ಓಹಿಯೋದ ಬರ್ತ್ ಡೇ ಪಾರ್ಟಿಯಲ್ಲಿ 27 ಮಂದಿ ಮೇಲೆ ಸಾಮೂಹಿಕ ಗುಂಡಿನ ದಾಳಿ, ಓರ್ವ ಸಾವು
ಅಮೆರಿಕದ ಓಹಿಯೋದಲ್ಲಿ ನಡೆದ ಬರ್ತ್ ಡೇ ಪಾರ್ಟಿಯೊಂದರಲ್ಲಿ 27 ಮಂದಿ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆದ ಪರಿಣಾಮ ಒಬ್ಬರ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಭಾನುವಾರ ಬೆಳಗ್ಗೆ ಓಹಿಯೋದ ಅಕ್ರಾನ್ನಲ್ಲಿ 27 ಮಂದಿ ಮೇಲೆ ಗುಂಡು ಹಾರಿಸಲಾಗಿದ್ದು, ಓರ್ವ ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಮೆರಿಕದ ಓಹಿಯೋದಲ್ಲಿ ನಡೆದ ಬರ್ತ್ ಡೇ ಪಾರ್ಟಿಯೊಂದರಲ್ಲಿ 27 ಮಂದಿ ಮೇಲೆ ಸಾಮೂಹಿಕ ಗುಂಡಿನ ದಾಳಿ(Firing) ನಡೆದ ಪರಿಣಾಮ ಒಬ್ಬರ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಭಾನುವಾರ ಬೆಳಗ್ಗೆ ಓಹಿಯೋದ ಅಕ್ರಾನ್ನಲ್ಲಿ 27 ಮಂದಿ ಮೇಲೆ ಗುಂಡು ಹಾರಿಸಲಾಗಿದ್ದು, ಓರ್ವ ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸ್ಥಳೀಯ ವರದಿಗಳ ಪ್ರಕಾರ ಗುಂಡಿನ ದಾಳಿಯ ನಂತರ ಹಲವು ಆಸ್ಪತ್ರೆಗಳನ್ನು ಲಾಕ್ಡೌನ್ ಮಾಡಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಯಾವ ಕಾರಣಗಳಿಗಾಗಿ ಗುಂಡಿನ ದಾಳಿ ನಡೆಸಲಾಗಿದೆ, ಆತನಿಗೆ ಏನಾದರೂ ದ್ವೇಷವಿತ್ತೇ ಅಥವಾ ಮಾನಸಿಕ ಅಸ್ವಸ್ಥನೇ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ