AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಮಾರಿ ಕೊರೊನಾದಿಂದ ವೇಶ್ಯೆಯರ ಭವಿಷ್ಯಕ್ಕೂ ಕುತ್ತು..!

ಕೊರೊನಾ ವೈರಸ್​ನಿಂದಾಗಿ ವೇಶ್ಯಾವೃತ್ತಿಗೂ ಸಂಕಷ್ಟ ಎದುರಾಗಿದೆಯಂತೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರೋದ್ರಿಂದ ವಿಶ್ವದೆಲ್ಲೆಡೆ ವೈಶ್ಯಾವೃತ್ತಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ, ಈ ವೃತ್ತಿಯನ್ನೇ ನಂಬಿಕೊಂಡಿದ್ದವರ ಬದುಕು ಬೀದಿಗೆ ಬಂದಿದೆಯಂತೆ. ಕಳೆದ 6 ತಿಂಗಳಿನಿಂದ ವೇಶ್ಯಾವೃತ್ತಿಯಲ್ಲಿಲ್ಲ. ಗ್ರಾಹಕರು ಕೇವಲ ಫೋನ್​ನಲ್ಲಿ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಹಣ ಸಂಪಾದನೆ ಆಗ್ತಿಲ್ಲ ಅಂತಾ ಆಸ್ಟ್ರೇಲಿಯಾದಲ್ಲಿ ವೇಶ್ಯೆಯರು ಅಳಲು ತೋಡಿಕೊಳ್ತಿದ್ದಾರೆ. ಚೀನಾ ವಿಮಾನಗಳಿಗೆ ನಿರ್ಬಂಧ: ಕೊರೊನಾ ಬಂದಾಗಿನಿಂದ ಚೀನಾ ಮೇಲೆ ಎಗರೆಗರಿ ಬೀಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡ್ರ್ಯಾಗನ್ ನಾಡಿನ ವಿರುದ್ಧ ದ್ವೇಷ ಕಾರುತ್ತಲೇ […]

ಮಹಾಮಾರಿ ಕೊರೊನಾದಿಂದ ವೇಶ್ಯೆಯರ ಭವಿಷ್ಯಕ್ಕೂ ಕುತ್ತು..!
ಸಾಧು ಶ್ರೀನಾಥ್​
| Updated By: |

Updated on:Jun 04, 2020 | 7:49 PM

Share

ಕೊರೊನಾ ವೈರಸ್​ನಿಂದಾಗಿ ವೇಶ್ಯಾವೃತ್ತಿಗೂ ಸಂಕಷ್ಟ ಎದುರಾಗಿದೆಯಂತೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರೋದ್ರಿಂದ ವಿಶ್ವದೆಲ್ಲೆಡೆ ವೈಶ್ಯಾವೃತ್ತಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ, ಈ ವೃತ್ತಿಯನ್ನೇ ನಂಬಿಕೊಂಡಿದ್ದವರ ಬದುಕು ಬೀದಿಗೆ ಬಂದಿದೆಯಂತೆ. ಕಳೆದ 6 ತಿಂಗಳಿನಿಂದ ವೇಶ್ಯಾವೃತ್ತಿಯಲ್ಲಿಲ್ಲ. ಗ್ರಾಹಕರು ಕೇವಲ ಫೋನ್​ನಲ್ಲಿ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಹಣ ಸಂಪಾದನೆ ಆಗ್ತಿಲ್ಲ ಅಂತಾ ಆಸ್ಟ್ರೇಲಿಯಾದಲ್ಲಿ ವೇಶ್ಯೆಯರು ಅಳಲು ತೋಡಿಕೊಳ್ತಿದ್ದಾರೆ.

ಚೀನಾ ವಿಮಾನಗಳಿಗೆ ನಿರ್ಬಂಧ: ಕೊರೊನಾ ಬಂದಾಗಿನಿಂದ ಚೀನಾ ಮೇಲೆ ಎಗರೆಗರಿ ಬೀಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡ್ರ್ಯಾಗನ್ ನಾಡಿನ ವಿರುದ್ಧ ದ್ವೇಷ ಕಾರುತ್ತಲೇ ಇದ್ದಾರೆ. ಚೀನಾ ಏರ್​ಲೈನ್ಸ್​ ಅಮೆರಿಕ ಪ್ರವೇಶಿಸುವುದಕ್ಕ ನಿರ್ಬಂಧ ವಿಧಿಸಿದ್ದಾರೆ. ಅಮೆರಿಕ ವಿಮಾನಯಾನ ಜೂನ್ 1 ರಿಂದಲೇ ಆರಂಭಗೊಳಿಸಲು ನಿರ್ಧರಿಸಿತ್ತು. ಆದ್ರೆ, ಚೀನಾ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ, ಅಮೆರಿಕ ಚೀನಾ ವಿಮಾನಗಳಿಗೆ ಕಡ್ಡಾಯವಾಗಿ ನಿರ್ಬಂಧ ವಿಧಿಸಿದೆ.

ಗಡಿ ನಿಷೇಧ ತೆರವು: ಕೊರೊನಾ ಲಾಕ್​ಡೌನ್​ನಿಂದಾಗಿ ನೆರೆ ಹೊರೆ ರಾಷ್ಟ್ರಗಳ ಗಡಿ ಬಂದ್ ಮಾಡಿದ್ದ ಆಸ್ಟ್ರೀಯಾ, ತನ್ನ ಗಡಿಯನ್ನ ತೆರೆದಿದೆ. ಆದ್ರೆ, ಕೊರೊನಾ ಸೋಂಕು ಹೆಚ್ಚಿರುವ ಕಾರಣ, ಇಟಲಿ ಗಡಿ ಭಾಗವನ್ನ ಮಾತ್ರ ಇನ್ನೂ ಬಂದ್ ಮಾಡಲಾಗಿದೆ ಅಂತಾ ಆಸ್ಟ್ರಿಯಾ ಆಡಳಿತ ಹೇಳಿದೆ. ಆಸ್ಟ್ರಿಯಾದಲ್ಲಿ ಈವರೆಗೂ 16,759 ಜನರಿಗೆ ಸೋಂಕು ತಗುಲಿದ್ರೆ, 669 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾದಿಂದ ವಿಶ್ವವೇ ‘ಕ್ಯಾಸ್​ಲೆಸ್’..! ಕೊರೊನಾದಿಂದಾಗಿ ಇಡೀ ಜಗತ್ತೇ ಕ್ಯಾಸ್​ಲೆಸ್ ಆಗುವತ್ತಾ ದಾಪುಗಾಲಿಡ್ತಿದೆ. ಹೌದು, ದಿನ ನಿತ್ಯ ಹಣದ ಓಡಾಟದಿಂದಲೇ, ವ್ಯಾಪಾರ ವಹಿವಾಟು ನಡೆಯುತ್ತೆ. ಆದ್ರೆ, ಹಣ ವರ್ಗಾವಣೆಯಿಂದಲೂ ಕೊರೊನಾ ಸೋಂಕು ಹರಡುವ ಭೀತಿ ಇದೆ. ಹೀಗಾಗಿ, ಯುರೋಪ್​ನಲ್ಲಿ ಕ್ಯಾಸ್​ಲೆಸ್​ ವ್ಯವಹಾರ ಹೆಚ್ಚಾಗಿ ಬಳಸಲಾಗುತ್ತಿದೆಯಂತೆ. ಅಂಗಡಿಗಳಿಂದ ಹಿಡಿದು ದೊಡ್ಡ ಮಟ್ಟದ ಮಾಲ್​ಗಳ ವರೆಗೂ ಡಿಜಿಟಲ್ ಪೇಮೆಂಟ್​ಗೆ ಆದ್ಯತೆ ನೀಡಲಾಗ್ತಿದೆ.

ಕತಾರ್ ವಿಮಾನಗಳಿಗೆ ನಿರ್ಬಂಧ: ಕತಾರ್​ಗೆ ವಿಮಾನ ಹಾರಾಟಕ್ಕೆ ಗ್ರೀಸ್ ನಿರ್ಬಂಧ ಹೇರಿದೆ. ಕತಾರ್​ನಿಂದ ಬಂದ ವಿಮಾನದಲ್ಲಿ 12 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಹೀಗಾಗಿ, ದೋಹಾದಿಂದ ಯಾರೂ ಬರದಂತೆ ಮಾಡಲು, ಕತಾರ್ ವಿಮಾನಗಳಿಗೆ ನಿರ್ಬಂಧ ಹೇರಿದೆ. ಗ್ರೀಸ್​ನಲ್ಲಿ ಅತಿ ಕಡಿಮೆ ಕೊರೊನಾ ಸೋಂಕಿತರಿದ್ದಾರೆ. ಕೇವಲ 2,937 ಜನರಿಗೆ ಸೋಂಕು ತಗುಲಿದ್ರೆ, 179 ಜನರು ಮೃತಪಟ್ಟಿದ್ದಾರೆ.

ಸ್ಲಂಗಳಲ್ಲೂ ಹೆಚ್ಚಿದ ತಪಾಸಣೆ: ಬ್ರೆಜಿಲ್​ನಲ್ಲಿ ಕೊರೊನಾ ವೈರಸ್​ನಿಂದಾಗಿ ಜನರು ಬದುಕುದೇ ದುಸ್ಸಾಹಸವೆಂಬಾಂತಾಗಿದೆ. ಸೋಂಕಿನ ಸಂಖ್ಯೆ ದಿನೇ ದಿನೆ ಹೆಚ್ಚಾಗ್ತಿರೋದ್ರಿಂದ ಕೊವಿಡ್ ಟೆಸ್ಟ್ ಪ್ರಮಾಣವನ್ನ ಬ್ರೆಜಿಲ್ ಸರ್ಕಾರ ಹೆಚ್ಚಿಸಿದೆ. ಹೀಗಾಗಿ, ರಾಜಧಾನಿ ಸಾಹೋಪೌಲೋದ ಸ್ಲಂಗಳಿಗೂ ವೈದ್ಯರ ತಂಡ ಭೇಟಿ ಕೊಡ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಖುದ್ದು ಭೇಟಿ ನೀಡಿ ತಪಾಸಣೆ ನಡೆಸ್ತಿದ್ದು, ಸೋಂಕಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

‘ಕ್ಯೂಬಾ’ದಲ್ಲೇ ಪ್ರವಾಸಿಗರು ಲಾಕ್: ಕೊರೊನಾ ವೈರಸ್​ ಅಬ್ಬರದಿಂದಾಗಿ ವಿಶ್ವದೆಲ್ಲೆಡೆ ವಿಮಾನಯಾನ ಹಾರಾಟವನ್ನ ಬಂದ್ ಮಾಡಲಾಗಿದೆ. ಹೀಗಾಗಿ, ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರು ಇರುವಲ್ಲೇ ಲಾಕ್ ಆಗಿದ್ದಾರೆ. ಕ್ಯೂಬಾದಲ್ಲಿ ನೂರಕ್ಕೂ ಅಧಿಕ ಪ್ರವಾಸಿಕರು ಹವಾನಾ ಬೀಚ್ ಬಳಿಯೇ ಉಳಿದುಕೊಂಡಿದ್ದು, ಇನ್ನೂ ತಮ್ಮ ತಾಯ್ನಾಡಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕೊರೊನಾ ವೈರಸ್​ನಿಂದ ದೇಶದಲ್ಲಿ ಹೇರಲಾಗಿರುವ ನಿರ್ಬಂಧದಿಂದ್ ಪ್ರವಾಸಿಗರನ್ನ ಇಲ್ಲೇ ಕಟ್ಟಿ ಹಾಕಿದಂತಾಗಿದೆ.

ಕ್ಯಾನ್ಸ್ ಚಿತ್ರೋತ್ಸವ ರದ್ದು..! ಕಳೆದ 76 ವರ್ಷಗಳಿಂದ ಜಗತ್ತಿನ ಸಿನಿರಂಗವನ್ನ ಒಂದೆಡೆ ಸೇರಿಸುತ್ತಿದ್ದ ಕ್ಯಾನ್ಸ್ ಚಿತ್ರೋತ್ಸವಕ್ಕೂ ಕೊರೊನಾ ವೈರಸ್ ಮುಳ್ಳಾಗಿದೆ. ಹೀಗಾಗಿ, ಇದೇ ಮೊದಲ ಬಾರಿಗೆ ಕ್ಯಾನ್ಸ್ ಚಿತ್ರೋತ್ಸವ ರದ್ದಾಗಿರುವುದಾಗಿ, ಕ್ಯಾನ್ಸ್ ಚಿತ್ರೋತ್ಸವದ ನಿರ್ದೇಶಕ ಥಿರ್ರೀ ಫ್ರಿಮಾಕ್ಸ್ ಹೇಳಿದ್ರು. ಆದರೂ ಚಿತ್ರೋತ್ಸವಕ್ಕೆ ಬಂದಿದ್ದ 2,067 ಚಿತ್ರಗಳ ಪೈಕಿ 56 ಸಿನಿಮಾಗಳು ಆಯ್ಕೆಯಾಗಿರೋದಾಗಿ ಹೇಳಿದ್ರು.

ಪಾಕಿಸ್ತಾನದಲ್ಲೂ ವೈರಸ್ ಟೆನ್ಷನ್: ಪಾಕಿಸ್ತಾನದಲ್ಲಿ ಆರಂಭದ ದಿನಗಳಲ್ಲಿ ಅಷ್ಟೇನೂ ಹಾವಳಿ ಕೊಡದ ಕೊರೊನಾ ವೈರಸ್, ಈಗ ಹೆಜ್ಜೆ ಹೆಜ್ಜೆಗೂ ಆತಂಕವನ್ನ ಸೃಷ್ಟಿಸಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 80 ಸಾವಿರ ದಾಟಿದೆ. ಇದರ ಬೆನ್ನಲ್ಲೇ, ನಿನ್ನೆ ಒಂದೇ ದಿನ 4,132 ಜನರಿಗೆ ಸೋಂಕು ತಗುಲಿದೆ. ಸಿಂಧ್ ಪ್ರಾಂತ್ಯದಲ್ಲೇ ಅತಿ ಹೆಚ್ಚು ಅಂದ್ರೆ 31 ಸಾವಿರ ಕೇಸ್​ಗಳು ಪತ್ತೆಯಾಗಿವೆ.

Published On - 6:08 pm, Thu, 4 June 20