ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸದಸ್ಯರು ನಕಲಿ ಸುದ್ದಿ ಹರಡುತ್ತಿದ್ದಾರೆ: ತಮಿಳುನಾಡು ಸಿಎಂ ಸ್ಟಾಲಿನ್
ಬಿಜೆಪಿ ವಿರುದ್ಧ ಒಗ್ಗೂಡಿಕೊಂಡು, ರಾಷ್ಟ್ರಮಟ್ಟದ ಮೈತ್ರಿಯ ಅಗತ್ಯತೆಯ ಬಗ್ಗೆ ನಾನು ಮಾತನಾಡಿದ ಮರುದಿನವೇ ವದಂತಿ ಹರಡಿದೆ ಎಂದರೆ ಇದರ ಹಿಂದಿನ ಸಂಚು ನೀವು ಅರ್ಥ ಮಾಡಿಕೊಳ್ಳಬೇಕು. ಕೆಲವು ಜನರು ನಕಲಿ ವಿಡಿಯೊಗಳನ್ನು ಮಾಡಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ.
ಬಿಹಾರಿ (Bihar) ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು (Tamil nadu) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(MK Stalin) ‘ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸದಸ್ಯರು’ ನಕಲಿ ಸುದ್ದಿ ‘ಹರಡುತ್ತಿದ್ದಾರೆ ಎಂದು ಗುರುವಾರ ಆರೋಪಿಸಿದ್ದಾರೆ. 2024ರ ಚುನಾವಣೆಗಿಂತ ಮುಂಚೆ ಬಿಜೆಪಿ ವಿರುದ್ಧ ಒಂದಾಗಲು ಕರೆ ನೀಡಿದ ಒಂದು ದಿನದ ನಂತರ ತಮ್ಮ ಸರ್ಕಾರದ ವಿರುದ್ಧ ‘ರಾಜಕೀಯ ಪ್ರೇರಿತ ಸಂಚು ಮಾಡಿ ಈ ರೀತಿ ವದಂತಿ ಹರಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.ತನ್ನ ಹುಟ್ಟುಹಬ್ಬದ ಆಚರಣೆಯ ಸಮಯದಲ್ಲಿ ಹಲವರು ನೀವು ವಿಪಕ್ಷದ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದು ಹೇಳಿದ್ದನ್ನು ಸ್ಟಾಲಿನ್ ನೆನಪಿಸಿಕೊಂಡಿದ್ದಾರೆ. ಇಂದು ತಮ್ಮ ರಾಜ್ಯವು ಭಾರತದಾದ್ಯಂತದ ಜನರಿಗೆ ನೆಲೆಯಾಗಿದೆ. ತಮಿಳರು ಸಹೋದರತ್ವವನ್ನು ಪ್ರೀತಿಸುತ್ತಾರೆ … ಇದು ಇಲ್ಲಿನ ಉತ್ತರ ರಾಜ್ಯ ಸಹೋದರರಿಗೆ ಗೊತ್ತು ಎಂದಿದ್ದಾರೆ.
“ಬಿಜೆಪಿ ವಿರುದ್ಧ ಒಗ್ಗೂಡಿಕೊಂಡು, ರಾಷ್ಟ್ರಮಟ್ಟದ ಮೈತ್ರಿಯ ಅಗತ್ಯತೆಯ ಬಗ್ಗೆ ನಾನು ಮಾತನಾಡಿದ ಮರುದಿನವೇ ವದಂತಿ ಹರಡಿದೆ ಎಂದರೆ ಇದರ ಹಿಂದಿನ ಸಂಚು ನೀವು ಅರ್ಥ ಮಾಡಿಕೊಳ್ಳಬೇಕು. ಕೆಲವು ಜನರು ನಕಲಿ ವಿಡಿಯೊಗಳನ್ನು ಮಾಡಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ. ದುರುದ್ದೇಶದಿಂದ ಉತ್ತರ ಭಾರತದ ಬಿಜೆಪಿ ಸದಸ್ಯರು ಇದನ್ನು ಮಾಡಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
ನಾನು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ. ಬಿಹಾರಿ ವಲಸೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ನಿಯೋಗ ಪರಿಶೀಲಿಸಿದ ನಂತರ ನಂತರದ ಸರ್ಕಾರವು ‘ಪೂರ್ಣ ತೃಪ್ತಿಯನ್ನು’ ವ್ಯಕ್ತಪಡಿಸಿದೆ ಎಂದಿದ್ದಾರೆ ಸ್ಟಾಲಿನ್.
ವಲಸೆ ಕಾರ್ಮಿಕರನ್ನು ಭೇಟಿಯಾದ ತಮಿಳುನಾಡು ಸರ್ಕಾರ
ಬಿಹಾರಿ ಕಾರ್ಮಿಕರ ಮೇಲಿನ ದಾಳಿಯ ನಕಲಿ ವಿಡಿಯೊ ಬಗ್ಗೆ ಆತಂಕ ಮತ್ತು ಭೀತಿಯನ್ನು ನಿವಾರಿಸಲು ಮಂಗಳವಾರ ಸ್ಟಾಲಿನ್ ಕೆಲವು ವಲಸೆ ಸಮುದಾಯಗಳಿಗೆ ಭೇಟಿ ನೀಡಿದ್ದಾರೆ.ಅದೇ ದಿನ, ಹಿರಿಯ ಡಿಎಂಕೆ ನಾಯಕ, ಲೋಕಸಭೆಯಲ್ಲಿ ಅವರ ಪಕ್ಷದ ನಾಯಕ ಟಿಆರ್ ಬಾಲು ಅವರಿಗೆ ನಿತೀಶ್ ಕುಮಾರ್ ಕರೆ ಮಾಡಿ ವಲಸೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ಭರವಸೆ ನೀಡುವಂತೆ ಹೇಳಿದ್ದಾರೆ. ಸ್ಟಾಲಿನ್ ದೂರವಾಣಿಯಲ್ಲಿ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ.
ಏನಿದು ಪ್ರಕರಣ?
ತಮಿಳುನಾಡಿನಲ್ಲಿ ಉತ್ತರ ರಾಜ್ಯಗಳಿಂದ ಬಂದ ಕಾರ್ಮಿಕರ ಸಂಖ್ಯೆ ಹೆಚ್ಚು ಇದೆ. ಈ ವಲಸೆ ಕಾರ್ಮಿಕರು ವರು ಜವಳಿ ಮತ್ತು ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಬಿಹಾರಿ ವಲಸಿಗರ ಮೇಲೆ ಭಯಾನಕ ದಾಳಿ ಮಾಡಲಾಗಿದೆ ಎಂದು ಹೇಳುವ ನಾಲ್ಕು ವಿಡಿಯೊಗಳು ಮಾರ್ಚ್ 1ರಿಂದ ಹರಿದಾಡಿದೆ. ರಾಜ್ಯದಲ್ಲಿ ಅಹಿತಕರ ಘಟನೆಗಳು ಸಂಭವಿಸುವುದನ್ನು ತಡೆಯಲು ತಮಿಳುನಾಡು ಸರ್ಕಾರ ವಲಸಿಗರನ್ನು ತಲುಪಿತು ಮತ್ತು ವದಂತಿಗಳನ್ನು ಹರಡುವವರ ವಿರುದ್ಧ ಕಾರ್ಯನಿರ್ವಹಿಸಿತು. ವಲಸೆಗಾರರ ನಡುವೆ ಅಶಾಂತಿ ಸೃಷ್ಟಿಸಲು ಜಾರ್ಖಂಡ್ ಮೂಲದ ವ್ಯಕ್ತಿ ಮತ್ತು ಅವರ ಸ್ನೇಹಿತರು ಇಂಥಾ ವಿಡಿಯೊ ತಯಾರಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಬಿಹಾರ, ತಮಿಳುನಾಡು ಪೊಲೀಸರಿಂದ ಕ್ರಮ
ಎರಡೂ ರಾಜ್ಯಗಳಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.’ಬಿಹಾರದಲ್ಲಿ ಯಾರೋ’ ನಕಲಿ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ವಲಸಿಗರ ಎರಡು ಗುಂಪುಗಳ ನಡುವೆ ಮತ್ತು ಕೊಯಮತ್ತೂರಿನ ಸ್ಥಳೀಯರ ನಡುವೆ ನಡೆದ ಜಗಳದ ವಿಡಿಯೊ ಹರಿಬಿಡಲಾಗಿತ್ತು ಎಂದು ತಮಿಳುನಾಡು ಹಿರಿಯ ಪೊಲೀಸ್ ಅಧಿಕಾರಿ ಬಾಬು ಸುದ್ದಿಗಾರರಿಗೆ ಹೇಳಿದ್ದಾರೆ. ವಲಸೆ ಕೆಲಸಗಾರನನ್ನು ಕೊಲ್ಲಲಾಗಿದೆ ಎಂಬ ವರದಿ ಸುಳ್ಳು, ಅದೊಂದು ಆತ್ಮಹತ್ಯೆ ಪ್ರಕರಣ ಆಗಿತ್ತು ಎಂದು ಬಿಹಾರ ಪೊಲೀಸರ ಹೆಚ್ಚುವರಿ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗಂಗಾವರ್ ಹೇಳಿದ್ದಾರೆ.
ಈ ವಾರ ಬಿಹಾರ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ ಇತರರ ವಿರುದ್ಧ ತಪ್ಪು ಮಾಹಿತಿಯನ್ನು ಹರಡಿದ್ದಕಾಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ.ತಮಿಳುನಾಡಿನಲ್ಲಿ ಪೊಲೀಸರು ಬಿಜೆಪಿಗೆ ಸೇರಿದ ವ್ಯಕ್ತಿ ಮತ್ತು ಸಂಸ್ಥೆಗಳು ಸೇರಿದಂತೆ 12 ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿಯ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಮತ್ತು ಪಕ್ಷದ ಟ್ವಿಟರ್ ಹ್ಯಾಂಡಲ್ ವಿರುದ್ಧ ಇನ್ನೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೆಹಲಿ ಹೈಕೋರ್ಟ್‌ನಿಂದ ಮಂಗಳವಾರ ಬಂಧನ ಪೂರ್ವ ಜಾಮೀನು ಪಡೆದ ಉತ್ತರ ಪ್ರದೇಶದ ಬಿಜೆಪಿ ನಾಯಕ ಪ್ರಶಾಂತ್ ಉಮ್ರಾವೊ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Thu, 9 March 23