್ ನೋಡಲು ಹೋಗದೇ ಇರುವ ಜನರು ನಮ್ಮ ಆಟ ನೋಡೋಕೆ ಬರುತ್ತಾರೆ ಎಂಬುದು ಖುಷಿ ಮತ್ತು ಬೇಜಾರು ಎರಡೂ ಹೌದು. ಸ್ಟೇಟ್ ಲೆವೆಲ್ನಲ್ಲಿ ನಡೆಯುವ ಆಟವನ್ನು ಜನರು ಬಂದು ನೋಡುವಂತಾಗಬೇಕು’ ಎಂದು ಸುದೀಪ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Feb 15, 2023 03:23 PM
Latest Videos