ಪುರುಷ ಕೋಶಗಳಿಂದ (Male Cells) ಅಂಡಾಣುವನ್ನು (Female eggs) ಉತ್ಪಾದಿಸುವ ಮೂಲಕ ವಿಜ್ಞಾನಿಗಳು ಇಬ್ಬರು ಜೈವಿಕ ತಂದೆಗಳಿರುವ ಇಲಿಗಳನ್ನು ಸೃಷ್ಟಿಸಿದ್ದಾರೆ. ಅಂದರೆ ಸಂಶೋಧಕರು ಗಂಡು ಇಲಿಗಳ ಜೀವಕೋಶಗಳಿಂದ ಅಂಡಾಣುಗಳನ್ನು ತಯಾರಿಸಿ, ಅದನ್ನು ಹೆಣ್ಣು ಇಲಿಗಳಿಗೆ ಅಳವಡಿಸಿದ್ದಾರೆ. ಇದೀಗ ಈ ಹೆಣ್ಣು ಇಲಿ ಆರೋಗ್ಯಕರ ಇಲಿಗಳಿಗೆ(Mouse) ಜನ್ಮ ನೀಡಿದೆ. ಅಂಡಾಣುಗಳು ತೋರಿಕೆಯಲ್ಲಿ ಆರೋಗ್ಯಕರ, ಫಲವತ್ತಾದ ಸಂತತಿಯಾಗಿ ಬೆಳೆಯಬಹುದು ಎಂದು ಈ ಪ್ರಯೋಗ ತೋರಿಸಿದರು. ಇದು ಮಾನವರಲ್ಲಿ ಸಂತಾನೋತ್ಪತ್ತಿಗೆ ಹೊಸ ದಾರಿಯನ್ನು ತೋರುವಲ್ಲಿ ಯಶಸ್ವಿಯಾಗಿದೆ.
ಮಾರ್ಚ್ 8 ರಂದು ಲಂಡನ್‌ನಲ್ಲಿ ನಡೆದ ಮಾನವ ಜೀನೋಮ್ ಎಡಿಟಿಂಗ್‌ನ ಮೂರನೇ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಘೋಷಿಸಲಾದ ಈ ಪ್ರೋಯೋಗವನ್ನು ಇನ್ನೂ ಯಾವುದೇ ರೀತಿಯಲ್ಲಿ ಅಧಿಕೃತವಾಗಿ ಪ್ರಕಟಿಸಿಲ್ಲ. ಏಕೆಂದರೆ ಈ ಪ್ರಯೋಗ ಸದ್ಯಕ್ಕೆ ಇಲಿಗಳ ಮೇಲೆ ಮಾತ್ರ ಮಾಡಲು ಸಾಧ್ಯ, ಮಾನವರ ಮೇಲೆ ಬಳಸುವಷ್ಟು ಇನ್ನು ಪರಿಷ್ಕೃತವಾಗಿಲ್ಲ. ಈ ಪ್ರಯೋಗ ಬಂಜೆತನದಂತ ತೀವ್ರ ಸಮಸ್ಯೆಗೆ ಚಿಕಿತ್ಸೆ ಪಡೆಯಲು ದಾರಿ ಮಾಡಿಕೊಡುತ್ತದೆ, ಜೊತೆಗೆ ಸಲಿಂಗ ದಂಪತಿಗಳು ಭವಿಷ್ಯದಲ್ಲಿ ಒಟ್ಟಿಗೆ ಜೈವಿಕ ಮಗುವನ್ನು ಹೊಂದಲು ಸಾಧ್ಯವಾಗುವ ನಿರೀಕ್ಷೆಯನ್ನು ಹೆಚ್ಚಿಸುತ್ತದೆ.
“ಪುರುಷ ಕೋಶಗಳಿಂದ ದೃಢವಾದ ಅಂಡಾಣುಗಳನ್ನು ತಯಾರಿಸಿ ಅದರಿಂದ ಸಸ್ತನಿಗಳನ್ನೂ ಸೃಷ್ಟಿಸುವ ಮೊದಲ ಪ್ರಕರಣ ಇದಾಗಿದೆ” ಎಂದು ಜಪಾನ್‌ನ ಕ್ಯುಶು ವಿಶ್ವವಿದ್ಯಾನಿಲಯದ ಕಟ್ಸುಹಿಕೊ ಹಯಾಶಿ ಹೇಳಿದರು. ವಿಶ್ವದಲ್ಲೇ ಲ್ಯಾಬ್ನಲ್ಲಿ ಬೆಳೆದ ಅಂಡಾಣು ಮತ್ತು ವೀರ್ಯ ಕ್ಷೇತ್ರದಲ್ಲಿ ಈ ಪ್ರಯೋಗ ಮೊದಲನೆಯದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ಸಂಶೋಧಕರು ವರ್ಷಗಳಿಂದ ಈ ಸಾಧನೆಗಾಗಿ ಶ್ರಮಿಸುತ್ತಿದ್ದಾರೆ. 2018 ರಲ್ಲಿ, ಒಂದು ತಂಡವು ಇಬ್ಬರು ಗಂಡು ಅಥವಾ ಇಬ್ಬರು ಹೆಣ್ಣುಇಲಿಗಳಿಂದ ಮರಿಗಳನ್ನು ಉತ್ಪಾದಿಸಲು ವೀರ್ಯ ಅಥವಾ ಅಂಡಾಣುಗಳಿಂದ ಮಾಡಿದ ಭ್ರೂಣದ ಕಾಂಡಕೋಶಗಳನ್ನು ಬಳಸುವುದನ್ನು ವರದಿ ಮಾಡಿದೆ. ಎರಡು ಹೆಣ್ಣುಇಲಿಗಳ ಮರಿಗಳು ಪ್ರೌಢಾವಸ್ಥೆಗೆ ತಲುಪಿ ಆರೋಗ್ಯಕರವಾಗಿದ್ದವು. ಆದರೆ ಎರಡು ಗಂಡು ಇಲಿಗಳ ಮರಿಗಳು ಕೆಲವೇ ದಿನಗಳಲ್ಲಿ ಸಾವನಪ್ಪಿತ್ತು.
2020 ರಲ್ಲಿ, ಜಪಾನ್‌ನ ಜೀವಶಾಸ್ತ್ರಜ್ಞ ಕಟ್ಸುಹಿಕೊ ಹಯಾಶಿ ನೇತೃತ್ವದ ತಂಡವು ಲ್ಯಾಬ್ನಲ್ಲಿ ಜೀವಕೋಶಗಳು ಅಂಡಾಣುಗಳಾಗಿ ಪ್ರಬುದ್ಧವಾಗಲು ಅಗತ್ಯವಾದ ಆನುವಂಶಿಕ ಬದಲಾವಣೆಗಳನ್ನು ವಿವರಿಸಿದರು. ಮತ್ತು 2021 ರಲ್ಲಿ, ಅದೇ ಸಂಶೋಧಕರು ಆರೋಗ್ಯಕರ ಸಂತತಿಯನ್ನು ಉತ್ಪಾದಿಸುವ ಅಂಡಾಣುಗಳನ್ನು ಲ್ಯಾಬ್ನಲ್ಲಿ ತಯಾರಿಸಿದರು.
ಇದೀಗ ಹಯಾಶಿ ಮತ್ತು ಅವರ ಸಹೋದ್ಯೋಗಿಗಳು ವಯಸ್ಕ ಗಂಡು ಇಲಿಯಿಂದ ತೆಗೆದ ಕೋಶಗಳನ್ನು ಬಳಸಿಕೊಂಡು ಅಂಡಾಣುಗಳನ್ನು ರಚಿಸುವ ಪ್ರಯೋಗವನ್ನು ಮಾಡಿದ್ದಾರೆ. ಸ್ಟೆಮ್-ಸೆಲ್ ತರಹದ ಪ್ರೇರಿತ ಪ್ಲುರಿಪೊಟೆಂಟ್ ಕಾಂಡಕೋಶಗಳನ್ನು ರಚಿಸಲು ಅವರು ಈ ಪ್ರಯೋಗವನ್ನು ಮಾಡಿದ್ದಾರೆ. ಪ್ರಯೋಗದ ಸಮಯದಲ್ಲಿ ಈ ಕೋಶಗಳು ಸ್ವಯಂಪ್ರೇರಿತವಾಗಿ ತಮ್ಮ Y ಕ್ರೋಮೋಸೋಮ್‌ಗಳನ್ನು ಕಳೆದುಕೊಳ್ಳುತ್ತವೆ. (ಮಾನವರಲ್ಲಿ ಇರುವಂತೆ, ಗಂಡು ಇಲಿಗಳ ಜೀವಕೋಶಗಳು ವಿಶಿಷ್ಟವಾಗಿ ಒಂದು X ಮತ್ತು ಒಂದು Y ಕ್ರೋಮೋಸೋಮ್ ಅನ್ನು ಹೊಂದಿರುತ್ತವೆ.) ನಂತರ ಸಂಶೋಧಕರು ಜೀವಕೋಶಗಳನ್ನು ರಿವರ್ಸಿನ್ ಮಾಡಿದಾಗ, ವಿಜ್ಞಾನಿಗಳು ನಂತರ ಜೀವಕೋಶಗಳಿಗೆ ರಿವರ್ಸಿನ್ ಎಂಬ ಸಂಯುಕ್ತದೊಂದಿಗೆ ಚಿಕಿತ್ಸೆ ನೀಡಿದರು. ಇದು X ಕ್ರೋಮೋಸೋಮ್‌ನ ಎರಡು ನಕಲುಗಳೊಂದಿಗೆ ಹೆಣ್ಣಿನ ಜೀವಕೋಶಗಳನ್ನು ಹುಡುಕಿತು.
ಇದನ್ನೂ ಓದಿ: ಕ್ಸಿ ಜಿನ್ಪಿಂಗ್ ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆ
ಅಲ್ಲಿಂದ, ತಂಡವು ಅಂಡಾಣುಗಳನ್ನು ರೂಪಿಸಲು ಅಗತ್ಯವಾದ ಆನುವಂಶಿಕ ಸಂಕೇತಗಳೊಂದಿಗೆ ಪ್ಲುರಿಪೊಟೆಂಟ್ ಕಾಂಡಕೋಶಗಳನ್ನು ಒದಗಿಸಿತು. ನಂತರ ಅವರು ಇಲಿಯ ವೀರ್ಯವನ್ನು ಬಳಸಿಕೊಂಡು ಅಂಡಾಣುಗಳನ್ನು ಫಲವತ್ತಾಗಿಸಿದರು ಮತ್ತು ಪರಿಣಾಮವಾಗಿ ಭ್ರೂಣಗಳನ್ನು ಹೆಣ್ಣು ಇಲಿಯ ಗರ್ಭಾಶಯಕ್ಕೆ ವರ್ಗಾಯಿಸಿದರು.
ಈ ಸಂದರ್ಭದಲ್ಲಿ ಭ್ರೂಣ ಬದುಕುಳಿಯುವ ಪ್ರಮಾಣ ಕಡಿಮೆ ಇತ್ತು. 630 ವರ್ಗಾವಣೆಗೊಂಡ ಭ್ರೂಣಗಳಲ್ಲಿ, ಕೇವಲ 7 ಮರಿಗಳಾಗಿ ಅಭಿವೃದ್ಧಿ ಹೊಂದಿದವು. ಆದರೆ ಮರಿಗಳು ಆರೋಗ್ಯವಾಗಿ ಬೆಳೆದವು ಎಂದು ಹಯಾಶಿ ಸಭೆಯಲ್ಲಿ ಹೇಳಿದರು.
Published On - 11:11 am, Fri, 10 March 23