Sign In

By signing in or creating an account, you agree with Associated Broadcasting Company's Terms & Conditions and Privacy Policy.

China President XI Jinping: ಕ್ಸಿ ಜಿನ್​ಪಿಂಗ್ ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆ

ಕ್ಸಿ ಜಿನ್‌ಪಿಂಗ್ ಅವರು ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ 14 ನೇ ಸಭೆಯಲ್ಲಿ, ಕ್ಸಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

China President XI Jinping: ಕ್ಸಿ ಜಿನ್​ಪಿಂಗ್ ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆ
ಕ್ಸಿ ಜಿನ್​ಪಿಂಗ್
Follow us
ನಯನಾ ರಾಜೀವ್
|

Updated on: Mar 10, 2023 | 9:32 AM

ಕ್ಸಿ ಜಿನ್‌ಪಿಂಗ್ ಅವರು ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ 14 ನೇ ಸಭೆಯಲ್ಲಿ, ಕ್ಸಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಏರಿದಾಗ ಕ್ಸಿ ಜಿನ್​ ಪಿಂಗ್ ಅವರು ವಿಶ್ವಾಸಘಾತುಕ, ಭ್ರಷ್ಟ ಅಥವಾ ನಿಷ್ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟ ಅಧಿಕಾರಿಗಳನ್ನು ತೆಗೆದುಹಾಕಲು ಬೃಹತ್ ಅಭಿಯಾನವನ್ನು ಕೈಗೊಂಡಿದ್ದರು. ಆ ಖಾಲಿ ಸ್ಥಾನಗಳಲ್ಲಿ ಮಿತ್ರರನ್ನು ತುಂಬುವ ಮೂಲಕ ಜಿನ್‌ಪಿಂಗ್ ತಮ್ಮ ಶಕ್ತಿಯ ನೆಲೆಯನ್ನು ನಿರ್ಮಿಸಿದರು.

ರಾಯಿಟರ್ಸ್ ವರದಿಯ ಪ್ರಕಾರ, ಜಿನ್‌ಪಿಂಗ್ ಅವರ ಅಧಿಕಾರಾವಧಿಯಲ್ಲಿ ಇದುವರೆಗೆ 47 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳನ್ನು ತನಿಖೆ ಮಾಡಲಾಗಿದೆ, ಇದು ಅವರ ನಿಯಮಿತ ಅಧಿಕಾರದ ಹಿಡಿತವನ್ನು ಕಾಪಾಡಿಕೊಳ್ಳುವುದು ಸವಾಲಾಗಿ ಕಂಡುಬಂದಿದೆ. ಈ ಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಅವರ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಚೀನಾದಲ್ಲಿ ಅವರ ಶಕ್ತಿ ಮತ್ತಷ್ಟು ಬಲಗೊಳ್ಳುತ್ತದೆ.

ಅವರನ್ನು ಆಧುನಿಕ ಚೀನಾದ ರಾಷ್ಟ್ರದ ಮುಖ್ಯಸ್ಥರನ್ನಾಗಿ ಮಾಡಿತು. ಇದರರ್ಥ ಕ್ಸಿ ಅವರು ತಮ್ಮ 70 ರ ಹರೆಯದವರಾಗಿದ್ದರೂ  ಉತ್ತಮವಾಗಿ ಆಡಳಿತ ನಡೆಸಬಲ್ಲರು ಮತ್ತು ಆ ಸ್ಥಾನಕ್ಕೆ ಬೇರೊಬ್ಬ ಉತ್ತಮ ನಾಯಕ ಸಿಗುವವರೆಗೂ ಅವರ ಅಧಿಕಾರಾವಧಿ ಮುಂದುವರೆಯಲಿದೆ.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯು ನಿಧಾನಗತಿಯಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಅವರ ಮೂರನೇ ಅವಧಿಯು ಪ್ರಾರಂಭವಾಗುತ್ತದೆ. ಆದಾಗ್ಯೂ, ಈ ವರ್ಷ ಚೀನಾ ತನ್ನ ರಕ್ಷಣೆಗಾಗಿ 2023 ರಲ್ಲಿ 18 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ . ಇದು ಭಾರತದ ರಕ್ಷಣಾ ಬಜೆಟ್‌ಗಿಂತ ಸುಮಾರು 3 ಪಟ್ಟು ಹೆಚ್ಚು. ಅದೇ ಸಮಯದಲ್ಲಿ, 2023 ರ ಚೀನಾದ ಆರ್ಥಿಕ ಬೆಳವಣಿಗೆಯ ಗುರಿಯನ್ನು ಶೇಕಡಾ 5 ಕ್ಕೆ ಇರಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ