Vijay Kiragandur: ‘ಮೋದಿ ಜತೆ ಬೆರೆತಿದ್ದರಿಂದ ಪಾಸಿಟಿವ್​ ವೈಬ್ರೇಷನ್​ ಬಂತು’; ನಿರ್ಮಾಪಕ ವಿಜಯ್​ ಕಿರಗಂದೂರು

Hombale Films | Vijay Kiragandur: ‘10ರಿಂದ 12 ನಿಮಿಷಗಳ ಕಾಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ನಾವು ಸಮಯ ಕಳೆದಿದ್ದು ತುಂಬ ಚೆನ್ನಾಗಿತ್ತು’ ಎಂದು ‘ಕಾಂತಾರ’ ಚಿತ್ರದ ನಿರ್ಮಾಪಕ ವಿಜಯ್​ ಕಿರಗಂದೂರು ಹೇಳಿದ್ದಾರೆ.

Vijay Kiragandur: ‘ಮೋದಿ ಜತೆ ಬೆರೆತಿದ್ದರಿಂದ ಪಾಸಿಟಿವ್​ ವೈಬ್ರೇಷನ್​ ಬಂತು’; ನಿರ್ಮಾಪಕ ವಿಜಯ್​ ಕಿರಗಂದೂರು
ವಿಜಯ್ ಕಿರಗಂದೂರು, ನರೇಂದ್ರ ಮೋದಿ
Follow us
|

Updated on: Feb 13, 2023 | 5:56 PM

ನಿರ್ಮಾಪಕ ವಿಜಯ್​ ಕಿರಗಂದೂರು ಅವರು ದೇಶಾದ್ಯಂತ ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಒಡೆತನದ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ (Hombale Films) ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನರೇಂದ್ರ ಮೋದಿ (Narendra Modi) ಅವರನ್ನು ವಿಜಯ್​ ಕಿರಗಂದೂರು ಭೇಟಿ ಆಗಿದ್ದಾರೆ. ಭಾನುವಾರ (ಫೆಬ್ರವರಿ 12) ಸಂಜೆ ಬೆಂಗಳೂರಿನಲ್ಲಿ ಈ ಭೇಟಿ ನಡೆದಿದೆ. ರಾಜಭವನದಲ್ಲಿ ಪ್ರಧಾನ ಮಂತ್ರಿಗಳ ಜೊತೆ ಮಾತನಾಡಿದ ಬಳಿಕ ಆ ಕ್ಷಣದ ಅನುಭವ ಹೇಗಿತ್ತು ಎಂಬುದನ್ನು ವಿಜಯ್​ ಕಿರಗಂದೂರು (Vijay Kiragandur) ಅವರು ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರರಂಗದ ಸೆಲೆಬ್ರಿಟಿಗಳನ್ನು ಭೇಟಿ ಆಗಿದ್ದು ಇದೇ ಮೊದಲೇನಲ್ಲ. ಆದರೆ ಕನ್ನಡ ಚಿತ್ರರಂಗದ ಪಾಲಿಗೆ ಇದೇ ಮೊದಲು. ಹಾಗಾಗಿ ಈ ಭೇಟಿ ತುಂಬ ವಿಶೇಷ ಎನಿಸಿಕೊಂಡಿದೆ. ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವಂತಹ ಯಶ್​, ರಿಷಬ್​ ಶೆಟ್ಟಿ, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಜೊತೆ ವಿಜಯ್​ ಕಿರಗಂದೂರು ಅವರನ್ನೂ ಪ್ರಧಾನಿ ಭೇಟಿ ಮಾಡಿದ್ದಾರೆ. ಈ ಭೇಟಿಯಿಂದಾಗಿ ಇಡೀ ಚಿತ್ರರಂಗಕ್ಕೆ ಸ್ಫೂರ್ತಿ ಸಿಕ್ಕಂತೆ ಆಗಿದೆ.

ಇದನ್ನೂ ಓದಿ: Rishab Shetty: ‘ಮೋದಿ ಹಲವು ಬಾರಿ ಕಾಂತಾರ ಬಗ್ಗೆ ಮಾತಾಡಿದ್ದು ಕೇಳಿ ಖುಷಿ ಆಯ್ತು’: ಪ್ರಧಾನಿ ಭೇಟಿ ಬಗ್ಗೆ ರಿಷಬ್​ ಪ್ರತಿಕ್ರಿಯೆ

ಇದನ್ನೂ ಓದಿ
Image
ಮೋದಿ ಭೇಟಿ ಮಾಡಿದ ಖುಷಿಯಲ್ಲಿ ಶ್ರದ್ಧಾ; ಮೊದಲ ಭೇಟಿಯಲ್ಲೇ ‘ಅಯ್ಯೋ’ ಎಂದ ಪ್ರಧಾನಿ
Image
PM Narendra Modi: ಪ್ರಧಾನಿ ಜತೆ ಸ್ಯಾಂಡಲ್​ವುಡ್ ಮಂದಿ; ಇಲ್ಲಿದೆ ಫೋಟೋ ಗ್ಯಾಲರಿ
Image
ಪಿಎಂ ಮೋದಿ ಭೇಟಿ ವೇಳೆ ವಿಶೇಷ ಮನವಿ ಇಟ್ಟ ರಾಕಿಂಗ್ ಸ್ಟಾರ್ ಯಶ್​; ಏನದು?
Image
ಪ್ರಧಾನಿ ಮೋದಿ ಔತಣಕೂಟದಲ್ಲಿ ಯಶ್, ರಿಷಬ್ ಶೆಟ್ಟಿ ಭಾಗಿ; ಫೋಟೋ ವೈರಲ್

‘10ರಿಂದ 12 ನಿಮಿಷಗಳ ಕಾಲ ಪ್ರಧಾನ ಮಂತ್ರಿಗಳ ಜೊತೆ ನಾವು ಸಮಯ ಕಳೆದಿದ್ದು ತುಂಬ ಚೆನ್ನಾಗಿತ್ತು. ಕನ್ನಡ ಚಿತ್ರರಂಗ, ದಕ್ಷಿಣ ಭಾರತದ ಚಿತ್ರರಂಗ ಹಾಗೂ ಇಡೀ ಭಾರತೀಯ ಸಿನಿಮಾರಂಗದ ಬಗ್ಗೆ ಅವರು ನಮಗೆ ತುಂಬ ಚೆನ್ನಾಗಿ ಮಾರ್ಗದರ್ಶನ ನೀಡಿದರು. ನಮ್ಮ ಆಲೋಚನೆಗಳನ್ನು ಕೂಡ ನಾವು ಅವರ ಬಳಿ ಹಂಚಿಕೊಂಡೆವು. ಈ ರೀತಿ ಅವರ ಜೊತೆ ಬೆರೆತಿದ್ದರಿಂದ ಪಾಸಿಟಿವ್​ ವೈಬ್ರೇಷನ್​ ಬಂತು’ ಎಂದು ವಿಜಯ್​ ಕಿರಗಂದೂರು ಹೇಳಿದ್ದಾರೆ.

ಮೋದಿ ಭೇಟಿ ಬಗ್ಗೆ ಯಶ್​ ಪ್ರತಿಕ್ರಿಯೆ:

‘ಮೋದಿ ಅವರು ಎಲ್ಲವನ್ನೂ ತುಂಬ ಶ್ರದ್ಧೆಯಿಂದ ಕೇಳಿದರು. ನಮ್ಮ ಚಿತ್ರರಂಗದ ಬಗ್ಗೆ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಕೂಡ ತಿಳಿಸಿದರು. ಸರ್ಕಾರದಿಂದ ಚಿತ್ರರಂಗದವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಅಂತ ವಿಚಾರಿಸಿದರು. ಚಿತ್ರರಂಗವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಚರ್ಚಿಸಿದರು. ಚಿತ್ರೋದ್ಯಮದ ಬಗ್ಗೆ ಅವರಿಗೆ ದೂರದೃಷ್ಟಿ ಇದೆ. ನಮ್ಮ ಕೆಲಸವನ್ನು ಅವರು ಹೊಗಳಿದರು. ಎಂದೆಂದಿಗೂ ಅವರು ನಮಗೆಲ್ಲ ಸ್ಫೂರ್ತಿ’ ಎಂದು ಯಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.