ಮಾಸ್ಕೊ: ನಿನ್ನೆ ರಾತ್ರಿ ಸೈಬೀರಿಯಾದಲ್ಲಿ 20 ಸಾವಿರ ಟನ್ ಡೀಸೆಲ್ ಸೋರಿಕೆಯಾಗಿದ್ದು, ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ತಕ್ಷಣ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.
ವಿದ್ಯುತ್ ಉತ್ಪಾದನಾ ಘಟಕದಲ್ಲಿ ಸಂಗ್ರಹಾಗಾರದಲ್ಲಿದ್ದ ಭಾರಿ ಪ್ರಮಾಣದ ಡೀಸೆಲ್ ಸೋರಿಕೆಯಾಗಿದೆ. ಮಾಸ್ಕೋದ ಈಶಾನ್ಯಕ್ಕೆ 2,900 ಕಿಲೋ ಮೀಟರ್ ದೂರದಲ್ಲಿರುವ ನೊರಿಲ್ಸ್ಕ್ ನಗರದಲ್ಲಿರುವ ವಿದ್ಯುತ್ ಸ್ಥಾವರದಲ್ಲಿ ಈ ಘಟನೆ ನಡೆದಿದೆ. ಅಂಬರಾಯನ ನದಿಯಲ್ಲಿ ಇಂಧನವನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಲಚರಗಳಿಗೆ ಕುತ್ತು:
ಆದಷ್ಟು ಬೇಗ ತೈಲ ಸೋರಿಕೆಯ ಪರಿಣಾಮಗಳನ್ನ ಕಡಿಮೆ ಮಾಡಲು ಅಧಿಕಾರಿಗಳಿಗೆ ಪುಟಿನ್ ಆದೇಶಿಸಿದ್ದಾರೆ. ಆದ್ರೆ ವಿಶ್ವ ವನ್ಯಜೀವಿ ನಿಧಿಯ ರಷ್ಯಾ ಕಾರ್ಯಾಚರಣೆಯ ಪ್ರಕಾರ ಏನಿಲ್ಲಾಂದ್ರೂ ನದಿಯಲ್ಲಿರುವ ಮೀನುಗಳಿಗೆ ಹಾಗೂ ಅಪಾರ ಪ್ರಮಾಣ ಜಲಚರ ಪ್ರಾಣಿಗಳಿಗೆ ಹಾನಿಯಾಗಲಿದೆ. ಸುಮಾರ 13 ಮಿಲಿಯನ್ ರೂಪಾಯಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
Published On - 12:08 pm, Thu, 4 June 20