AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aiyyo Shraddha: ಅಯ್ಯೋ ಶ್ರದ್ಧಾಗೆ ಮೋದಿಯಿಂದ ಸಿಕ್ತು ಉತ್ತಮ ಸಲಹೆ; ಪ್ರಧಾನಿ ಭೇಟಿಯ ಪೂರ್ತಿ ವಿವರ ಇಲ್ಲಿದೆ..

Aiyyo Shraddha | PM Narendra Modi: ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಅವರು ‘ಅಯ್ಯೋ ಶ್ರದ್ಧಾ’ ಅಂತಲೇ ಫೇಮಸ್​ ಆಗಿದ್ದಾರೆ. ಅವರ ವಿಡಿಯೋಗಳನ್ನು ಅನೇಕ ಸೆಲೆಬ್ರಿಟಿಗಳು ನೋಡುತ್ತಾರೆ.

Aiyyo Shraddha: ಅಯ್ಯೋ ಶ್ರದ್ಧಾಗೆ ಮೋದಿಯಿಂದ ಸಿಕ್ತು ಉತ್ತಮ ಸಲಹೆ; ಪ್ರಧಾನಿ ಭೇಟಿಯ ಪೂರ್ತಿ ವಿವರ ಇಲ್ಲಿದೆ..
ಅಯ್ಯೋ ಶ್ರದ್ಧಾ, ನರೇಂದ್ರ ಮೋದಿ
ಮದನ್​ ಕುಮಾರ್​
|

Updated on: Feb 13, 2023 | 7:15 PM

Share

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕನ್ನಡ ಚಿತ್ರರಂಗದ ಕೆಲವು ಗಣ್ಯರನ್ನು ಭೇಟಿ ಮಾಡಿರುವುದು ಸೆನ್ಸೇಷನ್​ ಕ್ರಿಯೇಟ್​ ಮಾಡಿದೆ. ಯಶ್​, ರಿಷಬ್​ ಶೆಟ್ಟಿ, ವಿಜಯ್​ ಕಿರಗಂದೂರು ಹಾಗೂ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಜೊತೆ ಅಯ್ಯೋ ಶ್ರದ್ಧಾ (Aiyyo Shraddha) ಅಲಿಯಾಸ್​ ಶ್ರದ್ಧಾ ಜೈನ್​ ಕೂಡ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ರಾಜಭವನದಲ್ಲಿ ಫೆಬ್ರವರಿ 12ರ ಸಂಜೆ ಈ ಭೇಟಿ ನಡೆಯಿತು. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಕ್ರೀಡಾಲೋಕದ ಕೆಲವು ಸಾಧಕರು ಕೂಡ ಈ ವೇಳೆ ಹಾಜರಿದ್ದರು. ಇಂಥ ಅಪರೂಪದ ಅವಕಾಶ ಸಿಕ್ಕಿದ್ದಕ್ಕೆ ಅಯ್ಯೋ ಶ್ರದ್ಧಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

‘ನಂಬೋಕೆ ಸಾಧ್ಯವಾಗಲಿಲ್ಲ’

ಪ್ರಧಾನಿಯನ್ನು ಭೇಟಿ ಆಗುವಂತಹ ಅವಕಾಶ ಎಲ್ಲರಿಗೂ ಸಿಗುವಂಥದ್ದಲ್ಲ. ಅದರ ಸಲುವಾಗಿ ಕರೆಬಂದಾಗ ಶ್ರದ್ಧಾ ಮೊದಲಿಗೆ ನಂಬಿಕೆ ಬರಲಿಲ್ಲ. ‘ಪಿಎಂ ಕಚೇರಿಯಿಂದ ಫೋನ್​ ಬಂದಾಗ ನನಗೆ ಆಶ್ಚರ್ಯ ಆಯ್ತು. ಪ್ರ್ಯಾಂಕ್​ ಕಾಲ್​ ಇರಬಹುದಾ ಅಂತ ವಿಚಾರಿಸಿದೆ. ನಂತರ ಅವರು ಖಚಿತ ಪಡಿಸಿದರು. ಏನೆಲ್ಲಾ ಪ್ರೋಟೋಕಾಲ್ ಫಾಲೋ ಮಾಡಬೇಕು ಎಂಬುದನ್ನು ವಿವರಿಸಿದರು. ಆಗಲೂ ನಾನು ನಂಬಲಿಲ್ಲ. ಫೋನ್​ ಇಟ್ಟಮೇಲೆ ಆ ನಂಬರ್​ ಯಾವುದು ಅಂತ ಗೂಗಲ್​ ಮಾಡಿದ ಬಳಿಕ ನಿಜ ಅಂತ ತಿಳಿಯಿತು’ ಎಂದಿದ್ದಾರೆ ಅಯ್ಯೋ ಶ್ರದ್ಧಾ.

ಇದನ್ನೂ ಓದಿ
Image
Vijay Kiragandur: ‘ಮೋದಿ ಜತೆ ಬೆರೆತಿದ್ದರಿಂದ ಪಾಸಿಟಿವ್​ ವೈಬ್ರೇಷನ್​ ಬಂತು’; ನಿರ್ಮಾಪಕ ವಿಜಯ್​ ಕಿರಗಂದೂರು
Image
Yash Meets Modi: ‘ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನೂ ಮೋದಿ ತಿಳಿದುಕೊಂಡಿರುವುದು ಅಚ್ಚರಿ ಎನಿಸಿತು’: ಯಶ್​
Image
Rishab Shetty: ‘ಮೋದಿ ಹಲವು ಬಾರಿ ಕಾಂತಾರ ಬಗ್ಗೆ ಮಾತಾಡಿದ್ದು ಕೇಳಿ ಖುಷಿ ಆಯ್ತು’: ಪ್ರಧಾನಿ ಭೇಟಿ ಬಗ್ಗೆ ರಿಷಬ್​ ಪ್ರತಿಕ್ರಿಯೆ
Image
PM Narendra Modi: ಪ್ರಧಾನಿ ಜತೆ ಸ್ಯಾಂಡಲ್​ವುಡ್ ಮಂದಿ; ಇಲ್ಲಿದೆ ಫೋಟೋ ಗ್ಯಾಲರಿ

ಇದನ್ನೂ ಓದಿ: Vijay Kiragandur: ‘ಮೋದಿ ಜತೆ ಬೆರೆತಿದ್ದರಿಂದ ಪಾಸಿಟಿವ್​ ವೈಬ್ರೇಷನ್​ ಬಂತು’; ನಿರ್ಮಾಪಕ ವಿಜಯ್​ ಕಿರಗಂದೂರು

‘ಎಲ್ಲರೂ ಗುರುತಿಸಿ ಮಾತನಾಡಿಸಿದ್ರು’:

ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಅವರು ‘ಅಯ್ಯೋ ಶ್ರದ್ಧಾ’ ಅಂತಲೇ ಫೇಮಸ್​ ಆಗಿದ್ದಾರೆ. ಅವರ ವಿಡಿಯೋಗಳನ್ನು ಅನೇಕ ಸೆಲೆಬ್ರಿಟಿಗಳು ನೋಡುತ್ತಾರೆ. ರಾಜಭವನದಲ್ಲಿ ಸೇರಿದ್ದ ಗಣ್ಯರೆಲ್ಲರಿಗೂ ಶ್ರದ್ಧಾ ಅವರ ಬಗ್ಗೆ ತಿಳಿದಿತ್ತು. ‘ಜಾವಗಲ್​ ಶ್ರೀನಾಥ್​ ಅವರು ನನ್ನ ಹೆಸರು ಕರೆದು ಮಾತನಾಡಿಸಿದರು. ಅನಿಲ್​ ಕುಂಬ್ಳೆ ಮತ್ತು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕೂಡ ಚೆನ್ನಾಗಿ ನನ್ನ ಜೊತೆ ಬೆರೆತರು. ಅವರೆಲ್ಲರೂ ನನಗಿಂತ ತುಂಬ ದೊಡ್ಡ ಸೆಲೆಬ್ರಿಟಿಗಳು ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ’ ಎಂದಿದ್ದಾರೆ ಶ್ರದ್ಧಾ.

ಇದನ್ನೂ ಓದಿ: Yash Meets Modi: ‘ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನೂ ಮೋದಿ ತಿಳಿದುಕೊಂಡಿರುವುದು ಅಚ್ಚರಿ ಎನಿಸಿತು’: ಯಶ್​

‘ಅಯ್ಯೋ’ ಎಂದು ಮಾತಾಡಿಸಿದ ಮೋದಿ:

‘ನನ್ನನ್ನು ಭೇಟಿ ಆದಾಗ ಮೋದಿ ಅವರು ಅಯ್ಯೋ ಅಂತ ಹೇಳಿದರು. ಅದು ನನಗೆ ಆಶ್ಚರ್ಯ ಆಯಿತು. ದಕ್ಷಿಣ ಭಾರತವನ್ನು ಸಿನಿಮಾಗಳಲ್ಲಿ ಎಷ್ಟು ಚೆನ್ನಾಗಿ ತೋರಿಸಲಾಗುತ್ತಿದೆ ಅಂತ ಮೋದಿ ಹೊಗಳಿದರು. ಪುನೀತ್​ ರಾಜ್​ಕುಮಾರ್​ ಅವರ ಗಂಧದ ಗುಡಿ ಬಗ್ಗೆ ಮಾತನಾಡಿದರು. ದಿಸ್​ ಈಸ್​ ಇಂಡಿಯಾ ಅಂತ ಹೇಳಿದರು. ಎಲ್ಲರ ಬೆನ್ನು ತಟ್ಟಿದರು. ನನ್ನ ಕೆಲಸವನ್ನು ಗುರುತಿಸಿದರು. ನಮ್ಮೆಲ್ಲರಿಂದ ಸಲಹೆಗಳನ್ನ ಕೇಳಿದರು’ ಎಂದಿದ್ದಾರೆ ಶ್ರದ್ಧಾ.

ಮಹಿಳೆಯರಿಗೆ ಬೆಂಬಲ ನೀಡುವಂತೆ ಮೋದಿ ಸಲಹೆ:

ಅಯ್ಯೋ ಶ್ರದ್ಧಾ ಅವರು ಮಾಡಿದ ಅನೇಕ ವಿಡಿಯೋಗಳು ವೈರಲ್​ ಆಗಿವೆ. ಅದನ್ನು ಮೋದಿ ಗಮನಿಸಿದ್ದಾರೆ. ‘ಕಾಮಿಡಿ ಕ್ಷೇತ್ರದಲ್ಲಿ ಹುಡುಗರು ಜಾಸ್ತಿ ಇದ್ದಾರೆ. ಅಂಥದ್ದಲ್ಲಿ ನೀವು ಕೂಡ ಗುರುತಿಸಿಕೊಂಡಿದ್ದೀರಿ’ ಎಂದು ಶ್ರದ್ಧಾ ಅವರನ್ನು ಮೋದಿ ಹೊಗಳಿದ್ದಾರೆ. ಅದರ ಜೊತೆಗೆ ಒಂದು ಸಲಹೆ ಕೂಡ ನೀಡಿದ್ದಾರೆ. ‘ಡಿಜಿಟಲ್​ ಕಂಟೆಂಟ್​ ಕ್ಷೇತ್ರದಲ್ಲಿ ಹುಡುಗಿಯರಿಗೆ ಹೆಚ್ಚು ಬೆಂಬಲ ನೀಡಿ’ ಎಂದು ಮೋದಿ ಸಲಹೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ