AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ಗಡಿಯಲ್ಲಿ ರಷ್ಯಾ ಭೀಕರ ಡ್ರೋನ್ ದಾಳಿ: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಯಾಣಿಸುತ್ತಿದ್ದ ರೈಲು ಕೂದಲೆಳೆಯ ಅಂತರದಲ್ಲಿ ಪಾರು

ಪೋಲೆಂಡ್-ಉಕ್ರೇನ್ ಗಡಿಯಲ್ಲಿ ನಡೆದ ಭೀಕರ ರಷ್ಯಾ ಡ್ರೋನ್ ದಾಳಿಯಿಂದ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸಹಿತ ಯುರೋಪಿಯನ್ ಗಣ್ಯರಿದ್ದ ರೈಲು ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ರೈಲಿನ ಹಿಂದಿನ ಬೋಗಿಗೆ ಡ್ರೋನ್ ಅಪ್ಪಳಿಸಿದ್ದು, ತಕ್ಷಣದ ಸ್ಥಳಾಂತರದಿಂದ ಪ್ರಾಣಾಪಾಯ ತಪ್ಪಿದೆ. ಈ ದಾಳಿಯನ್ನು ಜಾನ್ಸನ್ ಖಂಡಿಸಿದ್ದು, ರಷ್ಯಾದ ಆಸ್ತಿ ಮುಟ್ಟುಗೋಲಿಗೆ ಆಗ್ರಹಿಸಿದ್ದಾರೆ. NATO ಗಡಿಯ ಸಮೀಪದ ಈ ಘಟನೆ ಯುದ್ಧ ವಿಸ್ತರಣೆಯ ಆತಂಕ ಹೆಚ್ಚಿಸಿದೆ.

ಉಕ್ರೇನ್ ಗಡಿಯಲ್ಲಿ ರಷ್ಯಾ ಭೀಕರ ಡ್ರೋನ್ ದಾಳಿ: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಯಾಣಿಸುತ್ತಿದ್ದ ರೈಲು ಕೂದಲೆಳೆಯ ಅಂತರದಲ್ಲಿ ಪಾರು
ಬೋರಿಸ್ ಜಾನ್ಸನ್Image Credit source: Indian Express
ನಯನಾ ರಾಜೀವ್
|

Updated on: Sep 14, 2026 | 7:57 AM

Share

ಕೀವ್, ಸೆಪ್ಟೆಂಬರ್ 14: ಪೋಲೆಂಡ್ ಮತ್ತು ಉಕ್ರೇನ್ ಗಡಿಭಾಗದ ರೈಲ್ವೆ ಕ್ರಾಸಿಂಗ್ ಬಳಿ ರಷ್ಯಾ ನಡೆಸಿದ ಭೀಕರ ಡ್ರೋನ್ ದಾಳಿಯಿಂದ ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಯುರೋಪಿಯನ್ ರಾಜತಾಂತ್ರಿಕ ನಿಯೋಗ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಯಾಹೋದಿನ್-ಡೊರೊಹಸ್ಕ್ ಗಡಿ ದಾಟುವ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಜಾನ್ಸನ್ ಅವರಿದ್ದ ರೈಲಿನ ಕೂಗಳತೆಯ ದೂರದಲ್ಲಿದ್ದ ಮತ್ತೊಂದು ರೈಲಿನ ಎಂಜಿನ್‌ಗೆ ರಷ್ಯಾದ ಡ್ರೋನ್ ನೇರವಾಗಿ ಅಪ್ಪಳಿಸಿದೆ. ಅದೃಷ್ಟವಶಾತ್ ಸಮಯಪ್ರಜ್ಞೆಯಿಂದ ಪ್ರಯಾಣಿಕರನ್ನು ತಕ್ಷಣ ಸ್ಥಳಾಂತರಿಸಿದ್ದರಿಂದ ಭಾರಿ ಪ್ರಾಣಾಪಾಯ ತಪ್ಪಿದೆ.

ರೈಲಿನಲ್ಲಿ ಯುರೋಪಿಯನ್ ಗಣ್ಯರ ದಂಡು: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಸ್ವೀಡನ್‌ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್, ಜರ್ಮನಿಯ ಭದ್ರತಾ ಸಲಹೆಗಾರ ಗುಂಟರ್ ಸೌಟರ್ ಸೇರಿದಂತೆ ಹಲವು ಹಿರಿಯ ರಾಜತಾಂತ್ರಿಕರು ಮತ್ತು ಜರ್ಮನ್ ಸಂಸದರು ವಿಶೇಷ ಚಾರ್ಟರ್ಡ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ಡ್ರೋನ್ ಎಚ್ಚರಿಕೆ ಹಾಗೂ ತುರ್ತು ನಿಲುಗಡೆ: ಡ್ರೋನ್ ದಾಳಿಯ ರೆಡ್ ಅಲರ್ಟ್ ಸಿಗುತ್ತಿದ್ದಂತೆ ರೈಲನ್ನು ನಿಲ್ಲಿಸಿ, ಸಿಬ್ಬಂದಿ ಪ್ರಯಾಣಿಕರನ್ನು ಎಚ್ಚರಿಸಿ ಕೆಳಗಿಳಿಯಲು ಸೂಚಿಸಿದರು. ಜಾನ್ಸನ್ ಅವರ ರೈಲು ಗಡಿ ದಾಟಿದ ಕೆಲವೇ ನಿಮಿಷಗಳಲ್ಲಿ ಅದರ ಹಿಂದೆಯೇ ಬಂದ ಮತ್ತೊಂದು ರೈಲಿನ ಎಂಜಿನ್ ಮೇಲೆ ಡ್ರೋನ್ ಸ್ಫೋಟಗೊಂಡಿದೆ.

ಪೆಟ್ರೋಲ್ ಬಂಕ್, ಟ್ರಕ್‌ಗಳಿಗೆ ಹಾನಿ: ಗಡಿ ಪ್ರದೇಶದ ರೈಲ್ವೆ ಹಳಿಗಳ ಬಳಿಯಿದ್ದ ಪೆಟ್ರೋಲ್ ಬಂಕ್ ಸಂಕೀರ್ಣ ಹಾಗೂ ಸರಕು ಸಾಗಣೆ ಟ್ರಕ್‌ಗಳು ಬೆಂಕಿಗೆ ಆಹುತಿಯಾಗಿವೆ.

ಪುಟಿನ್ ವಿರುದ್ಧ ಜಾನ್ಸನ್ ಕಿಡಿ: ಈ ದಾಳಿಯನ್ನು ಕ್ರೂರ ಮತ್ತು ಅರ್ಥಹೀನ ಕೃತ್ಯ ಎಂದು ಜಾನ್ಸನ್ ಕರೆದಿದ್ದಾರೆ. ಯೂರೋಪ್ ಮತ್ತು ಬ್ರಿಟನ್ ಬ್ಯಾಂಕ್‌ಗಳಲ್ಲಿ ಫ್ರೀಜ್ ಮಾಡಲಾಗಿರುವ ರಷ್ಯಾದ ಶತಕೋಟಿ ಡಾಲರ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಉಕ್ರೇನ್ ರಕ್ಷಣೆಗೆ ಶಸ್ತ್ರಾಸ್ತ್ರ ಒದಗಿಸಲು ಬಳಸಬೇಕೆಂದು ಆಗ್ರಹಿಸಿದ್ದಾರೆ.

ಪೋಸ್ಟ್​

ನ್ಯಾಟೋ (NATO) ಗಡಿಯಿಂದ ಕೇವಲ 2 ಕಿ.ಮೀ ದೂರ: ಈ ದಾಳಿಯು ಪೋಲೆಂಡ್ ಗಡಿಯಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ. ಪೋಲೆಂಡ್ ನ್ಯಾಟೋ ಸದಸ್ಯ ರಾಷ್ಟ್ರವಾಗಿರುವುದರಿಂದ, ಗಡಿಯ ಇಷ್ಟು ಹತ್ತಿರದಲ್ಲಿ ರಷ್ಯಾ ನಡೆಸುತ್ತಿರುವ ದಾಳಿಗಳು ಯುದ್ಧವನ್ನು ಮತ್ತಷ್ಟು ವಿಸ್ತರಿಸುವ ಅಪಾಯವನ್ನು ಹೆಚ್ಚಿಸಿವೆ ಎಂದು ಪೋಲೆಂಡ್ ವಿದೇಶಾಂಗ ಸಚಿವ ರಾಡೋಸ್ಲಾವ್ ಸಿಕೋರ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ.

ಝೆಲೆನ್‌ಸ್ಕಿ ಆಕ್ರೋಶ: ನಾಗರಿಕರು ಸಂಚರಿಸುವ ರೈಲ್ವೆ ಜಾಲ ಹಾಗೂ ಇಂಧನ ಘಟಕಗಳ ಮೇಲೆಯೇ ಮಾಸ್ಕೋ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಖಂಡಿಸಿದ್ದು, ಪಶ್ಚಿಮ ದೇಶಗಳು ಉಕ್ರೇನ್‌ಗೆ ತಕ್ಷಣವೇ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸಬೇಕೆಂದು ಮನವಿ ಮಾಡಿದ್ದಾರೆ.

ಉಕ್ರೇನ್ ರೈಲ್ವೆಯ ತ್ವರಿತ ಸ್ಪಂದನೆ: ದಾಳಿಯ ಮುನ್ಸೂಚನೆ ಸಿಕ್ಕ ತಕ್ಷಣವೇ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಉಕ್ರೇನ್ ರೈಲ್ವೆ ಸಿಬ್ಬಂದಿಯ ಕಾರ್ಯವೈಖರಿಯನ್ನು ವಿದೇಶಿ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!