ಕೊರೊನಾ ಮಹಾಮಾರಿ ಇಡೀ ಮಾನವ ಕುಲವನ್ನೇ ತನ್ನ ಕಬಂಧಬಾಹುವಿನಲ್ಲಿ ಬಂಧಿಸಿಬಿಟ್ಟಿದೆ. ಜಗತ್ತಿನಾದ್ಯಂತ ದಾಪುಗಾಲಿಡುತ್ತಾ ಮುನ್ನುಗ್ಗುತ್ತಿರುವ ಕೊರೊನಾ ವೈರಸ್ನ ಹರಡುವಿಕೆಯನ್ನು ತಡೆಯಲು ಸದ್ಯಕ್ಕೆ ನಮ್ಮ ಬಳಿಯಿರುವ ಅಸ್ತ್ರವೆಂದರೆ ಅದು ಮಾಸ್ಕ್.
ನಾವು Mask ಹಾಕ್ಕೊಳ್ಳಲ್ಲಾ.. ಅಂತಾ ಮೊಂಡಾಟ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆ
ಹೌದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸದ್ಯಕ್ಕೆ ಈ ಹೆಮ್ಮಾರಿ ನಮ್ಮ ಹೆಗಲನ್ನೇರದಂತೆ ತಡೆಯಲು ಇರುವ ಅಸ್ತ್ರಗಳು. ಅಂದ ಹಾಗೆ, ಈ ಮಾಸ್ಕ್ ಎಂಬ ಬ್ರಹ್ಮಾಸ್ತ್ರ ಕೇವಲ ಇಂದಿನ ಕಾಲದಲ್ಲಿ ಮಾತ್ರವಲ್ಲದೆ 1918ರಲ್ಲಿ ವಿಶ್ವವನ್ನೇ ನಲುಗಿಸಿದ್ದ ಸ್ಪ್ಯಾನಿಷ್ ಫ್ಲೂ ಮಹಾಮಾರಿಯ ವಿರುದ್ಧವೂ ಪರಿಣಾಮ ಕಾರಿ ಅಸ್ತ್ರವಾಗಿ ಮಾರ್ಪಟ್ಟಿತ್ತು.
ವಿಶ್ವದ ಪ್ರತಿಷ್ಠಿತ ಜನಸೇವಾಪರ ಸಂಸ್ಥೆ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸ್ಪ್ಯಾನಿಷ್ ಫ್ಲೂ ಕಾಲದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಿತ್ತು. ಇದೀಗ, ಅದೇ ಸೂಚನೆಯನ್ನು ಮತ್ತೊಮ್ಮೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ, 1918ರಲ್ಲಿ ಹೇಳಿದ್ವಿ, 2020ರಲ್ಲೂ ಅದನ್ನೇ ಹೇಳುತ್ತೇವೆ. ಮಾಸ್ಕ್ ಧರಿಸಿ, ಜೀವ ಉಳಿಸಿ ಎಂದು ಟ್ವೀಟ್ ಮಾಡಿದೆ.
We said it in 1918.
We're saying it in 2020. pic.twitter.com/HsfKnL4T9A
— ICRC (@ICRC) October 2, 2020
Published On - 7:18 pm, Sun, 4 October 20