ಮಾಸ್ಕೋ: ರಷ್ಯಾ-ಉಕ್ರೇನ್ ನಡುವಿನ ಯುದ್ಧಕ್ಕೆ (Russia Ukraine War) 1 ವರ್ಷವಾದ ಹಿನ್ನೆಲೆಯಲ್ಲಿ ರಷ್ಯಾ ಸಂಸತ್ನಲ್ಲಿ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಹೇಳಿಕೆಯು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಉಕ್ರೇನ್ ಮೇಲಿನ ಯುದ್ಧವನ್ನು ಸಮರ್ಥಿಸಿಕೊಂಡ ಪುಟಿನ್, ರಷ್ಯಾ ಮೇಲೆ ಉಕ್ರೇನ್ ಅಣ್ವಸ್ತ್ರ ದಾಳಿ ನಡೆಸಲು ಮುಂದಾಗಿತ್ತು ಎಂದು ಹೇಳಿದ್ದಾರೆ. ಕ್ರಿಮಿಯಾ ಮೇಲೆ ಉಕ್ರೇನ್ ದಾಳಿ ನಡೆಸಲು ಸಜ್ಜಾಗಿತ್ತು. ಹೀಗಾಗಿ ಉಕ್ರೇನ್ ಮೇಲೆ ನಾವು ಯುದ್ಧ ಮಾಡಬೇಕಾಯ್ತು ಎಂದು ಹೇಳಿದ್ದಾರೆ. ಯುದ್ಧ ನಿಲ್ಲಿಸುವ ಸಂಬಂಧ ರಾಜತಾಂತ್ರಿಕ ಮಾರ್ಗದಲ್ಲಿ ಚರ್ಚೆಯಾಗಿತ್ತು. ಉಕ್ರೇನ್ ಜತೆ ಹಲವು ಬಾರಿ ಮಾತುಕತೆ ನಡೆಸಲಾಗಿತ್ತು. ಆದರೆ ಉಕ್ರೇನ್ನಿಂದ ಯಾವುದೇ ಸಹಕಾರ ಸಿಗಲಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಉಕ್ರೇನ್ ದೇಶಕ್ಕೆ ಅಮೆರಿಕ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಅಮೆರಿಕ ವಿರುದ್ಧವೂ ರಷ್ಯಾ ಅಧ್ಯಕ್ಷ ಪುಟಿನ್ ಆರೋಪ ನಾವು ಉಕ್ರೇನ್ನ ಕೀವ್ ಪ್ರದೇಶದ ಮೇಲೆ ದಾಳಿ ಮಾಡಿದ್ದೇವೆ, ಆದರೆ ಜನರ ಮೇಲೆ ನಾವು ದಾಳಿ ಮಾಡಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಕ್ರೇನ್‌ಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತಷ್ಟು ಕೇರಳಿಸಿದೆ. ನಾವು ಮತ್ತೆ ಉಕ್ರೇನ್ ಮೇಲೆ ದಾಳಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ಮಾಸ್ಕೋದ ಆಕ್ರಮಣವನ್ನು ವ್ಯವಸ್ಥಿತವಾಗಿತ್ತು ಎಂದು ಹೇಳಿದ್ದಾರೆ. ಹಂತ ಹಂತವಾಗಿ, ನಾವು ಎದುರಿಸುತ್ತಿರುವ ಗುರಿಗಳನ್ನು ನಾವು ಎಚ್ಚರಿಕೆಯಿಂದ ಮತ್ತು ವ್ಯವಸ್ಥಿತವಾಗಿ ಪರಿಹರಿಸುತ್ತೇವೆ ಎಂದು ಪುಟಿನ್ ಮಿಲಿಟರಿ ಹಸ್ತಕ್ಷೇಪದ ಬಗ್ಗೆ ಹೇಳಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಭೇಟಿಯನ್ನು ಗೌಪ್ಯವಾಗಿ ಆಯೋಜಿಸಲಾಗಿತ್ತು. ಇದೀಗ ಈ ಬಗ್ಗೆ ಪುಟಿನ್ ಅವರ ಹೇಳಿಕೆ ನೀಡಿದ್ದಾರೆ. ಯುಎಸ್ ಅಧ್ಯಕ್ಷರು ಉಕ್ರೇನ್‌ಗೆ 500 ಮಿಲಿಯನ್ ತಾಜಾ ಶಸ್ತ್ರಾಸ್ತ್ರಗಳನ್ನು ಮತ್ತು ರಷ್ಯಾದ ಆಕ್ರಮಣದ ಒಂದು ವರ್ಷದ ನಂತರ ಅಚಲವಾದ ಅಮೇರಿಕ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
Published On - 3:54 pm, Tue, 21 February 23