ಮೋದಿ ಭೇಟಿ ಮಾಡಿದ ಖುಷಿಯಲ್ಲಿ ಶ್ರದ್ಧಾ; ಮೊದಲ ಭೇಟಿಯಲ್ಲೇ ‘ಅಯ್ಯೋ’ ಎಂದ ಪ್ರಧಾನಿ

Aiyyo Shraddha: ಶ್ರದ್ಧಾ ತಾಯಿ ಟೀಚರ್, ತಂದೆ ಅಕೌಂಟೆಂಟ್. ಆರಂಭದಲ್ಲಿ ಶ್ರದ್ಧಾ ಐಟಿ ಕ್ಷೇತ್ರದಲ್ಲಿ ಇದ್ದರು. ನಂತರ ಅವರು ಕೆಲಸಬಿಟ್ಟರು. ಶ್ರದ್ಧಾ ಅವರು ಆರ್​ಜೆ ಆಗಿ ಕೆಲಸ ಮಾಡಿದ್ದರು.

ಮೋದಿ ಭೇಟಿ ಮಾಡಿದ ಖುಷಿಯಲ್ಲಿ ಶ್ರದ್ಧಾ; ಮೊದಲ ಭೇಟಿಯಲ್ಲೇ ‘ಅಯ್ಯೋ’ ಎಂದ ಪ್ರಧಾನಿ
ಮೋದಿ ಜೊತೆ ಶ್ರದ್ಧಾ
Follow us
ರಾಜೇಶ್ ದುಗ್ಗುಮನೆ
|

Updated on:Feb 13, 2023 | 2:28 PM

ಸ್ಟ್ಯಾಂಡಪ್ ಕಾಮಿಡಿಯನ್ ಆಗಿ, ಕಲಾವಿದೆಯಾಗಿ ಫೇಮಸ್ ಆದವರು ಶ್ರದ್ಧಾ (Aiyyo Shraddha) . ಅವರು ಅಯ್ಯೋ ಶ್ರದ್ಧಾ ಎಂದೇ ಫೇಮಸ್. ಈಗ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಹಂಚಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ ದಿಗ್ಗಜರ ಜತೆ ಅವರಿಗೂ ಮೋದಿಯನ್ನು ಭೇಟಿ ಮಾಡೋ ಅವಕಾಶ ಸಿಕ್ಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಪ್ರದರ್ಶನ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ (ಫೆಬ್ರವರಿ 12) ಅವರು ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದರು. ಈ ವೇಳೆ ನಟ ಯಶ್, ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ, ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು ಅವರನ್ನು ಭೇಟಿ ಆಗಿದ್ದಾರೆ. ಇವರ ಜತೆ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ ಕೂಡ ಇದ್ದರು.

ಶ್ರದ್ಧಾ ತಾಯಿ ಟೀಚರ್, ತಂದೆ ಅಕೌಂಟೆಂಟ್. ಶ್ರದ್ಧಾ ಆರಂಭದಲ್ಲಿ ಐಟಿ ಕ್ಷೇತ್ರದಲ್ಲಿ ಇದ್ದರು. ಈ ಕೆಲಸದ ಮೇಲೆ ಅವರಿಗೆ ಆಸಕ್ತಿ ಹೋಯಿತು.  ಹೀಗಾಗಿ  ಕೆಲಸಬಿಟ್ಟರು. ನಂತರ ಶ್ರದ್ಧಾ ಅವರು ಆರ್​ಜೆ ಆದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರಕಂಡ ‘ಪುಷ್ಪವಲ್ಲಿ’ ಸೀರಿಸ್​ನಲ್ಲಿ ಅವರು ನಟಿಸಿದ್ದರು. ಪಿಜಿ ವಾರ್ಡನ್ ಆಗಿ ಗಮನ ಸೆಳೆದಿದ್ದರು.  ಅವರು ಮಾಡಿದ ವಾಸು ಹೆಸರಿನ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಇತ್ತೀಚೆಗೆ ತೆರೆಗೆ ಬಂದ ಆಯುಷ್ಮಾನ್ ಖುರಾನಾ ನಟನೆಯ ಹಿಂದಿ ಚಿತ್ರ ‘ಡಾಕ್ಟರ್​ ಜಿ’ನಲ್ಲಿ ಶ್ರದ್ಧಾ ನಟಿಸಿದ್ದರು.

ಇದನ್ನೂ ಓದಿ: ಪಿಎಂ ಮೋದಿ ಭೇಟಿ ವೇಳೆ ವಿಶೇಷ ಮನವಿ ಇಟ್ಟ ರಾಕಿಂಗ್ ಸ್ಟಾರ್ ಯಶ್​; ಏನದು?

ಈಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ‘ಪ್ರಧಾನಿ ಅವರನ್ನು ಭೇಟಿ ಮಾಡಿದೆ’ ಎಂದು ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಭೇಟಿ ವೇಳೆ ಪ್ರಧಾನಿ ಮೋದಿ ಅವರ ಆಡಿದ ಮೊದಲ ಮಾತು ‘ಅಯ್ಯೋ’ ಎಂದು! ಈ ವಿಚಾರವನ್ನು ಕೂಡ ಶ್ರದ್ಧಾ ರಿವೀಲ್ ಮಾಡಿದ್ದಾರೆ. ಜತೆಗೆ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಶ್ರದ್ಧಾ ಹಂಚಿಕೊಂಡಿರುವ ಫೋಟೋಗೆ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನೀವು ಮೋದಿ ಭೇಟಿ ಮಾಡಲು ಹೇಗೆ ಸಿದ್ಧರಾದಿರಿ ಎಂಬುದನ್ನು ವಿಡಿಯೋ ಮಾಡಿ ಹಾಕಿ’ ಎಂದು ಅನೇಕರು ಕೋರಿದ್ದಾರೆ. ‘ಮಿತ್ರೋ ಹಾಗೂ ಅಯ್ಯೋ ಒಂದಾದಾಗ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಹಲವು ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ಇದೇ ವಿಚಾರ ಇಟ್ಟುಕೊಂಡು ಶ್ರದ್ಧಾ ವಿಡಿಯೋ ಮಾಡಿದ್ದರು. ಈ ವಿಡಿಯೋ 23 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಐಟಿ ಉದ್ಯೋಗಿಗಳಿಗೆ ಈ ವಿಡಿಯೋ ಹೆಚ್ಚು ಇಷ್ಟ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:07 pm, Mon, 13 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ