Yash Meets Modi: ‘ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನೂ ಮೋದಿ ತಿಳಿದುಕೊಂಡಿರುವುದು ಅಚ್ಚರಿ ಎನಿಸಿತು’: ಯಶ್​

Rocking Star Yash | PM Narendra Modi: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ನಟ ರಾಕಿಂಗ್​ ಸ್ಟಾರ್​ ಯಶ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಎಲ್ಲವನ್ನೂ ಅವರು ತುಂಬ ಶ್ರದ್ಧೆಯಿಂದ ಕೇಳಿದರು’ ಎಂದು ಯಶ್​ ಹೇಳಿದ್ದಾರೆ.

Yash Meets Modi: ‘ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನೂ ಮೋದಿ ತಿಳಿದುಕೊಂಡಿರುವುದು ಅಚ್ಚರಿ ಎನಿಸಿತು’: ಯಶ್​
ಯಶ್, ನರೇಂದ್ರ ಮೋದಿ
Follow us
ಮದನ್​ ಕುಮಾರ್​
|

Updated on:Feb 13, 2023 | 5:19 PM

‘ಏರೋ​ ಶೋ 2023’ ನಿಮಿತ್ತ ಬೆಂಗಳೂರಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕನ್ನಡ ಚಿತ್ರರಂಗದ ಕೆಲವು ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದಾರೆ. ಇದು ಇಡೀ ಚಂದನವನಕ್ಕೆ ಹೆಮ್ಮೆ ತಂದಿದೆ. ಕನ್ನಡದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದರಿಂದ ಇಷ್ಟೆಲ್ಲ ಸಾಧ್ಯವಾಗಿದೆ. ‘ಕೆಜಿಎಫ್: ಚಾಪ್ಟರ್​ 1​’ ಮತ್ತು ‘ಕೆಜಿಎಫ್: ಚಾಪ್ಟರ್​ 2’ (KGF Chapter 2) ಸಿನಿಮಾ ಮೂಲಕ ನಟ ಯಶ್​ ಅವರು ಕನ್ನಡ ಚಿತ್ರರಂಗದ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಅವರು ಕೂಡ ಭಾನುವಾರ (ಫೆಬ್ರವರಿ 12) ಸಂಜೆ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಏನೆಲ್ಲ ಚರ್ಚೆ ಆಯಿತು ಎಂಬುದನ್ನು ‘ರಾಕಿಂಗ್​ ಸ್ಟಾರ್​’ ಯಶ್​ (Yash) ತಿಳಿಸಿದ್ದಾರೆ.

‘ಮೋದಿ ಅವರು ಎಲ್ಲವನ್ನೂ ತುಂಬ ಶ್ರದ್ಧೆಯಿಂದ ಕೇಳಿದರು. ನಮ್ಮ ಚಿತ್ರರಂಗದ ಬಗ್ಗೆ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಕೂಡ ತಿಳಿಸಿದರು. ಸರ್ಕಾರದಿಂದ ಚಿತ್ರರಂಗದವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಅಂತ ವಿಚಾರಿಸಿದರು. ಚಿತ್ರರಂಗವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಚರ್ಚಿಸಿದರು’ ಎಂದು ಯಶ್​ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಔತಣಕೂಟದಲ್ಲಿ ಯಶ್, ರಿಷಬ್ ಶೆಟ್ಟಿ ಭಾಗಿ; ಫೋಟೋ ವೈರಲ್

ಇದನ್ನೂ ಓದಿ
Image
ಮೋದಿ ಭೇಟಿ ಮಾಡಿದ ಖುಷಿಯಲ್ಲಿ ಶ್ರದ್ಧಾ; ಮೊದಲ ಭೇಟಿಯಲ್ಲೇ ‘ಅಯ್ಯೋ’ ಎಂದ ಪ್ರಧಾನಿ
Image
PM Narendra Modi: ಪ್ರಧಾನಿ ಜತೆ ಸ್ಯಾಂಡಲ್​ವುಡ್ ಮಂದಿ; ಇಲ್ಲಿದೆ ಫೋಟೋ ಗ್ಯಾಲರಿ
Image
ಪಿಎಂ ಮೋದಿ ಭೇಟಿ ವೇಳೆ ವಿಶೇಷ ಮನವಿ ಇಟ್ಟ ರಾಕಿಂಗ್ ಸ್ಟಾರ್ ಯಶ್​; ಏನದು?
Image
ಪ್ರಧಾನಿ ಮೋದಿ ಔತಣಕೂಟದಲ್ಲಿ ಯಶ್, ರಿಷಬ್ ಶೆಟ್ಟಿ ಭಾಗಿ; ಫೋಟೋ ವೈರಲ್

‘ಪ್ರಧಾನ ಮಂತ್ರಿಗಳ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡುವ ಅವಕಾಶ ನಮಗೆ ಸಿಕ್ಕಿತು. ನಿಮಗೆ ಏನೇ ಬೇಕಿದ್ದರೂ ಬಂದು ಅವುಗಳನ್ನು ಪಡೆದುಕೊಳ್ಳಿ ಅಂತ ಹೇಳಿದರು.  ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನು ಕೂಡ ಅವರು ತಿಳಿದುಕೊಂಡಿರುವುದು ನನಗೆ ಅಚ್ಚರಿ ಎನಿಸಿತು. ಚಿತ್ರೋದ್ಯಮದ ಬಗ್ಗೆ ಅವರಿಗೆ ದೂರದೃಷ್ಟಿ ಇದೆ. ನಮ್ಮ ಕೆಲಸವನ್ನು ಅವರು ಹೊಗಳಿದರು. ಎಂದೆಂದಿಗೂ ಅವರು ನಮಗೆಲ್ಲ ಸ್ಫೂರ್ತಿ’ ಎಂದು ಯಶ್​ ಹೇಳಿದ್ದಾರೆ.

ಮೋದಿ ಭೇಟಿ ಬಗ್ಗೆ ರಿಷಬ್​ ಶೆಟ್ಟಿ ಹೇಳಿದ್ದೇನು?

‘ಕನಸು ನನಸಾದ ಕ್ಷಣ ಇದು. ಪ್ರಧಾನ ಮಂತ್ರಿ ಅವರನ್ನು ನಾನು ಮಹಾನ್​ ನಾಯಕರೆಂದು ತಿಳಿದಿದ್ದೇನೆ. ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬ ಖುಷಿ ಆಯಿತು. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದಲ್ಲಿ ಏನೆಲ್ಲ ನಡೆಯುತ್ತಿದೆ? ನಮಗೆ ಇಲ್ಲಿ ಇನ್ನೂ ಏನೆಲ್ಲ ಬೇಕು ಎಂಬ ಬಗ್ಗೆ ಅವರು ಕೇಳಿದರು. ಮುಂದಿನ ದಿನಗಳಲ್ಲಿ ಅವರು ಏನೆಲ್ಲ ಮಾಡಬಹುದು ಎಂಬುದನ್ನೂ ಹೇಳಿದರು’ ಎಂದಿದ್ದಾರೆ ರಿಷಬ್​ ಶೆಟ್ಟಿ.

ಇದನ್ನೂ ಓದಿ: ಮೋದಿ ಭೇಟಿ ಮಾಡಿದ ಖುಷಿಯಲ್ಲಿ ಶ್ರದ್ಧಾ; ಮೊದಲ ಭೇಟಿಯಲ್ಲೇ ‘ಅಯ್ಯೋ’ ಎಂದ ಪ್ರಧಾನಿ

‘ನಮ್ಮ ಕಾಂತಾರ ಚಿತ್ರದ ಬಗ್ಗೆ ತುಂಬ ಮಾತನಾಡಿದರು. ಈ ಚಿತ್ರದ ಬಗ್ಗೆ ಅವರು ಸಾಕಷ್ಟು ತಿಳಿದಿದ್ದಾರೆ. ನಮ್ಮ ನಾಡಿನ ಕಥೆ, ನಮ್ಮ ಜನಪದ, ನಮ್ಮ ನಂಬಿಕೆ, ಸಂಪ್ರದಾಯವನ್ನು ಇಟ್ಟುಕೊಂಡು ಮಾಡಿದ ಕಾಂತಾರ ಸಿನಿಮಾ ಜಾಗತಿಕ ಮಟ್ಟಕ್ಕೆ ಹೋಗಿದ್ದಕ್ಕೆ ಅಭಿನಂದನೆ ತಿಳಿಸಿದರು. ಅವರ ಬಾಯಲ್ಲಿ ಹಲವು ಬಾರಿ ಕಾಂತಾರ ಸಿನಿಮಾ ಬಗ್ಗೆ ಕೇಳಿ ಖುಷಿ ಆಯಿತು’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:19 pm, Mon, 13 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ