Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan History Book: ಮುಸ್ಲಿಮರು ಹಿಂದೂಗಳು, ಬ್ರಿಟಿಷರನ್ನು ಎಂದೂ ನಂಬಲು ಸಾಧ್ಯವಿಲ್ಲ: ಪಾಕಿಸ್ತಾನದ ಇತಿಹಾಸ ಪುಸ್ತಕದಲ್ಲಿ ಭಾರತ, ಹಿಂದೂ ವಿರೋಧಿ ಸಾಲುಗಳು

ಪಾಕಿಸ್ತಾನದ ಶಾಲೆಗಳಲ್ಲಿ ಭಾರತದ ಬಗ್ಗೆ ವಿಷಬೀಜ ಬಿತ್ತುವಂತಹ ಕೆಲಸವಾಗುತ್ತಿದೆ ಎನ್ನುವ ವಿಚಾರ ತಿಳಿದುಬಂದಿದೆ. ಪಾಕಿಸ್ತಾನದ ಶಾಲೆಗಳಲ್ಲಿ ಭಾರತ ಹಾಗೂ ಹಿಂದೂಗಳ ವಿರುದ್ಧ ಇಲ್ಲಸಲ್ಲದ್ದನ್ನು ಬೋಧಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

Pakistan History Book: ಮುಸ್ಲಿಮರು ಹಿಂದೂಗಳು, ಬ್ರಿಟಿಷರನ್ನು ಎಂದೂ ನಂಬಲು ಸಾಧ್ಯವಿಲ್ಲ: ಪಾಕಿಸ್ತಾನದ ಇತಿಹಾಸ ಪುಸ್ತಕದಲ್ಲಿ ಭಾರತ, ಹಿಂದೂ ವಿರೋಧಿ ಸಾಲುಗಳು
ಸಾಂದರ್ಭಿಕ ಚಿತ್ರ( ಪಾಕಿಸ್ತಾನದ ಶಾಲೆ)Image Credit source: Muslim Hands
Follow us
ನಯನಾ ರಾಜೀವ್
|

Updated on: Mar 10, 2023 | 10:51 AM

ಪಾಕಿಸ್ತಾನದ ಶಾಲೆಗಳಲ್ಲಿ ಭಾರತದ ಬಗ್ಗೆ ವಿಷಬೀಜ ಬಿತ್ತುವಂತಹ ಕೆಲಸವಾಗುತ್ತಿದೆ ಎನ್ನುವ ವಿಚಾರ ತಿಳಿದುಬಂದಿದೆ. ಪಾಕಿಸ್ತಾನದ ಶಾಲೆಗಳಲ್ಲಿ ಭಾರತ ಹಾಗೂ ಹಿಂದೂಗಳ ವಿರುದ್ಧ ಇಲ್ಲಸಲ್ಲದ್ದನ್ನು ಬೋಧಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.  8ನೇ ತರಗತಿ ಇತಿಹಾಸ ಪುಟದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಕೊಡಿಸಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಶ್ರಮಿಸಿದ ಮಹಾತ್ಮಾಗಾಂಧಿಯನ್ನು ಹಿಂದೂ ನಾಯಕ ಎಂದು ಬಿಂಬಿಸಿದ್ದಾರೆ.  ಈ ಕುರಿತು ನ್ಯೂಸ್​ 18 ವರದಿ ಮಾಡಿದೆ.

ಗಾಂಧಿ ಅವರ ಯುವ ಬೆಂಬಲಿಗರು ಕಾಂಗ್ರೆಸ್​ನ ಉಸ್ತುವಾರಿ ವಹಿಸಿಕೊಂಡು ಹಿಂದೂಗಳನ್ನು ರಕ್ಷಿಸುತ್ತಾ, ಮುಸ್ಲಿಮರ ಹಕ್ಕುಗಳನ್ನು ಕಡೆಗಣಿಸಿ, ದ್ವೇಷ, ಅಸೂಯೆ, ಸಂಕುಚಿತ ಮನೋಭಾವವನ್ನು ಸೃಷ್ಟಿಸಿದರು ಎಂದು ಬರೆಯಲಾಗಿದೆ. ಮುಸ್ಲಿಂ ಹಕ್ಕುಗಳ ಹೋರಾಟದಲ್ಲಿ ಹಿಂದೂಗಳನ್ನು ನಂಬಲು ಸಾಧ್ಯವಾಗದಿರುವ ಬಗ್ಗೆ ಪುಸ್ತಕದಲ್ಲಿ ಹಲವಾರು ನಿದರ್ಶನಗಳಿವೆ.

ಹಿಂದೂ ಬಹುಸಂಖ್ಯಾತರಿಂದ ಯಾವುದೇ ನ್ಯಾಯೋಚಿತ ಮಾರ್ಗವನ್ನು ನಿರೀಕ್ಷಿಸಲು ಬಂಗಾಳದ ವಿಭಜನೆಯು ಮುಸ್ಲಿಮರಿಗೆ ಆ ಅರಿವನ್ನು ತಂದಿತು. ಆದ್ದರಿಂದ ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಮುಸ್ಲಿಂ ನಾಯಕರು ತಮ್ಮ ಸಮುದಾಯಕ್ಕೆ ಪ್ರತ್ಯೇಕ ಮತದಾನ ಯೋಜನೆಯನ್ನು ರೂಪಿಸಿದರು ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: Non Bailable Warrant: ಇಮ್ರಾನ್ ಖಾನ್ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಪಾಕ್ ಕೋರ್ಟ್

ಪಾಕಿಸ್ತಾನದ ಹುಟ್ಟಿನ ಬಗ್ಗೆ ಮಾತನಾಡುವ ಪ್ರತಿಯೊಂದು ಅಧ್ಯಾಯದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಬಹುಪಾಲು ಭಾಗವಾಗಿದ್ದ ಮುಸ್ಲಿಮರನ್ನು ಹಿಂದೂಗಳಿಂದ ಪ್ರತ್ಯೇಕ ಭಾಗವಾಗಿ ಉಲ್ಲೇಖಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಮುಸ್ಲಿಮರು ಹಿಂದೂಗಳನ್ನು ಅಥವಾ ಬ್ರಿಟಿಷರನ್ನು ನಂಬಲು ಸಾಧ್ಯವಿಲ್ಲ. ಇದು ಅರಿವಾದ ಬಳಿಕ ಖಿಲಾಫತ್ ಚಳುವಳಿಯು ಭಾರತದ ಮುಸ್ಲಿಮರಿಗೆ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ತಂದಿತು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವೆಂದು ಹೇಳಿಕೊಂಡಿತು. ಆದರೆ ವಿಭಜನೆಯ ಪ್ರಶ್ನೆಯಲ್ಲಿ ಅದು ಮತೀಯ ಹಿಂದೂ ಸಂಘಟನೆಯಂತೆ ವರ್ತಿಸಿತು ಎಂದು ಬರೆಯಲಾಗಿದೆ.

9 ನೇ ತರಗತಿಯ ಪಠ್ಯದಲ್ಲಿ ನ್ಯಾಷನಲ್ ಕಾಂಗ್ರೆಸ್ ಉರ್ದುವನ್ನು ಹಿಂದಿಗೆ ಬದಲಿಸಲು ಕ್ರಮ ಕೈಗೊಂಡಿತು. ಮತ್ತು ಅಧಿಕೃತ ಗೀತೆಯಾಗಿ ಒಂದೇ ಮಾತರಂ ಅನ್ನು ಪರಿಚಯಿಸಲು ಪ್ರಯತ್ನಿಸಿತು. ಈ ಹಾಡು ಮುಸ್ಲಿಂ ವಿರೋಧಿ ಹಿನ್ನೆಲೆಯನ್ನು ಹೊಂದಿತ್ತು ಮತ್ತು ದ್ವೇಷವನ್ನು ಕೆರಳಿಸಿತು. ಪಾಕಿಸ್ತಾನದಲ್ಲಿ ವಿಭಜನೆಯ ನಂತರ ಹಿಂದೂಗಳು ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಗುಣಮಟ್ಟದ ಆಹಾರ ನೀಡಲಾಯಿತು ಎಂದು ಬರೆಯಲಾಗಿದೆ.

ಭಾರತದ ಸರ್ಕಾರ ಸಾಮೂಹಿಕ ಹಿಂಸಾಚಾರವನ್ನು ನಡೆಸಿತು. ಮುಸ್ಲಿಂ ಹಕ್ಕುಗಳ ಹೋರಾಟದಲ್ಲಿ ಎಂದಿಗೂ ಹಿಂದೂಗಳನ್ನು ನಂಬಲು ಸಾಧ್ಯವಾಗದಿರುವ ಬಗ್ಗೆ ಪುಸ್ತಕದಲ್ಲಿ ಹಲವಾರು ನಿದರ್ಶನಗಳಿವೆ. ಬಂಗಾಳದ ವಿಭಜನೆಯು ಮುಸ್ಲಿಮರಿಗೆ ಆ ಅರಿವನ್ನು ತಂದಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ
Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು
Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು
ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ
ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ
Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು
Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು
ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ
ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ
ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?
ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?