Pakistani Intruder: ಪಂಜಾಬ್ನ ಅಮೃತಸರದಲ್ಲಿ ಪಾಕಿಸ್ತಾನಿ ಒಳನುಸುಳುಕೋರನ ಬಂಧನ
ಗಡಿ ಭದ್ರತಾ ಪಡೆ(BSF)ಯು ಪಂಜಾಬ್ನ ಅಮೃತಸರದ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಬಂಧಿಸಿದೆ.
ಗಡಿ ಭದ್ರತಾ ಪಡೆ(BSF)ಯು ಪಂಜಾಬ್ನ ಅಮೃತಸರದ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಬಂಧಿಸಿದೆ. ಅಮೃತಸರ ಸೆಕ್ಟರ್ನ ರಜತಾಲ್ನಲ್ಲಿರುವ ಬಾರ್ಡರ್ ಔಟ್ ಪೋಸ್ಟ್ನಲ್ಲಿ ಮಾರ್ಚ್ 8ರ ಮಧ್ಯರಾತ್ರಿ ಪಾಕಿಸ್ತಾನದ ಕಡೆಯಿಂದ ಒಳನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ. ಕರ್ತವ್ಯ ನಿರತ ಬಿಎಸ್ಎಫ್ ಪಡೆಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತನನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯ ವೇಳೆಗೆ ಅವರು ಬಾಂಗ್ಲಾದೇಶದ ಪ್ರಜೆ ಎಂದು ತಿಳಿಸಿದ್ದಾರೆ, ಅವರ ವಿಚಾರಣೆಯನ್ನು ಮುಂದುವರೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಮತ್ತಷ್ಟು ಓದಿ: 2022ರಲ್ಲಿ ಅಮೃತಸರದಲ್ಲಿ ಹೊಡೆದುರುಳಿಸಿದ ಪಾಕ್ ಡ್ರೋನ್ ಬಂದಿದ್ದು ಚೀನಾದಿಂದ: ಬಿಎಸ್ಎಫ್
2021ರಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಜತೆಗಿನ ಅಂತಾರಾಷ್ಟ್ರೀಯ ಗಡಿಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಒಳನುಸುಳುವಿಕೆ ಯತ್ನಗಳು ನಡೆದಿತ್ತು.
2020ರಲ್ಲಿ 1252, 2019ರಲ್ಲಿ 1408, 2018ರಲ್ಲಿ 1173 ಹಾಗೂ 2017ರಲ್ಲಿ 1251 ಒಳನುಸುಳುಕೋರರನ್ನು ಬಂಧಿಸಲಾಗಿದೆ. ಇದರ ಜತೆಗೆ 2020ರಲ್ಲಿ 16, 2019ರಲ್ಲಿ 6 ಹಾಗೂ 2018ರಲ್ಲಿ 8 ಹಾಗೂ 2017ರಲ್ಲಿ 11 ಮಂದಿ ಒಳನುಸುಳುಕೋರರನ್ನು ಹತ್ಯೆಗೈಯಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ