ಮಾಸ್ಕೋ ದಾಳಿ ‘ಅನಾಗರಿಕ ಭಯೋತ್ಪಾದಕ ಕೃತ್ಯ’ ಎಂದ ಪುಟಿನ್; ಮಾರ್ಚ್ 24 ರಂದು ಶೋಕಾಚರಣೆ

ಮಾರಣಾಂತಿಕ ದಾಳಿಯ ನಂತರ ತನ್ನ ಮೊದಲ ಟೀಕೆಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್, ಮಾಸ್ಕೋದಲ್ಲಿ ನಡೆದ ದಾಳಿಯೊಂದಿಗೆ ಉಕ್ರೇನ್‌ಗೆ ಸಂಬಂಧವಿದೆ ಎಂದು ಸೂಚಿಸಿದರು. ಅವರ ಪ್ರಕಾರ, ಬಂಧಿತ ನಾಲ್ವರು ದಾಳಿಕೋರರು ಉಕ್ರೇನ್ ಕಡೆಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ದಾಳಿಕೋರರನ್ನು ರಷ್ಯಾದಿಂದ ಗಡಿ ದಾಟಿಸಲು ಉಕ್ರೇನಿಯನ್ ಕಡೆಯ ಕೆಲವರು ಸಿದ್ಧತೆ ನಡೆಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯು ತೋರಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಮಾಸ್ಕೋ ದಾಳಿ ಅನಾಗರಿಕ ಭಯೋತ್ಪಾದಕ ಕೃತ್ಯ ಎಂದ ಪುಟಿನ್; ಮಾರ್ಚ್ 24 ರಂದು ಶೋಕಾಚರಣೆ
ವ್ಲಾಡಿಮಿರ್ ಪುಟಿನ್

Updated on: Mar 23, 2024 | 8:16 PM

ಮಾಸ್ಕೋ ಮಾರ್ಚ್ 23: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶನಿವಾರ ಮಾಸ್ಕೋ (Moscow)  ಕನ್ಸರ್ಟ್ ಹಾಲ್(Moscow concert hall) ದಾಳಿಯಲ್ಲಿ 143 ಜನರು ಪ್ರಾಣ ಕಳೆದುಕೊಂಡ ಘಟನೆಯನ್ನು ‘ಅನಾಗರಿಕ ಭಯೋತ್ಪಾದಕ ಕೃತ್ಯ’ ಎಂದು ಹೇಳಿದ್ದಾರೆ. ಮಾರ್ಚ್ 24 ರಂದು ದೇಶದಲ್ಲಿ ಶೋಕಾಚರಣೆ ನಡೆಸಲಾಗುವುದು ಎಂದು ಪುಟಿನ್ ಹೇಳಿದ್ದಾರೆ. “ರಕ್ತಸಿಕ್ತ, ಬರ್ಬರ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದಂತೆ ನಾನು ಇಂದು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ, ಅದರಲ್ಲಿ ಸಾವಿಗೀಡಾದವರು ಡಜನ್​​​ಗಟ್ಟಲೆ ಮುಗ್ಧ, ಶಾಂತಿಯುತ ಜನರು. ನಾನು ಮಾರ್ಚ್ 24 ಅನ್ನು ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಘೋಷಿಸುತ್ತೇನೆ” ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆ ನೀಡುವುದಾಗಿ ರಷ್ಯಾ ಅಧ್ಯಕ್ಷರು ಪ್ರತಿಜ್ಞೆ ಮಾಡಿದರು. “ಜನರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕ ದಾಳಿಯ ಎಲ್ಲಾ ನಾಲ್ಕು ಅಪರಾಧಿಗಳನ್ನು ಬಂಧಿಸಲಾಗಿದೆ. ಭಯೋತ್ಪಾದಕರು, ಕೊಲೆಗಾರರು, ಮಾನವರಲ್ಲದವರು ಪ್ರತೀಕಾರ ಮತ್ತು ಕಠಿಣ ಶಿಕ್ಷೆಗೊಳಪಡುತ್ತಾರೆ” ಎಂದು ಪುಟಿನ್ ಹೇಳಿದ್ದಾರೆ. ದೇಶದಾದ್ಯಂತ ಹೆಚ್ಚುವರಿ ಭದ್ರತಾ ಕ್ರಮಗಳನ್ನು ವಿಧಿಸಲಾಗಿದೆ.

ಪುಟಿನ್ ಮಾತು

ಮಾಸ್ಕೋ ದಾಳಿಯಲ್ಲಿ ಉಕ್ರೇನ್ ಭಾಗಿ?

ಮಾರಣಾಂತಿಕ ದಾಳಿಯ ನಂತರ ತನ್ನ ಮೊದಲ ಟೀಕೆಗಳಲ್ಲಿ ಪುಟಿನ್, ಮಾಸ್ಕೋದಲ್ಲಿ ನಡೆದ ದಾಳಿಯೊಂದಿಗೆ ಉಕ್ರೇನ್‌ಗೆ ಸಂಬಂಧವಿದೆ ಎಂದು ಸೂಚಿಸಿದರು. ಅವರ ಪ್ರಕಾರ, ಬಂಧಿತ ನಾಲ್ವರು ದಾಳಿಕೋರರು ಉಕ್ರೇನ್ ಕಡೆಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ದಾಳಿಕೋರರನ್ನು ರಷ್ಯಾದಿಂದ ಗಡಿ ದಾಟಿಸಲು ಉಕ್ರೇನಿಯನ್ ಕಡೆಯ ಕೆಲವರು ಸಿದ್ಧತೆ ನಡೆಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯು ತೋರಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಆದಾಗ್ಯೂ, ಕೈವ್‌ನ ಮಿಲಿಟರಿ ಬೇಹುಗಾರಿಕಾ ಸಂಸ್ಥೆಯ ವಕ್ತಾರರು ಉಕ್ರೇನ್ ದಾಳಿಯಲ್ಲಿ ಭಾಗಿಯಾಗಿಲ್ಲ ಮತ್ತು ಉಕ್ರೇನಿಯನ್ ನೊಂದಿಗೆ ಸಂಬಂಧವಿದೆ ಎಂದು ಹೇಳುವುದು ವಾಸ್ತವ ಅಲ್ಲ ಎಂದಿದ್ದಾರೆ. ಇದು ಸಹಜವಾಗಿ ರಷ್ಯಾದ ವಿಶೇಷ ಸೇವೆಗಳಿಂದ ಮತ್ತೊಂದು ಸುಳ್ಳು. ಇದು ನಿಜವಲ್ಲ. ಉಕ್ರೇನ್ ಸಹಜವಾಗಿ ಈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿಲ್ಲ. ಉಕ್ರೇನ್ ರಷ್ಯಾದ ಆಕ್ರಮಣಕಾರರಿಂದ ತನ್ನ ಸಾರ್ವಭೌಮತ್ವವನ್ನು ರಕ್ಷಿಸುತ್ತಿದೆ. ತನ್ನದೇ ಆದ ಪ್ರದೇಶವನ್ನು ಸ್ವತಂತ್ರಗೊಳಿಸುತ್ತಿದೆ. ಅದು ಆಕ್ರಮಣಕಾರರ ಸೈನ್ಯ ಮತ್ತು ಮಿಲಿಟರಿ ಗುರಿಗಳೊಂದಿಗೆ ಹೋರಾಡುತ್ತಿದೆ, ನಾಗರಿಕರೊಂದಿಗೆ ಅಲ್ಲ”ಎಂದು ಉಕ್ರೇನ್ ರಕ್ಷಣಾ ಸಚಿವಾಲಯದ ಗುಪ್ತಚರ ನಿರ್ದೇಶನಾಲಯದ ಆಂಡ್ರಿ ಯುಸೊವ್ ರಾಯಿಟರ್ಸ್​​ಗೆ ತಿಳಿಸಿದರು.

ಇದನ್ನೂ ಓದಿ: Russia Concert Hall Attack: ಮಾಸ್ಕೋ ಮುಂಬೈ ಮಾದರಿ ದಾಳಿಯಲ್ಲಿ ಮೃತರ ಸಂಖ್ಯೆ 150ಕ್ಕೆ ಏರಿಕೆ

ಮಾಸ್ಕೋ ಭಯೋತ್ಪಾದಕ ದಾಳಿ

ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ ಕನ್ಸರ್ಟ್ ಸ್ಥಳಕ್ಕೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಶುಕ್ರವಾರ ಏಕಾಏಕಿ ಗುಂಡು ಹಾರಿಸಿ ಸ್ಫೋಟಕಗಳನ್ನು ಸ್ಫೋಟಿಸಿತು. ಘಟನೆಯಲ್ಲಿ ಸಾವಿನ ಸಂಖ್ಯೆ 143 ಕ್ಕೆ ಏರಿದೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಸೋವಿಯತ್ ಯುಗದ ರಾಕ್ ಗುಂಪಿನಿಂದ ಸಂಗೀತ ಕಾರ್ಯಕ್ರಮಕ್ಕಾಗಿ ಜನರು ನೆರೆದಿದ್ದಾಗ ದಾಳಿಕೋರರು ನಾಗರಿಕರನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊಗಳು ಹರಿದಾಡುತ್ತಿವೆ. ದಾಳಿಕೋರರು ಕನ್ಸರ್ಟ್ ಹಾಲ್‌ಗೆ ಬೆಂಕಿ ಹಚ್ಚುವ ಮೊದಲು ಪರದೆ ಮತ್ತು ಕುರ್ಚಿಗಳ ಮೇಲೆ ದ್ರವವನ್ನು ಸುರಿದು ಬೆಂಕಿ ಹಚ್ಚಿದರು. ಸಾಮಾಜಿಕ ಮಾಧ್ಯಮದಲ್ಲಿನ ಕೆಲವು ವಿಡಿಯೊಗಳು ಸ್ಥಳದ ಕಟ್ಟಡದಿಂದ ಹೊಗೆ ಮತ್ತು ಜ್ವಾಲೆಯ ಮೋಡಗಳು ಏರುತ್ತಿರುವುದನ್ನು ತೋರಿಸಿವೆ
ಏತನ್ಮಧ್ಯೆ, ಇಸ್ಲಾಮಿಕ್ ಸ್ಟೇಟ್ (ISIS) ಬೃಹತ್ ದಾಳಿಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದು, ಸಮರ್ಥನೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ