Kichcha Sudeep: ನರೇಂದ್ರ ಮೋದಿ ಭೇಟಿಗೆ ಸುದೀಪ್​ ಯಾಕೆ ಬರಲಿಲ್ಲ? ಅಸಲಿ ಕಾರಣ ವಿವರಿಸಿದ ಕಿಚ್ಚ

PM Narendra Modi | Sudeep: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಕಿಚ್ಚ ಸುದೀಪ್​ಗೆ ಆಹ್ವಾನ ಇರಲಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

Follow us
ಮದನ್​ ಕುಮಾರ್​
|

Updated on:Feb 15, 2023 | 9:26 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದು ಕನ್ನಡ ಚಿತ್ರರಂಗದ ಕೆಲವು ಸೆಲೆಬ್ರಿಟಿಗಳನ್ನು ಭೇಟಿ ಮಾಡಿದರು. ಆದರೆ ಆ ಭೇಟಿಯ ಸಂದರ್ಭದಲ್ಲಿ ಕಿಚ್ಚ ಸುದೀಪ್​ ಇರಲಿಲ್ಲ. ಹಲವು ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ (Sandalwood) ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರರಂಗದಲ್ಲೂ ಹೆಸರು ಮಾಡಿರುವ ಸುದೀಪ್​ ಅವರು ಮೋದಿ ಭೇಟಿಯಲ್ಲಿ ಮಿಸ್​ ಆಗಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ. ಅದಕ್ಕೆ ಸ್ವತಃ ಕಿಚ್ಚ ಸುದೀಪ್​ (Kichcha Sudeep) ಅವರೇ ಉತ್ತರ ನೀಡಿದ್ದಾರೆ. ತಾವು ಮೋದಿ ಅವರನ್ನು ಭೇಟಿಯಾಗದೇ ಇರಲು ಸಣ್ಣ ಅನಾರೋಗ್ಯ ಕಾರಣ ಎಂದು ಅವರು ಹೇಳಿದ್ದಾರೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್​, ರಿಷಬ್​ ಶೆಟ್ಟಿ, ವಿಜಯ್​ ಕಿರಗಂದೂರು, ಯಶ್​ ಹಾಗೂ ಅಯ್ಯೋ ಶ್ರದ್ಧಾ ಅವರು ಮೋದಿಯವರನ್ನು ಭೇಟಿ ಮಾಡಿದರು. ಪ್ರಧಾನಿ ಭೇಟಿಗೆ ಸುದೀಪ್​ ಅವರಿಗೆ ಆಹ್ವಾನ ಇರಲಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ‘ಖಂಡಿತವಾಗಿ ಆಹ್ವಾನ ಇತ್ತು. ನೇರವಾಗಿ ಅವರ ಕಚೇರಿಯಿಂದಲೇ ಕರೆ ಬಂದಿತ್ತು. ನನ್ನನ್ನು ಗುರುತಿಸಿ ಕರೆದಿದ್ದಕ್ಕಾಗಿ ಧನ್ಯವಾದ ಹೇಳುತ್ತೇನೆ. ಬರುವುದಾಗಿ ನಾನು ಕೂಡ ಒಪ್ಪಿಕೊಂಡಿದ್ದೆ’ ಎಂದಿದ್ದಾರೆ ಸುದೀಪ್​.

ಮೋದಿ ಭೇಟಿ ವೇಳೆ ಸುದೀಪ್​ ಯಾಕೆ ಇರಲಿಲ್ಲ?

‘ನನಗೆ ಸ್ವಲ್ಪ ಹುಷಾರಿರಲಿಲ್ಲ. ಅಲ್ಲಿ ತುಂಬ ಕಟ್ಟುನಿಟ್ಟಾದ ಪ್ರೋಟೋಕಾಲ್​ ಇತ್ತು. ಶೀತ, ಜ್ವರ ಇತ್ಯಾದಿ ಇದ್ದರೆ ಆರ್​ಟಿಪಿಸಿಆರ್​ ಮಾಡಬೇಕಿತ್ತು. ಅದರಿಂದ ನನಗೆ ಕಂಫರ್ಟ್​ ಇರಲಿಲ್ಲ. ನನಗೆ ಸ್ವಲ್ಪ ಟೆಂಪ್ರೇಚರ್​ ಇತ್ತು. ಬೇರೆ ಬೇರೆ ಕೆಲಸಗಳಲ್ಲಿ ನಾನು ತೊಡಗಿಕೊಂಡಿದ್ದೆ. ಅಲ್ಲಿ ಹೋಗಿ ಪರೀಕ್ಷೆ ಮಾಡಿದ ಬಳಿಕ ಜ್ವರ ಇದೆ ಅಂತ ಒಳಗೆ ಬಿಡದಿದ್ದರೆ? ಅಲ್ಲಿತನಕ ಹೋಗಿ ವಾಪಸ್​ ಬಂದರೆ ತಪ್ಪಾಗುತ್ತದೆ. ಸಂಬಂಧಿಸಿದವರಿಗೆ ಫೋನ್​ ಮಾಡಿ ವಿಷಯ ತಿಳಿಸಿದೆ’ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ
Image
Vijay Kiragandur: ‘ಮೋದಿ ಜತೆ ಬೆರೆತಿದ್ದರಿಂದ ಪಾಸಿಟಿವ್​ ವೈಬ್ರೇಷನ್​ ಬಂತು’; ನಿರ್ಮಾಪಕ ವಿಜಯ್​ ಕಿರಗಂದೂರು
Image
Yash Meets Modi: ‘ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನೂ ಮೋದಿ ತಿಳಿದುಕೊಂಡಿರುವುದು ಅಚ್ಚರಿ ಎನಿಸಿತು’: ಯಶ್​
Image
Rishab Shetty: ‘ಮೋದಿ ಹಲವು ಬಾರಿ ಕಾಂತಾರ ಬಗ್ಗೆ ಮಾತಾಡಿದ್ದು ಕೇಳಿ ಖುಷಿ ಆಯ್ತು’: ಪ್ರಧಾನಿ ಭೇಟಿ ಬಗ್ಗೆ ರಿಷಬ್​ ಪ್ರತಿಕ್ರಿಯೆ
Image
PM Narendra Modi: ಪ್ರಧಾನಿ ಜತೆ ಸ್ಯಾಂಡಲ್​ವುಡ್ ಮಂದಿ; ಇಲ್ಲಿದೆ ಫೋಟೋ ಗ್ಯಾಲರಿ

ಇದನ್ನೂ ಓದಿ: Rishab Shetty: ‘ಮೋದಿ ಹಲವು ಬಾರಿ ಕಾಂತಾರ ಬಗ್ಗೆ ಮಾತಾಡಿದ್ದು ಕೇಳಿ ಖುಷಿ ಆಯ್ತು’: ಪ್ರಧಾನಿ ಭೇಟಿ ಬಗ್ಗೆ ರಿಷಬ್​ ಪ್ರತಿಕ್ರಿಯೆ

‘ನನಗೆ ಬರೋಕೆ ಆಗುತ್ತಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಇನ್ನೊಮ್ಮೆ ಖಂಡಿತವಾಗಿ ಭೇಟಿ ಮಾಡುತ್ತೇನೆ ಅಂತ ಫೋನ್​ ಮಾಡಿ ಹೇಳಿದೆ. ಮೋದಿ ಅವರನ್ನು ಭೇಟಿ ಮಾಡುವುದು ನಮ್ಮ ಅದೃಷ್ಟ. ನಮ್ಮ ನಾಯಕರಾದ ಅವರನ್ನು ನಾವು ತುಂಬ ಗೌರವಿಸುತ್ತೇವೆ. ಆದರೆ ಹುಷಾರಿಲ್ಲದ ಕಾರಣ ಅವರನ್ನು ಭೇಟಿಯಾಗುವ ಅವಕಾಶ ತಪ್ಪಿಹೋಯಿತು. ಅಲ್ಲಿಯ ತನಕ ಹೋದ ಮೇಲೆ ಒಳಗೆ ಪ್ರವೇಶ ಸಿಗದಿದ್ದರೆ ಏನು ಮಾಡೋದು ಅಂತ ನಮಗೂ ಭಯ ಇರುತ್ತದೆ’ ಎಂದಿದ್ದಾರೆ ಸುದೀಪ್​.

ಇದನ್ನೂ ಓದಿ: Aiyyo Shraddha: ಅಯ್ಯೋ ಶ್ರದ್ಧಾಗೆ ಮೋದಿಯಿಂದ ಸಿಕ್ತು ಉತ್ತಮ ಸಲಹೆ; ಪ್ರಧಾನಿ ಭೇಟಿಯ ಪೂರ್ತಿ ವಿವರ ಇಲ್ಲಿದೆ..

‘ದೊಡ್ಡ ವ್ಯಕ್ತಿಗಳು ಕರೆದಾಗ ಬರಲ್ಲ ಅಂತ ಹೇಳುವಷ್ಟು ದೊಡ್ಡವನು ನಾನಲ್ಲ. ಪ್ರಾಕ್ಟಿಕಲ್​ ಕಾರಣದಿಂದ ಭೇಟಿ ಆಗಲು ಸಾಧ್ಯವಾಗಲಿಲ್ಲ ಅಷ್ಟೇ. ನಮ್ಮ ಚಿತ್ರರಂಗದಿಂದ ಒಂದಷ್ಟು ಜನರನ್ನು ಕರೆಯಬೇಕು ಅಂದಾಗ ಅದರಲ್ಲಿ ನಮ್ಮ ಹೆಸರು ಕೂಡ ಇದೆ. ಅಷ್ಟು ಗೌರವ ಸಂಪಾದಿಸಿದ್ದಕ್ಕೆ ಹೆಮ್ಮೆ ಇದೆ. ನನ್ನ ದುರದೃಷ್ಟದಿಂದ ಹೋಗೋಕೆ ಆಗಲಿಲ್ಲ’ ಎಂದು ಸುದೀಪ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:26 pm, Wed, 15 February 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್